ತಮಿಳು ಸೀರಿಯಲ್‌ನಿಂದ ಹೊರನಡೆದ `ಪಾರು’ ನಟಿ ಮೋಕ್ಷಿತಾ ಪೈ

Advertisements

ನ್ನಡ ಕಿರುತೆರೆ `ಪಾರು’ ಧಾರಾವಾಹಿ(Paaru Serial) ಮೂಲಕ ಮನೆಮಾತಾದ ನಟಿ ಮೋಕ್ಷಿತಾ ಪೈ ಇದೀಗ ತಮಿಳಿನ `ಮೀನಾಕ್ಷಿ ಪೊನ್ನುಂಗ’ (Meenakshi Ponnunga) ಧಾರಾವಾಹಿಯಿಂದ ಹೊರಬಂದಿದ್ದಾರೆ. ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದ ನಟಿ ಈಗ ತಮಿಳು ಸೀರಿಯಲ್‌ನಿಂದ ಹೊರನಡೆದಿದ್ದಾರೆ.

Advertisements

`ಪಾರು’ ಸೀರಿಯಲ್ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಕರಾವಳಿ ಚೆಲುವೆ ಮೋಕ್ಷಿತಾ ಪೈ (Mokshitha Pai) ತಮಿಳಿನ ಖಾಸಗಿ ವಾಹಿನಿಯಲ್ಲಿ ಮೂಡಿ ಬರುತ್ತಿದ್ದ `ಮೀನಾಕ್ಷಿ ಪೊನ್ನುಂಗ’ ಸೀರಿಯಲ್‌ನ ಮುಖ್ಯ ಪಾತ್ರಧಾರಿ ಶಕ್ತಿಯಾಗಿ ಕಾಣಿಸಿಕೊಂಡಿದ್ದರು. ಈ ಪ್ರಾಜೆಕ್ಟ್ ಮೂಲಕ ತಮಿಳಿನ ಪ್ರೇಕ್ಷಕ ವರ್ಗಕ್ಕೂ ಪಾರು ನಟಿ ಹತ್ತಿರವಾಗಿದ್ದರು. ಆದರೆ ಈಗ ಮೋಕ್ಷಿತಾ, ಈ ಧಾರಾವಾಹಿಯನ್ನ ಕೈಬಿಟ್ಟಿದ್ದಾರೆ. ಇದನ್ನೂ ಓದಿ: ಪ್ರತಿಷ್ಠಿತ ಆಭರಣ ಸಂಸ್ಥೆಯ ಬ್ರ್ಯಾಂಡ್ ಅಂಬಾಸಿಡರ್ ಸ್ಥಾನದಿಂದ ರಶ್ಮಿಕಾ ಔಟ್

Advertisements

ತಮಿಳು ಸೀರಿಯಲ್ ಮತ್ತು ʻಪಾರುʼ ಧಾರಾವಾಹಿ ಎರಡನ್ನು ನಟಿ ನಿಭಾಯಿಸುತ್ತಿದ್ದರು. ಆದರೆ ಕೆಲವು ವೈಯಕ್ತಿಕ ಕಾರಣದಿಂದ ಸೀರಿಯಲ್‌ನ ಕೈಬಿಟ್ಟಿದ್ದೇನೆ. ಶಕ್ತಿ ಪಾತ್ರ ಮತ್ತು ಈ ಧಾರಾವಾಹಿಯಲ್ಲಿ ಕೆಲಸ ಮಾಡಿದ್ದು ನಿಜಕ್ಕೂ ಅದ್ಭುತ ಅನುಭವ ನೀಡಿದೆ. ಶಕ್ತಿ ಪಾತ್ರದಲ್ಲಿ ನನ್ನ ಮೆಚ್ಚಿಕೊಂಡ ಪ್ರೇಕ್ಷಕರಿಗೆ ನನ್ನ ಧನ್ಯವಾದಗಳು ಎಂದು ನಟಿ ಪ್ರತಿಕ್ರಿಯೆ ನೀಡಿದ್ದಾರೆ.

Advertisements

ಇನ್ನೂ `ಪಾರು’ ಧಾರಾವಾಹಿ ನನ್ನ ಮೊದಲ ಸೀರಿಯಲ್ ಆಗಿದ್ದು, ಈ ಪ್ರಾಜೆಕ್ಟ್ ನನ್ನ ಆದ್ಯತೆ ಕೂಡ‌ ಎಂದು ನಟಿ ಮೋಕ್ಷಿತಾ ತಿಳಿಸಿದ್ದಾರೆ. ಇನ್ಮುಂದೆ `ಪಾರು’ ಸೀರಿಯಲ್ ಜೊತೆ ಸಿನಿಮಾಗಳತ್ತ ಕೂಡ ಗಮನ ನೀಡುತ್ತೇನೆ ಎಂದು ಮಾತನಾಡಿದ್ದಾರೆ. ಈ ವೇಳೆ `ನಿರ್ಭಯಾ 2′ ಚಿತ್ರದ ಬಗ್ಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರದಲ್ಲಿ ನಾನು ನಟಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಸದ್ಯದಲ್ಲೇ ಒಂದೊಳ್ಳೆ ಕಥೆ, ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರುತ್ತೇನೆ ಎಂದು ತಿಳಿಸಿದ್ದಾರೆ.

Live Tv

Advertisements
Exit mobile version