Connect with us

Latest

ನೀವಿಬ್ಬರು ಉತ್ತಮ ಪೋಷಕರಾಗುತ್ತೀರಿ – ಶುಭಕೋರಿದ ವಿರುಷ್ಕಾಗೆ ಮೋದಿ ರಿಪ್ಲೈ

Published

on

ನವದೆಹಲಿ: ನೀವಿಬ್ಬರು ಉತ್ತಮ ಪೋಷಕರಾಗುತ್ತೀರಿ ಎಂಬ ನಂಬಿಕೆ ನನಗಿದೆ ಎಂದು ಎಂದು ಪ್ರಧಾನಿ ಮೋದಿಯವರು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾಗೆ ವಿಶ್ ಮಾಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿನ್ನೆ ತಮ್ಮ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ದೇಶ ವಿದೇಶದಿಂದ ಹಲವಾರು ರಾಜಕೀಯ ನಾಯಕ, ನಟ-ನಟಿಯರು ಮತ್ತು ಕ್ರೀಡಾಪಟುಗಳು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಶುಭ ಕೋರಿದ್ದರು.

ನಿನ್ನೆ ಮೋದಿ ಅವರಿಗೆ ವಿಶ್ ಮಾಡಿದ್ದ ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ, ಹುಟ್ಟು ಹಬ್ಬದ ಶುಭಾಶಯಗಳು ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ಮೋದಿಯವರು, ಧನ್ಯವಾದಗಳು ವಿರಾಟ್ ಕೊಹ್ಲಿ. ನಾನು ಕೂಡ ನಿಮಗೆ ಮತ್ತು ಅನುಷ್ಕಾ ಶರ್ಮಾ ಅವರಿಗೆ ಶುಭಾಶಯ ಹೇಳಲು ಇಷ್ಟಪಡುತ್ತೇನೆ. ನೀವಿಬ್ಬರು ಉತ್ತಮ ಪೋಷಕರಾಗುತ್ತೀರಿ ಎಂದು ನನಗೆ ನಂಬಿಕೆ ಇದೆ ಎಂದು ಟ್ವೀಟ್ ಮಾಡಿದ್ದಾರೆ.

ಮೋದಿಯವರು ಟ್ವೀಟ್‍ಗೆ ಮತ್ತೆ ಉತ್ತರ ನೀಡಿರುವ ಕೊಹ್ಲಿಯವರು, ನಿಮ್ಮ ಶುಭ ಹಾರೈಕೆಗೆ ಧನ್ಯವಾದಗಳು ಸರ್ ಎಂದಿದ್ದರು. ನಂತರ ನಟಿ ಅನುಷ್ಕಾ ಶರ್ಮಾ ಕೂಡ ನಿಮ್ಮ ಪ್ರೀತಿಯ ಶುಭಾಶಯಕ್ಕೆ ಧನ್ಯವಾದಗಳು ಸರ್. ನಿಮ್ಮ ಹುಟ್ಟುಹಬ್ಬ ಅದ್ಭುತವಾಗಿ ನಡೆದಿದೆ ಎಂದು ನಾನು ಭಾವಿಸುತ್ತೇನೆ. ನಿಮಗೆ ದೇವರು ಒಳ್ಳೆಯ ಆರೋಗ್ಯವನ್ನು ಕೊಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಮತ್ತೆ ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ: ಕೊಹ್ಲಿಯನ್ನು ಟಗರಿಗೆ ಹೋಲಿಸಿದ ಶಿವಣ್ಣ – ಕ್ರಿಕೆಟ್ ಬಗ್ಗೆ ರಾಜ್ ಪುತ್ರನ ಮಾತು

ವಿರುಷ್ಕಾ ದಂಪತಿ ಮಗುವಿನ ನಿರೀಕ್ಷೆಯಲ್ಲಿರುವ ಕುರಿತು ಆಗಸ್ಟ್ 27ರಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಬಹಿರಂಗಪಡಿಸಿದ್ದರು. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರಲ್ಲಿ ವಿವಾಹವಾಗಿದ್ದು, ಮದುವೆಯಾದ ಮೂರು ವರ್ಷದ ನಂತರ ಅನುಷ್ಕಾ ಗರ್ಭಿಣಿಯಾಗಿದ್ದಾರೆ. ತಂದೆಯಾಗುತ್ತಿರುವ ಖುಷಿ ವಿಚಾರವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದ ಕೊಹ್ಲಿ, ನಾವು ಈಗ ಮೂವರು, ಜನವರಿಯಲ್ಲಿ ಡೆಲಿವರಿ ಎಂದು ಬರೆದುಕೊಂಡಿದ್ದರು.

Click to comment

Leave a Reply

Your email address will not be published. Required fields are marked *