ಮಗುವಿನ ಸಮೇತ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ!

Advertisements

ಮಂಡ್ಯ: ಮಗುವಿನ ಸಮೇತ ತಾಯಿ ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಶರಣಾದ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ಮೈಸೂರಿನ ನಿವಾಸಿ ಭಾರ್ಗವಿ (31) ಆತ್ಮಹತ್ಯೆಗೆ ಶರಣಾದ ತಾಯಿ. ದೀಕ್ಷಾ (3) ಭಾರ್ಗವಿಯ ಮಗು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗೋಸಾಯ್ ಘಾಟ್ ಬಳಿ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Advertisements

ಮೈಸೂರಿನ ಹೌಸಿಂಗ್ ಬೋರ್ಟ್ ನಿವಾಸಿಯಾದ ಭಾರ್ಗವಿಗೆ ಕೆಲಸ ಮಾಡಬೇಕೆಂಬ ಆಸೆಯಿತ್ತು. ಆದರೆ ಭಾರ್ಗವಿ ಕೆಲಸಕ್ಕೆ ಸೇರಲು ಪತಿ ಪ್ರವೀಣ್ ಕುಮಾರ್ ವಿರೋಧಿಸಿದ್ದನು. ಈ ಬಗ್ಗೆ ಸಂಬಂಧಿಕರೊಂದಿಗೂ ಭಾರ್ಗವಿ ಹೇಳಿಕೊಂಡಿದ್ದಳು. ಇದನ್ನೂ ಓದಿ: ಹಳ್ಳಿಗೆ 300 ಕೋವಿಡ್ ಲಸಿಕೆಗಳನ್ನು ಸಾಗಿಸಿದ ಡ್ರೋನ್

ಶುಕ್ರವಾರ ಬೆಳಿಗ್ಗೆ ಮಗುವನ್ನು ಕರೆದುಕೊಂಡು ಭಾರ್ಗವಿ ಮನೆ ಬಿಟ್ಟು ಹೋಗಿದ್ದಳು. ಘೋಸಾಯಿ ಘಾಟ್ ಬಳಿ ಮೊಬೈಲ್ ಹಾಗೂ ಬ್ಯಾಗ್ ಪತ್ತೆಯಾಗಿತ್ತು. ಅಗ್ನಿಶಾಮಕ ಹಾಗೂ ಪೊಲೀಸರಿಂದ ಇಂದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ನದಿಯಲ್ಲಿ ಪತ್ತೆಯಾಗಿರುವ ತಾಯಿ, ಮಗು ಶವ ಪತ್ತೆಯಾಗಿದೆ. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಪ್ಪು ಬಟ್ಟೆ ಮೇಲೆ MES ಎಂದು ಬರೆದು ಚಪ್ಪಲಿ ಏಟು ಕೊಟ್ಟ ರಾಯಣ್ಣನ ಅಭಿಮಾನಿಗಳು

Advertisements

Advertisements
Exit mobile version