Sunday, 19th August 2018

Recent News

ಬೆಂಗಳೂರು ಟೆಸ್ಟ್ ನಿಂದ ಹೊರಬಿದ್ದ ವೇಗಿ ಮೊಹಮ್ಮದ್ ಶಮಿ: ಏನಿದು ಯೋ- ಯೋ ಫಿಟ್‍ನೆಸ್ ಟೆಸ್ಟ್?

ಬೆಂಗಳೂರು: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅಫ್ಘಾನ್ ವಿರುದ್ಧ ಐತಿಹಾಸಿಕ ಟೆಸ್ಟ್ ಪಂದ್ಯದಿಂದ ಕೈಬಿಡಲಾಗಿದ್ದು, ಬೆಂಗಳೂರಿನಲ್ಲಿ ನಡೆದ ಯೋ ಯೋ ಫಿಟ್‍ನೆಸ್ ಪರೀಕ್ಷೆಯಲ್ಲಿ ವಿಫಲರಾಗಿದ್ದರಿಂದ ಶಮಿ ತಂಡದಲ್ಲಿ ಅವಕಾಶ ಕಳೆದುಕೊಂಡಿದ್ದಾರೆ ಎಂದು ಆಯ್ಕೆ ಸಮಿತಿ ಮಾಹಿತಿ ನೀಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಆಯ್ಕೆ ಸಮಿತಿ, ವೇಗಿ ಮೊಹಮ್ಮದ್ ಶಮಿ ಬದಲಾಗಿ ಯುವ ವೇಗಿ ನವದೀಪ್ ಅವರ ಹೆಸರನ್ನು ಶಿಫಾರಸ್ಸು ಮಾಡಿದ್ದಾಗಿ ತಿಳಿಸಿದೆ.

ಮೊಹಮ್ಮದ್ ಶಮಿರನ್ನು ತಂಡದಿಂದ ಕೈಬಿಡುತ್ತಿದಂತೆ ಟೀಂ ಇಂಡಿಯಾ `ಎ’ ತಂಡದ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ರಜನೀಸ್ ಗುರ್ಬಾನಿ ಅವರನ್ನು ಸಹ ತರಬೇತಿಗೆ ಹಾಜರಾಗುವಂತೆ ಆಯ್ಕೆ ಸಮಿತಿ ಸೂಚಿಸಿದೆ.

ಸದ್ಯ ಆಯ್ಕೆ ಸಮಿತಿಯ ಆಹ್ವಾನದ ಮೇರೆಗೆ ಮೊಹಮ್ಮದ್ ಸಿರಾಜ್ ಹಾಗೂ ರಜನೀಸ್ ಗುರ್ಬಾನಿ ಅವರು ತರಬೇತಿಗೆ ಹಾಜರಾಗಿದ್ದು, ಇದೇ ವೇಳೆ ಉತ್ತರ ಪ್ರದೇಶದ ವೇಗಿ ಅಂಕಿತ್ ರಜಪೂತ್ ಅವರಿಗೆ ಆಹ್ವಾನ ನೀಡಿದ್ದರು ಆರೋಗ್ಯ ಸಮಸ್ಯೆಯಿಂದ ಅಭ್ಯಾಸದಲ್ಲಿ ತೊಡಗಿಕೊಂಡಿಲ್ಲ. ಉಳಿದಂತೆ ಟೀಂ ಇಂಡಿಯಾ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 14 ರಿಂದ ಆರಂಭವಾಗಲಿದೆ.

ಇದೇ ವೇಳೆ ಆಯ್ಕೆ ಸಮಿತಿ ಭಾರತದ `ಎ’ ತಂಡದ ಬ್ಯಾಟ್ಸ್‍ಮನ್ ಇಶಾನ ಕಿಶಾನ್ ರನ್ನು ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡಿಸ್ ವಿರುದ್ಧದ ಏಕದಿನ ಸರಣಿಗೆ ಆಯ್ಕೆ ಮಾಡಿದೆ. ಅಂದಹಾಗೇ ಈ ಸರಣಿಗೆ ತಮಿಳುನಾಡು ಯುವ ಬ್ಯಾಟ್ಸ್‍ಮನ್ ಸಂಜು ಸ್ಯಾಮ್ಸನ್ ರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸ್ಯಾಮ್ಸನ್ ಕೂಡ ಯೋ ಯೋ ಫಿಟ್ ನೆಸ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದರಿಂದ ಸರಣಿಯಿಂದ ಹೊರ ಉಳಿದಿದ್ದಾರೆ.

ಏನಿದು ಯೋ ಯೋ ಫಿಟ್‍ನೆಸ್ ಟೆಸ್ಟ್:
ಕ್ರಮಬದ್ಧ ಹಾಗೂ ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯ ವನ್ನು ಈ ಪರೀಕ್ಷೆಯಲ್ಲಿ ಆಟಗಾರ ತೋರಿಸಬೇಕಾಗುತ್ತದೆ. ಯೊಯೊ ಫಿಟ್‍ನೆಸ್ 20 ಮೀ ಅಳತೆಯಲ್ಲಿ ಎರಡು ಕೋನ್ ಗಳನ್ನು ನೇರವಾಗಿ ಇರಿಸಲಾಗಿರುತ್ತದೆ. ಆಟಗಾರ ಒಂದು ಲೈನ್ ನಿಂದ ಓಟವನ್ನು ಆರಂಭಿಸಬೇಕು. ಎರಡೂ ಲೈನ್ ನಲ್ಲಿಟ್ಟ ಕೋನ್ ಗಳನ್ನು ಬೀಪ್ ಧ್ವನಿ ಅನುಸರಿಸಿ ಸುತ್ತಬೇಕು. ಒಟ್ಟಾರೆ ಮೂರು ಬೀಪ್ ಧ್ವನಿ ಒಳಗಾಗಿ ಸುತ್ತಬೇಕು. ಈ ಬೀಪ್ ಸ್ಟಾರ್ಟ್, ಟರ್ನ್ ಹಾಗೂ ಫಿನಿಶ್ ಸೂಚನೆಯಾಗಿರುತ್ತದೆ. ಪ್ರತೀ ಬಾರಿ ಸುತ್ತಿದಾಗಲೂ ಬೀಪ್ ಧ್ವನಿಯ ಅಂತರ ಕಡಿಮೆಯಾಗುತ್ತ ಹೋಗುತ್ತದೆ. 2 ಬಾರಿ ಬೀಪ್ ಸಮಯದೊಳಗೆ 40 ಮೀ ಕ್ರಮಿಸಲಾಗದೇ ಹೋದರೆ ಪರೀಕ್ಷೆ ಮುಕ್ತಾಯಗೊಳ್ಳುತ್ತದೆ. ಲ್ಯಾಪ್ಸ್ ಹಾಗೂ ಓಟದ ವೇಗ ಆಧರಿಸಿ ಅಂಕ ನೀಡಿ ಆಯ್ಕೆ ಮಾಲಾಗುತ್ತದೆ.

Leave a Reply

Your email address will not be published. Required fields are marked *