Connect with us

Bengaluru City

ರಾಜ್ಯದಲ್ಲಿ ಸ್ಟಾರ್ಟ್ ಅಪ್ ಇಂಡಿಯಾ ಅಡಿಯ ಮೊಬೈಲ್ ಡೀಸೆಲ್ ಬಂಕ್‍ಗಳ ಸೇವೆ ಆರಂಭ

Published

on

Share this

ನೆಲಮಂಗಲ: ದಕ್ಷಿಣ ಭಾರತದ ಸ್ಟಾರ್ಟ್ ಅಪ್ ಇಂಡಿಯಾ ಅಡಿಯ ಎರಡು ಮೊಬೈಲ್ ಡೀಸಲ್ ಬಂಕ್‍ಗಳು ರಾಜ್ಯದಲ್ಲಿ ಕಾರ್ಯಾರಂಭವಾಗಿದ್ದು, 35 ರಿಂದ 40 ಲಕ್ಷದ ವಾಹನಗಳನ್ನು ಸಾರ್ವಜನಿಕರು ಸಹ ಖರೀದಿ ಮಾಡಬಹುದಾಗಿದೆ.

ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬಂಕ್ ಅನುಮತಿದಾರರು ಮಾತ್ರ ಹಳೇ ತಂತ್ರಜ್ಞಾನದ ಮೊಬೈಲ್ ಡೀಸೆಲ್ ಬಂಕ್ ಬಳಕೆ ಮಾಡುತ್ತಿದ್ದರು. ಆದರೆ ಸ್ಟಾರ್ಟ್ ಅಪ್ ಇಂಡಿಯಾ ಅಡಿಯಲ್ಲಿ ಡೀಸೆಲ್ ಬಂಕ್ ಇರುವ ಅನಿವಾರ್ಯತೆಯಿಲ್ಲ. 6,000 ಸಾಮಥ್ರ್ಯವುಳ್ಳ ಹೊಸ ತಂತ್ರಜ್ಞಾನದ ಮೊಬೈಲ್ ಡೀಸೆಲ್ ಬಂಕ್‍ನಲ್ಲಿ ಮೊಬೈಲ್ ಆ್ಯಪ್ ವ್ಯವಸ್ಥೆಯಿದ್ದು, ಡೀಸೆಲ್ ಬಂಕ್ ದರದಲ್ಲಿಯೇ ಪಡೆಯಬಹುದು. ಸುಮಾರು 500ಕ್ಕೂ ಹೆಚ್ಚು ಡೀಸೆಲ್ ಖರೀದಿ ಮಾಡಿದರೆ ರಿಯಾಯಿತಿ ಪಡೆಯಬಹುದಾಗಿದೆ.

ಸದ್ಯ ನೆಲಮಂಗಲದ ಸೌಮ್ಯ ಎಸ್.ಅನಿಲ್ ಕುಮಾರ್ ಹಾಗೂ ರಾಜಾಜಿನಗರದ ವ್ಯಕ್ತಿಯೊಬ್ಬರು ಖರೀದಿ ಮಾಡಿದ್ದು, ಹೊಸ ತಂತ್ರಜ್ಞಾನದ ವಾಹನ ಬಳಕೆಗೆ ಮುಂದಾಗಿದ್ದಾರೆ. ನೆಲಮಂಗಲದ ಮಹಿಳೆಯೊಬ್ಬರು ಹೊಸ ಉದ್ಯಮಕ್ಕೆ ಪಾದಾರ್ಪಣೆ ಮಾಡಿದ್ದು ಹೊಸ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ. ವಾಹನ ಖರೀದಿಗೆ ಸಾಲ ಸೌಲಭ್ಯವಿದ್ದು ಮಧ್ಯಮ ವರ್ಗದ ಜನರು ಈ ಉದ್ಯಮಕ್ಕೆ ಪ್ರವೇಶ ಮಾಡಬಹುದಾಗಿದೆ. ಇದನ್ನೂ ಓದಿ:ರೈಲಿಗೆ ಸಿಲುಕಿ ಇಬ್ಬರು ದುರ್ಮರಣ

