Connect with us

Crime

ತಾಯಿ ಜೊತೆ ಮಲಗಿದ್ದ ಕಂದಮ್ಮನನ್ನ ಅಪಹರಿಸಿ ರೇಪ್‍ಗೈದ 20ರ ಯುವಕ!

Published

on

ಮುಂಬೈ: ಮೂರೂವರೆ ವರ್ಷದ ಪುಟ್ಟ ಕಂದಮ್ಮನ ಮೇಲೆ ಕಾಮುಕ ಯುವಕನೊಬ್ಬ ಅತ್ಯಾಚಾರವೆಸಗಿದ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಕಂದಮ್ಮ ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣದ ಸೇತುವೆ ಕೆಳಗೆ ಫುಟ್‍ಪಾತ್ ನಲ್ಲಿ ತನ್ನ ತಾಯಿ ಜೊತೆ ನಿದ್ದೆಗೆ ಜಾರಿತ್ತು. ಇದೇ ಸಮಯವನ್ನು ಉಪಯೋಗಿಸಿಕೊಂಡ 20 ವರ್ಷದ ಕಾಮುಕ ಆಕೆಯನ್ನು ಅಪಹರಿಸಿ ಬಳಿಕ ಅತ್ಯಾಚಾರವೆಸಗಿದ್ದಾನೆ.

ಬಾಲಕಿ ಹಾಗೂ ಆಕೆಯ ತಾಯಿ ಫುಟ್ ಪಾತ್ ನಲ್ಲೇ ಜೀವನ ಸಾಗಿಸುತ್ತಿದ್ದಾರೆ. ಆರೋಪಿ ಅದೇ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಫುಡ್ ಸ್ಟಾಲ್ ಹಾಕಿದ್ದಾನೆ. ಸೋಮವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಯುವಕ ಬಾಲಕಿಯನ್ನು ಆಕೆಯ ತಾಯಿ ಬಳಿಯಿಂದ ಅಪಹರಿಸಿದ್ದಾನೆ. ಅಲ್ಲದೆ ಬೇರೆಡೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ಬೆಳಗ್ಗೆ ದಾರಿಹೋಕರು ರಕ್ತಸಿಕ್ತವಾಗಿ ಅಳುತ್ತಿರುವ ಬಾಲಕಿಯನ್ನು ನೋಡಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನಿಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಬಾಲಕಿಯನ್ನು ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಬಾಲಕಿಯ ಹೇಳಿಕೆ ಪಡೆದುಕೊಂಡ ಪೊಲೀಸರು ಸ್ಥಳೀಯ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಯುವಕನೊಬ್ಬ ಬಾಲಕಿಯನ್ನು ಆಕೆಯ ತಾಯಿ ಬಳಿಯಿಂದ ಬೇರೆಡೆ ಕರೆದೊಯ್ಯುತ್ತಿರುವುದು ಬೆಳಕಿಗೆ ಬಂದಿದೆ.

ಕೂಡಲೇ ಪೊಲೀಸರು ಯುವಕನನ್ನ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದು, ಕೆಲ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಮೈಮೇಲೆಯೂ ರಕ್ತವಿದ್ದು, ಫುಟ್ ಪಾತ್‍ನಲ್ಲಿ ಮಲಗಿದ್ದನು. ಅಲ್ಲದೆ ಸಿಸಿಟಿವಿ ದೃಶ್ಯದಲ್ಲಿದ್ದ ಬೆಡ್‍ಶೀಟ್ ಕೂಡ ಇತ್ತು. ನಂತರ ಆರೋಪಿಯನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಒಳಪಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ವಿರುದ್ಧ ಅಪಹರಣ ಹಾಗೂ ಅತ್ಯಾಚಾರದಡಿ ಪ್ರಕರಣ ದಾಖಲು ಮಾಡಲಾಗಿದೆ. ಇತ್ತ ಬಾಲಕಿಯನ್ನು ಜೆಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

Click to comment

Leave a Reply

Your email address will not be published. Required fields are marked *