ಮೋದಿ ಹುಟ್ಟುಹಬ್ಬ – ನಾಳೆ ಹುಟ್ಟುವ ಮಕ್ಕಳಿಗೆ ಚಿನ್ನದುಂಗುರ ನೀಡಲಿದೆ ಬಿಜೆಪಿ

Advertisements

ಚೆನ್ನೈ : ಸೆಪ್ಟೆಂಬರ್ 17ರಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅವರ ಹುಟ್ಟುಹಬ್ಬದ(Birthday) ಪ್ರಯುಕ್ತ ತಮಿಳುನಾಡಿನ(Tamil Nadu) ಬಿಜೆಪಿ(BJP) ನಾಳೆ ಹುಟ್ಟುವ ಮಕ್ಕಳಿಗೆ(Children) ಚಿನ್ನದ ಉಂಗುರವನ್ನು(Gold Ring) ನೀಡುವುದಾಗಿ ಘೋಷಿಸಿದೆ. ಮಾತ್ರವಲ್ಲದೇ ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬದ ಹಿನ್ನೆಲೆ 720 ಕೆ.ಜಿ ಯಷ್ಟು ಮೀನನ್ನು ವಿತರಿಸುವುದಾಗಿ ತಿಳಿಸಿದೆ.

Advertisements

ನಾಳೆ ಹುಟ್ಟುವ ಮಕ್ಕಳಿಗೆ ಚಿನ್ನದ ಉಂಗುರವನ್ನು ನೀಡಲು ಪಕ್ಷ ನಗರದ ಆರ್‌ಎಸ್‌ಆರ್‌ಎಂ ಆಸ್ಪತ್ರೆಯನ್ನು ಆಯ್ಕೆ ಮಾಡಿದೆ. ಮಕ್ಕಳಿಗೆ ನೀಡಲಾಗುವ ಪ್ರತಿ ಉಂಗುರ 2 ಗ್ರಾಂ. ನಷ್ಟು ತೂಗುತ್ತದೆ. ಇದು ಕೊಡುಗೆಯಲ್ಲ, ಬದಲಿಗೆ ಮಕ್ಕಳನ್ನು ಜಗತ್ತಿಗೆ ಸ್ವಾಗತಿಸುವ ಉದ್ದೇಶವಾಗಿದೆ ಎಂದು ಸಚಿವ ಎಲ್ ಮುರುಗನ್ ತಿಳಿಸಿದ್ದಾರೆ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡಲಿದೆ ಪತಂಜಲಿ – 5 ವರ್ಷದಲ್ಲಿ 4 IPO ಲಿಸ್ಟ್‌

Advertisements

ವರದಿಗಳ ಪ್ರಕಾರ ಸೆಪ್ಟೆಂಬರ್ 17ರಂದು ಆರ್‌ಎಸ್‌ಆರ್‌ಎಂ ಆಸ್ಪತ್ರೆಯಲ್ಲಿ 10 ರಿಂದ 17 ಮಕ್ಕಳು ಜನಿಸುವ ನಿರೀಕ್ಷೆಯಿದೆ.

ಮೀನು ವಿತರಣೆಯ ಬಗ್ಗೆ ಮಾತನಾಡಿದ ಅವರು, ಎಂ.ಕೆ ಸ್ಟಾಲಿನ್ ಅವರ ಕ್ಷೇತ್ರವನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಮೀನಿನ ಸೇವನೆಯನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಗುರಿಯಾಗಿದೆ. ನರೇಂದ್ರ ಮೋದಿ ಅವರಿಗೆ 72 ವರ್ಷವಾಗುವುದರಿಂದ 720 ಕೆ.ಜಿ ಮೀನು ವಿತರಿಸಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 2ನೇ ಅತ್ಯಂತ ಶ್ರೀಮಂತ ವ್ಯಕ್ತಿ

Advertisements

ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ದೇಶಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.

Live Tv

Advertisements