Monday, 19th August 2019

Recent News

ಪ್ರಧಾನಿ ಮೋದಿ ಚಹಾ ಮಾರಿಲ್ಲ: ಪ್ರವೀಣ್ ತೊಗಡಿಯಾ

– ಇದೊಂದು ಕೇವಲ ಪ್ರಚಾರದ ಗಿಮಿಕ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಚಹಾ ಮಾರಿಲ್ಲ ಎಂದು ಅಂತರಾಷ್ಟ್ರೀಯ ಹಿಂದೂ ಪರಿಷತ್ ಅಧ್ಯಕ್ಷ ಪ್ರವೀಣ್ ತೊಗಡಿಯಾ ಹೇಳಿದ್ದಾರೆ.

ಈ ಹಿಂದೆ ಒಂದೇ ಸ್ಕೂಟರ್ ನಲ್ಲಿ ಆರ್ ಎಸ್‍ಎಸ್ ಪರೇಡ್ ಗೆ ತೆರಳುತ್ತಿದ್ದ ಮೋದಿ ಮತ್ತು ಪ್ರವೀಣ್ ತೊಗಡಿಯಾ ನಡುವೆ ಎಲ್ಲವೂ ಸರಿಯಿಲ್ಲ. ಕಳೆದೆರಡು ವರ್ಷಗಳಿಂದ ಕೇಂದ್ರ ಸರ್ಕಾರವನ್ನು ಟೀಕಿಸುತ್ತಾ ಬಂದಿರುವ ಪ್ರವೀಣ್ ತೊಗಡಿಯಾ ಮತ್ತೊಮ್ಮೆ ಬಿಜೆಪಿ ಹಾಗೂ ಸಂಘ ಪರಿವಾರವನ್ನು ಟೀಕಿಸಿದ್ದಾರೆ.

ನಾನು ನರೇಂದ್ರ ಮೋದಿ ಅವರನ್ನು 43 ವರ್ಷಗಳಿಂದ ಬಲ್ಲೆ. ಇಷ್ಟು ವರ್ಷದಲ್ಲಿ ಒಮ್ಮೆಯೂ ಮೋದಿ ಅವರು ಚಹಾ ಮಾರಿರುವುದನ್ನು ನೋಡಿಲ್ಲ. ಪ್ರಚಾರಕ್ಕಾಗಿ ಪ್ರಧಾನಿಗಳು ಚಹಾ ಮಾರುತ್ತಿದ್ದರು ಎಂಬ ಅಸ್ತ್ರವನ್ನು ಬಿಜೆಪಿ ಬಳಸುತ್ತಿದೆ. ನಾನೊಬ್ಬ ವೈದ್ಯನಾಗಿದ್ದು, ಪರಿಚಯಸ್ಥರಲ್ಲಿ ಈ ಬಗ್ಗೆ ವಿಚಾರಿಸಿದ್ರೆ ಯಾರ ಬಳಿಯೂ ಸ್ಪಷ್ಟವಾದ ಉತ್ತರವಿಲ್ಲ. ಮೋದಿ ಚಹಾ ಮಾರಿರುವುದನ್ನು ಇದೂವರೆಗೂ ಯಾರು ಸಾಬೀತು ಮಾಡಿಲ್ಲ ಎಂದು ಪ್ರವೀಣ್ ತೊಗಡಿಯಾ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹಿಂದೂ ಪರಿಷತ್ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ. ನಮ್ಮ ನೇತೃತ್ವದ ಸರ್ಕಾರ ರಚನೆಯಾದರೆ ಒಂದೇ ವಾರದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುವುದು. ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ರಾಮ ಮಂದಿರ ನಿರ್ಮಾಣ ಮಾಡುವ ಉದ್ದೇಶವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದ್ರೂ ಮುಂದಿನ ಐದು ವರ್ಷ ಅವರು ರಾಮ ಮಂದಿರ ನಿರ್ಮಾಣ ಮಾಡಲಾರರು. ನರೇಂದ್ರ ಮೋದಿ ಮತ್ತು ಬೈಯಾಜಿ ಜೋಶಿ ಅವರು ದೇಶವನ್ನು ಕತ್ತಲಿನಲ್ಲಿ ಇರಿಸಿದ್ದಾರೆ. ತ್ರಿವಳಿ ತಲಾಖ್ ಗಾಗಿ ಮಧ್ಯರಾತ್ರಿ ಕಾನೂನು ರಚಿಸುವ ಇವ್ರು ರಾಮ ಮಂದಿರ ನಿರ್ಮಾಣ ಮಾಡುತ್ತಿಲ್ಲವೇಕೆ ಎಂದು ಪ್ರವೀಣ್ ತೊಗಡಿಯಾ ಪ್ರಶ್ನೆ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *