Wednesday, 17th July 2019

Recent News

ತಾಯಿಯನ್ನು ನೋಡಿಕೊಳ್ಳಲಾಗದೇ ಬೀದಿಯಲ್ಲಿ ಬಿಟ್ಟು ಹೋದ ಮಕ್ಕಳು

– ಸ್ಥಳೀಯರಿಂದ ಮಕ್ಕಳಿಗೆ ಫುಲ್ ಕ್ಲಾಸ್

ದಾವಣಗೆರೆ: ಹೆತ್ತ ತಾಯಿಯನ್ನು ನೋಡಿಕೊಳ್ಳಲಾಗದೇ ಇಬ್ಬರು ಮಕ್ಕಳು ತಮ್ಮ ತಾಯಿಯನ್ನೇ ಬೀದಿಯಲ್ಲಿ ಬಿಟ್ಟು ಹೋದ ಮನಕಲುಕುವ ದೃಶ್ಯ ನಗರದಲ್ಲಿ ನಡೆದಿದೆ.

ದಾವಣಗೆರೆಯ ವಿನೋಬಾ ನಗರದ ಯಲ್ಲಮ್ಮ ದೇವಾಸ್ಥಾನದ ಮುಂಭಾಗ ವೃದ್ಧೆಯನ್ನು ಪಾಪಿ ಮಕ್ಕಳು ಆಟೋದಲ್ಲಿ ಬಂದು ಬಿಟ್ಟು ಹೋಗಿದ್ದಾರೆ. ವೃದ್ಧೆಯ ಗೋಳಾಟ ನೋಡಲಾಗದೇ ಸ್ಥಳೀಯರು ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.

80 ವರ್ಷದ ಶಾಂತಮ್ಮ ಬೀದಿಗೆ ಬಿದ್ದ ವೃದ್ಧೆ. ಶಾಂತಮ್ಮನಿಗೆ ಗೌರಮ್ಮ ಹಾಗೂ ಪ್ರೇಮಕ್ಕ ಎನ್ನುವ ಇಬ್ಬರು ಮಕ್ಕಳಿದ್ದು, ತಾಯಿಯನ್ನು ಕೊನೆ ಕಾಲದಲ್ಲಿ ನೋಡಿಕೊಳ್ಳಲಾಗದೆ ಯಲ್ಲಮ್ಮ ದೇವಸ್ಥಾನದ ಮುಂಭಾಗ ಬಂದು ಬಿಟ್ಟು ಪರಾರಿಯಾಗಿದ್ದಾರೆ.

ರಸ್ತೆ ಬದಿಯಲ್ಲಿ ವೃದ್ಧೆ ಮಳೆ ಗಾಳಿಯಲ್ಲಿ ಇರುವುದನ್ನು ನೋಡಿದ ಸ್ಥಳೀಯರು ಕೆಲ ಕಾಲ ಆಶ್ರಯ ನೀಡಿದ್ದಾರೆ. ಅಲ್ಲದೆ ಬಡಾವಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ವೃದ್ಧೆಯನ್ನು ವಿಚಾರಿಸಿದಾಗ ತಮಗೆ ಇಬ್ಬರು ಮಕ್ಕಳಿದ್ದು ಒಬ್ಬರು ವಿನೋಬಾ ನಗರದಲ್ಲಿ ಇದ್ದಾರೆ. ಮತ್ತೊಬ್ಬರು ಕೆಟಿಜೆ ನಗರದಲ್ಲಿ ವಾಸವಾಗಿದ್ದಾರೆ ಎಂದು ಹೇಳಿದ್ದಾಳೆ.

ನೋಡಿಕೊಳ್ಳಲಾಗದೆ ಒಬ್ಬರ ಮೇಲೊಬ್ಬರು ಹೇಳಿಕೊಂಡು ಊಟ ನೀಡದೆ ಕಿರುಕುಳ ಕೊಡುತ್ತಿದ್ದರು. ಆದರೆ ಇಂದು ಆಟೋದಲ್ಲಿ ಕರೆತಂದು ಬಿಟ್ಟು ಹೋಗಿದ್ದಾರೆ ಎಂದು ವೃದ್ಧೆ ಕಣ್ಣೀರುಹಾಕಿದ್ದಾರೆ.

ವೃದ್ಧೆಯ ನೋವನ್ನು ಅರಿತ ಪೊಲೀಸರು ಮಕ್ಕಳ ವಿಳಾಸ ಪತ್ತೆ ಮಾಡಿದ್ದಾರೆ. ಈ ಮೂಲಕ ಇಬ್ಬರಿಗೂ ಎಚ್ಚರಿಕೆ ನೀಡಿ ಶಾಂತಮ್ಮ ಅವರನ್ನು ನೋಡಿಕೊಳ್ಳುವಂತೆ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಸ್ಥಳೀಯರು ಇಬ್ಬರು ಮಕ್ಕಳಿಗೆ ಛೀಮಾರಿ ಹಾಕಿದ್ದು, ಮತ್ತೊಮ್ಮೆ ಈ ರೀತಿ ವೃದ್ಧೆಯನ್ನು ಹೊರಗೆ ಹಾಕಿದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published. Required fields are marked *