ಪ್ರಿಯಕರ, ಸೊಸೆಯಿದ್ದ ರೂಮಿಗೆ ಅತ್ತೆ ಲಾಕ್- ಹಿಂಬಾಗಿಲಿನಿಂದ ಇಬ್ಬರೂ ಎಸ್ಕೇಪ್

ಚೆನ್ನೈ: ತನ್ನ ಪ್ರಿಯಕರನ ಜೊತೆ ಇದ್ದಾಗಲೇ ಸೊಸೆಯನ್ನು ಅತ್ತೆ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಬಳಿಕ ಇಬ್ಬರ ಸಂಬಂಧವನ್ನು ಬಹಿರಂಗಪಡಿಸಬೇಕು ಎಂದು ರೂಮಿನಲ್ಲಿ ಕೂಡಿ ಹಾಕಿದ್ದಾರೆ. ಆದರೆ ಈ ಬಗ್ಗೆ ಅರಿತ ಇಬ್ಬರು ಮನೆಯ ಹಿಂದಿನ ಬಾಗಿಲಿನಿಂದ ತಪ್ಪಿಸಿಕೊಂಡಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ತಮಿಳುನಾಡಿನ ತಿರುಮಾಯಂನಲ್ಲಿ ಈ ಘಟನೆ ನಡೆದಿದೆ. ಪುದುಕ್ಕೋಟೈ ಜಿಲ್ಲೆಯ ಕೋವಿಲ್ಪತ್ತಿ ಗ್ರಾಮದ ಸುಲೋಚನಾ (32) ಅದೇ ಗ್ರಾಮದ ಮೆಲ್ನಿಲೈಪಟ್ಟಿ ವ್ಯಕ್ತಿಯೊಂದಿಗೆ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದಳು. ಸುಲೋಚನಾ ಪತಿ ಸಿಂಗಾಪುರದಲ್ಲಿ ಕೆಲಸ ಮಾಡುತ್ತಿದ್ದನು. ಮೂರು ತಿಂಗಳ ಹಿಂದೆ ಸುಲೋಚನಾ ಪತಿ ಮನೆಗೆ ಬಂದಿದ್ದು, ಪತ್ನಿಗಾಗಿ ಒಂದು ಮನೆಯನ್ನು ನಿರ್ಮಿಸಿ ವಿದೇಶಕ್ಕೆ ಹಿಂದಿರುಗಿದ್ದನು.

ಅಷ್ಟೇ ಅಲ್ಲದೆ ಪತಿ ಪ್ರತಿ ತಿಂಗಳು ತನ್ನ ಪತ್ನಿಗಾಗಿ ಹಣವನ್ನು ಕಳುಹಿಸುತ್ತಿದ್ದನು. ಆದರೆ ಸುಲೋಚನಾ, ಕಟ್ಟಿಯವಾಯಲ್ ಪ್ರದೇಶದ ಮಾಣಿಕ್ಯ ಎಂಬವನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಸೊಸೆಯ ಅಕ್ರಮ ಸಂಬಂಧದ ಬಗ್ಗೆ ಅತ್ತೆಗೆ ಅನುಮಾನ ಮೂಡಿದೆ. ಮಾಣಿಕ್ಯ ಪ್ರತಿದಿನ ರಾತ್ರಿ ಸುಲೋಚನಾ ಮನೆಗೆ ಬರುತ್ತಿದ್ದು, ಮುಂಜಾನೆ ಬೇಗನೇ ಎದ್ದು ಹಿಂದಿರುಗುತ್ತಿರುವುದು ಅತ್ತೆಯ ಗಮನಕ್ಕೆ ಬಂದಿದೆ.

ಕೊನೆಗೆ ಅತ್ತೆ ತನ್ನ ಸೊಸೆ ಮಾಣಿಕ್ಯನ ಜೊತೆ ಇದ್ದಾಗಲೇ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ನಂತರ ಅವರಿಬ್ಬರ ಸಂಬಂಧವನ್ನು ನೆರೆಹೊರೆಯವರ ಮುಂದೆ ಬಹಿರಂಗ ಪಡಿಸಿ ಅವಮಾನಿಸಲು ನಿರ್ಧರಿಸಿದ್ದರು. ಅದರಂತೆಯೇ ಅವರಿಗೆ ತಿಳಿಯದಂತೆ ಇಬ್ಬರು ರೂಮಿನಲ್ಲಿ ಇರುವಾಗಲೇ ಬಾಗಿಲನ್ನು ಲಾಕ್ ಮಾಡಿಕೊಂಡಿದ್ದಾರೆ. ಇತ್ತ ಅತ್ತೆ ನೆರೆಹೊರೆಯವರನ್ನು ಕರೆದುಕೊಂಡು ಬರಲು ಹೋದಾಗ ಬಾಗಿಲು ಲಾಕ್ ಆಗಿರುವ ಬಗ್ಗೆ ತಿಳಿದು ಸುಲೋಚನ ಮತ್ತು ಮಾಣಿಕ್ಯ ಮನೆಯ ಹಿಂದಿನ ಬಾಗಿಲಿನಿಂದ ತಪ್ಪಿಸಿಕೊಂಡಿದ್ದಾರೆ.

ಸದ್ಯಕ್ಕೆ ಅತ್ತೆ ಇಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಚಾರಣೆಯನ್ನು ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *