Connect with us

Crime

8ನೇ ತರಗತಿ ಓದುತ್ತಿರೋ ಬಾಲಕನ ಜೊತೆ ಮೂರು ಮಕ್ಕಳ ತಾಯಿ ಎಸ್ಕೇಪ್!

Published

on

– ಜಾತ್ರೆಗೆ ಹೋದವರು ಪರಾರಿ

ಲಕ್ನೋ: ಅಚ್ಚರಿಯ ಘಟನೆಯೆಂಬಂತೆ 8ನೇ ತರಗತಿಯ ಬಾಲಕನೊಂದಿಗೆ ಮೂರು ಮಕ್ಕಳ ತಾಯಿ ಪರಾರಿಯಾಗಿರುವ ಘಟನೆ ಉತ್ತರಪ್ರದೇಶದ ಗೊರಖ್‍ಪುರದಲ್ಲಿ ನಡೆದಿದೆ.

ಮಹಾಶಿವರಾತ್ರಿಯಂದು ಮಹಿಳೆ, ವಿದ್ಯಾರ್ಥಿ ಜೊತೆ ಜಾತ್ರೆಗೆ ತೆರಳಿದ್ದಾಳೆ. ಹೀಗೆ ಹೋದವಳು ಮನೆಗೆ ವಾಪಸ್ ಆಗಲೇ ಇಲ್ಲ. ಹೀಗಾಗಿ ಅಂದೇ ಇವರಿಬ್ಬರು ಓಡಿ ಹೋಗಿದ್ದಾರೆ ಹೇಳಲಾಗುತ್ತಿದೆ.

ಮರುದಿನ ರಾತ್ರಿವರೆಗೂ ಮಹಿಳೆಯನ್ನು ಕಾದ ಆಕೆಯ ಮನೆಯವರು ಬಳಿಕ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಳೆದ 1 ವರ್ಷದಿಂದ ಇಬ್ಬರ ಮಧ್ಯೆ ಸಂಬಂಧವಿತ್ತು. ಆದರೆ ಇಬ್ಬರ ಮಧ್ಯೆ ಸಾಕಷ್ಟು ವಯಸ್ಸಿನ ಅಂತರವಿದ್ದ ಕಾರಣ ಯಾರಿಗೂ ಅವರ ಮೇಲೆ ಅನುಮಾನ ಬಂದಿರಲಿಲ್ಲ.

ಇತ್ತ ಬಾಲಕನ ಪೋಷಕರು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಗೆ ಈಗಾಗಲೇ ಮೂವರು ಮಕ್ಕಳಿದ್ದು, ಕೆಲ ದಿನಗಳಿಂದ ಪತ್ನಿ ವರ್ತನೆಯಲ್ಲಿ ಬದಲಾವಣೆ ಕಂಡಿದ್ದೆ. ಆದರೆ ಆಕೆ ಈ ರೀತಿ ಮಾಡುತ್ತಾಳೆ ಎಂದು ನಾನು ಅಂದುಕೊಂಡಿರಲಿಲ್ಲ ಅಂತ ಪತಿ ಪೊಲಿಸರ ಬಳಿ ಹೇಳಿದ್ದಾನೆ.

ಸದ್ಯ ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆದರೆ ಈವರೆಗೂ ಮಹಿಳೆ ಮತ್ತು ಬಾಲಕ ಎಲ್ಲಿದ್ದಾರೆ ಎಂಬ ಮಾಹಿತಿ ಸಿಕ್ಕಿಲ್ಲ.

Click to comment

Leave a Reply

Your email address will not be published. Required fields are marked *