Connect with us

Crime

ಫಿಲ್ಮಿ ಸ್ಟೈಲ್‍ನಲ್ಲಿ ಮೊಬೈಲ್ ಫೋನ್ ಕೊಂಡೊಯ್ಯುತ್ತಿದ್ದ ಲಾರಿ ಹೈಜಾಕ್

Published

on

– 7 ಕೋಟಿ ರೂ. ಮೌಲ್ಯದ ಮೊಬೈಲ್ ಬಾಕ್ಸ್ ಕದ್ದು ಎಸ್ಕೇಪ್
– ದರೋಡೆಕೋರರ ಬೆನ್ನುಬಿದ್ದ ಪೊಲೀಸರು

ಹೈದರಾಬಾದ್: ಥೇಟ್ ಸಿನಿಮಾ ಸ್ಟೈಲ್‍ನಲ್ಲಿ ಹೆದ್ದಾರಿಯೊಂದರಲ್ಲಿ ಭಾರೀ ದರೋಡೆ ನಡೆದಿದೆ.

ಮೊಬೈಲ್ ಫೋನ್ ಕೊಂಡೊಯ್ಯುತ್ತಿದ್ದ ಕಂಟೇನರ್ ಲಾರಿ ಅಡ್ಡಗಟ್ಟಿದ ದರೋಡೆಕೋರರು, ಚಾಲಕ, ಕ್ಲೀನರ್ ಕೈಕಾಲು ಕಟ್ಟಿ ಕೆಳೆಗೆಸೆದು ಲಾರಿ ಹೈಜಾಕ್ ಮಾಡಿದ್ದಾರೆ. ಆಂಧ್ರದ ಚಿತ್ತೂರು ಜಿಲ್ಲೆಯ ತಮಿಳುನಾಡು ಗಡಿ ಭಾಗ ನಗಾರಿ ಎಂಬಲ್ಲಿ ಈ ಘಟನೆ ನಡೆದಿದೆ.

ಹೈಜಾಕ್ ಆಗಿದ್ದ ಲಾರಿ ಪುತ್ತೂರು ಸಮೀಪದ ಮರಾಠಿ ಗೇಟ್ ಎಂಬಲ್ಲಿ ಪತ್ತೆಯಾಗಿದೆ. ಲಾರಿಯಲ್ಲಿದ್ದ 12 ಕೋಟಿ ಮೌಲ್ಯದ 15 ಮೊಬೈಲ್ ಬಾಕ್ಸ್ ಗಳ ಪೈಕಿ, 8 ಮೊಬೈಲ್ ಬಾಕ್ಸ್ ಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ. ಇದರ ಮೌಲ್ಯ 7 ಕೋಟಿ ರೂ. ಇರಬಹುದು ಎಂದು ಅಂದಾಜಿಸಲಾಗಿದೆ.

ಚೆನ್ನೈನ ಶ್ರೀಪೆರಂಬದೂರ್‍ ನಿಂದ ಮುಂಬೈನ ಎಂಐ ಗೋಡಾನ್‍ಗೆ ಈ ಮೊಬೈಲ್‍ಗಳನ್ನು ಸಾಗಿಸಲಾಗುತ್ತಿತ್ತು. ಇದೀಗ ಆಂಧ್ರ ಪ್ರದೇಶ ಮತ್ತು ತಮಿಳುನಾಡು ಪೊಲೀಸರು ಮೊಬೈಲ್ ದರೋಡೆ ಮಾಡಿದ ದರೋಡೆಕೋರರ ಬೆನ್ನು ಬಿದ್ದಿದ್ದಾರೆ.

Click to comment

Leave a Reply

Your email address will not be published. Required fields are marked *