ಉಪಯೋಗ
ಕೈಗಾರಿಕೋದ್ಯಮಿಗಳು ಹಾಗೂ ವಾಣಿಜ್ಯೋದ್ಯಮಿಗಳಿಗೆ ಮೊಬೈಲ್ ಡೀಸೆಲ್ ಬಂಕ್ ಬಹಳಷ್ಟು ಅನುಕೂಲವಾಗಿದ್ದು, ಬೃಹತ್ ಕೈಗಾರಿಕೆಗಳು, ಬೋರ್‍ವೆಲ್ ವಾಹನಗಳು, ದೊಡ್ಡ ಕ್ರೈನ್ ಗಳಂತಹ ಯಂತ್ರಗಳಿಗೆ ಸ್ಥಳಕ್ಕೆ ಬಂದು ಡೀಸೆಲ್ ನೀಡಲು ಸಹಕಾರಿಯಾಗಿದ್ದು ಸೋಂಪುರ, ಪೀಣ್ಯದಂತಹ ಕೈಗಾರಿಕಾ ವಲಯಗಳಿಗೆ ಬಹಳಷ್ಟು ಉಪಯೋಗವಾಗಲಿದೆ. ರೆಪೋಲ್ ಆ್ಯಪ್ ಮೂಲಕ ಬುಕ್ಕಿಂಗ್ ವ್ಯವಸ್ಥೆಯಿರುವುದರಿಂದ ಬಹಳಷ್ಟು ಪಾರದರ್ಶಕತೆಯನ್ನು ಕಾಣಬಹುದಾಗಿದೆ. ಗುಣಮಟ್ಟದ ಬಗ್ಗೆ ಖಚಿತಪಡಿಸುವುದರಿಂದ ನೂರಕ್ಕೆ ನೂರು ಭಾಗ ಕಲಬೆರಕೆಗೆ ಅವಕಾಶವಿರುವುದಿಲ್ಲ ಎಂದು ಸೌಮ್ಯ ಎಸ್.ಅನಿಲ್‍ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೇವಾಶುಲ್ಕ
ಸ್ಟಾರ್ಟ್ ಅಪ್ ಮೊಬೈಲ್ ಡೀಸೆಲ್ ಬಂಕ್ ವಾಹನದಲ್ಲಿ 6,000 ಲೀಟರ್ ಡೀಸೆಲ್‍ನೊಂದಿಗೆ ವಾಹನದ ಚಾಲಕ ಮತ್ತು ಒಬ್ಬ ಸಿಬ್ಬಂದಿಯಿರುತ್ತಾರೆ. ಸಾಮಾನ್ಯವಾಗಿ ಪೆಟ್ರೋಲ್ ಬಂಕ್‍ಗಳಲ್ಲಿ ನೀಡುವಂತೆ ಡಿಜಿಟಲ್ ಬಿಲ್ ವ್ಯವಸ್ಥೆ ಮತ್ತು ಡಿಜಿಟಲ್ ಪಾವತಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಕನಿಷ್ಟ 500 ಲೀಟರ್ ಡಿಸೇಲ್ ಖರೀದಿ ಮಾಡುವವರಿಗೆ ಸೇವಾಶುಲ್ಕ ವಿನಾಯತಿಯನ್ನು ನೀಡಲಾಗಿದೆ. ನೆಲಮಂಗಲ ಸೌಮ್ಯ ಅನಿಲ್ ಕುಮಾರ್ ಆರಂಭಿಸಿರುವ ಮೊಬೈಲ್ ಡಿಸೇಲ್ ಸೇವೆಯನ್ನು ಡೀಸೆಲ್ ಆಪ್ ಬಳಕೆ ಮೂಲಕ ಅಥವಾ 9886686396,9343344039 ನಂಬರ್‌ಗೆ ಕರೆ ಮಾಡುವ ಮೂಲಕ ಡಿಸೇಲ್ ಬುಕಿಂಗ್ ಮಾಡಿ ಖರೀದಿ ಮಾಡಬಹುದಾಗಿದೆ.

ಕೋಟ್ ಡೀಸೆಲ್ ಬಂಕ್ ಅನುಮತಿಯಿಲ್ಲದವರು ಸಹ ಮೊಬೈಲ್ ಡೀಸೆಲ್ ಬಂಕ್ ಉದ್ಯಮಕ್ಕೆ ಬರಲು ಸ್ಟಾರ್ಟ್ ಅಪ್ ಇಂಡಿಯಾ ಸಹಕಾರಿಯಾಗಿದ್ದು ನಾನು ಮಹಿಳೆಯಾಗಿ ಹೊಸ ಉದ್ಯಮಕ್ಕೆ ಬರಲು ಹೊಸ ಯೋಜನೆ ಅನುಕೂಲವಾಗಿದೆ, ದಕ್ಷಿಣ ಭಾರತದಲ್ಲಿರುವ ಎರಡು ವಾಹನದಲ್ಲಿ ನಮ್ಮದು ಒಂದು ಎಂಬುದು ನಮಗೆ ಹೆಮ್ಮೆಯ ವಿಚಾರ ಎಂದಿದ್ದಾರೆ.  ಇದನ್ನೂ ಓದಿ:ಲಸಿಕಾ ಕೇಂದ್ರಕ್ಕೆ ವೃದ್ಧನನ್ನು ಹೆಗಲ ಮೇಲೆ ಹೊತ್ತೊಯ್ದ ಪೊಲೀಸ್ – ಕೇಂದ್ರ ಸಚಿವರಿಂದ ಮೆಚ್ಚುಗೆ

Click to comment

Leave a Reply

Your email address will not be published. Required fields are marked *

Advertisement