Wednesday, 15th August 2018

Recent News

ಮಗಳಿಗೆ ವಿಷ ಕುಡಿಸಿ, ತಾನೂ ಸೇವಿಸಿ ಆತ್ಮಹತ್ಯೆಗೆ ಶರಣಾದ ತಾಯಿ!

ಹಾಸನ: ತಾಯಿ ಮತ್ತು ಮಗಳು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕು ಹೆಬ್ಬಾರನಹಳ್ಳಿಯಲ್ಲಿ ನಡೆದಿದೆ.

ಶಾರದಮ್ಮ(63) ಮತ್ತು ಯಶೋಧ(40) ಮೃತ ದುರ್ದೈವಿಗಳು. ಯಶೋಧ ಮದುವೆಯಾದ ಒಂದೇ ವರ್ಷಕ್ಕೆ ಗಂಡನ ಮನೆ ಬಿಟ್ಟು ತವರು ಸೇರಿದ್ದರು. ಕಳೆದ 1 ವರ್ಷದಿಂದ ಮನೋವೈಕಲ್ಯಕ್ಕೆ ತುತ್ತಾಗಿದ್ದರು. ಇದರಿಂದ ಬೇಸತ್ತು ತಾಯಿ ಮತ್ತು ಮಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಂಜುಂಡಪ್ಪ ಹಾಗೂ ಶಾರದಮ್ಮ ದಂಪತಿ ಬಡ ಕುಟುಂಬದವರಾಗಿದ್ದು, ಮಗಳ ಮದುವೆ ಮಾಡಿದ್ದರು. ಆದರೆ ಯಶೋಧಮ್ಮ ಪತಿಯ ಮನೆಯಿಂದ ದೂರವಾಗಿ ತವರು ಮನೆಯಲ್ಲಿ ಇದ್ದರು. ಬಳಿಕ ಪತಿಯಿಂದ ದೂರವಾಗಿದ್ದರಿಂದ ಯಶೋಧ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಜೊತೆಗೆ ಯಶೋಧಮ್ಮ ಮಗನೂ ಮಾನಸಿಕ ಅಸ್ವಸ್ಥನಾಗಿದ್ದನು. ಇದರಿಂದ ಶಾರದಮ್ಮ ಜಿಗುಪ್ಸೆಗೊಂಡಿದ್ದರು. ಗುರುವಾರ ಮಗಳಿಗೆ ವಿಷ ಕುಡಿಸಿ, ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಮಗಳು ಮತ್ತು ಪತ್ನಿಯನ್ನು ಕಳೆದುಕೊಂಡ ನಂಜುಂಡಪ್ಪ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *