Tuesday, 16th July 2019

Recent News

ಶಾಸಕರು ಹೊಡೆದಾಡಿಕೊಂಡಿದ್ದು ಯಾವ ಸೆಕ್ಷನ್ ನಲ್ಲಿ ಬರುತ್ತೆ- ಮಾಜಿ ಸಿಎಂ ಬಳಿ ಸ್ಪಷ್ಟೀಕರಣ ಕೇಳಿದ ಶ್ರೀರಾಮುಲು

ಬಳ್ಳಾರಿ: ಲೋಕಸಭಾ ಚುನಾವಣೆಯ ಸಮಯದಲ್ಲಿ ಕಾನೂನು ಪಾಠ ಮಾಡಿದ್ದ ಸಿದ್ದರಾಮಯ್ಯನನವರಿಗೆ ಶ್ರೀರಾಮುಲು ಈಗ ಸೆಕ್ಷನ್ ಗಳ ಪ್ರಶ್ನೆ ಮಾಡಿ ಟಾಂಗ್ ಕೊಟ್ಟಿದ್ದಾರೆ. ಬಿಡದಿಯ ರೆಸಾರ್ಟಿನಲ್ಲಿನ ಆನಂದ್ ಸಿಂಗ್ ಪ್ರಕರಣವನ್ನು ಪ್ರಸ್ತಾಪ ಮಾಡಿ ಇದು ಯಾವ ಸೆಕ್ಷನ್ ನಲ್ಲಿ ಬರುತ್ತದೆ? ಸಿದ್ದರಾಮಯ್ಯನವರೇ ಸ್ಪಷ್ಟನೆ ನೀಡಿ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಹೇಳಿದ್ದಾರೆ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಹಳಷ್ಟು ಬಾರಿ ಸತ್ಯಹರಿಶ್ಚಂದ್ರ ಆಗಿರುತ್ತಾರೆ. ಅಲ್ಲದೇ ನನಗೆ ಬಹಳಷ್ಟು ಸಾರಿ ವ್ಯಂಗ್ಯವಾಗಿ ಮಾತನಾಡುತ್ತಾ ಇರುತ್ತಾರೆ. ಶ್ರೀರಾಮುಲು ಅವರಿಗೆ ಹೈದರಾಬಾದ್ ಕರ್ನಾಟಕದಲ್ಲಿ 371 ಬಗ್ಗೆ ಗೊತ್ತೇ ಇಲ್ಲ. ಅವರಿಗೆ 420 ಸೆಕ್ಷನ್ ಗಳು ಮಾತ್ರ ಗೊತ್ತು ಎಂದು ಬಹಳಷ್ಟು ಬಾರಿ ಉಲ್ಲೇಖ ಮಾಡಿದ್ದಾರೆ. ಮಾತ್ರವಲ್ಲದೇ ವ್ಯಂಗ್ಯವಾಡಿದ್ದಾರೆ. ಅವರು ಪಾಪ ಹಿರಿಯ ವಕೀಲ. ಹೀಗಾಗಿ ನಾನು ಇದೀಗ ಸಿದ್ದರಾಮಯ್ಯ ಅವರಿಗೆ ಕೇಳುತ್ತೇನೆ. ಸ್ವಾಮಿ, ನನಗಂತೂ 371 ಸೆಕ್ಷನ್ ಬಗ್ಗೆ ಗೊತ್ತಿಲ್ಲ. 420 ಸೆಕ್ಷನ್ ಮಾತ್ರ ಗೊತ್ತು. ನಿಮ್ಮ ಶಾಸಕರು ರೆಸಾರ್ಟ್ ನಲ್ಲಿ ಗಲಾಟೆ ಮಾಡಿಕೊಂಡಿದ್ದಾರೋ, ಅದು ಯಾವ ಸೆಕ್ಷನ್ ನಲ್ಲಿ ಬರುತ್ತೆ ಅನ್ನೋದನ್ನು ಸ್ಪಷ್ಟಪಡಿಸಿ ಎಂದು ಕೇಳಿಕೊಂಡಿದ್ದಾರೆ.

 

ಒಟ್ಟಿನಲ್ಲಿ ಕಾಂಗ್ರೆಸ್ ನಲ್ಲಿ ಇಂದು ಯಾವುದೂ ಕೂಡ ಸರಿಯಿಲ್ಲ ಎಂಬುದು ಇಡೀ ನಾಡಿನ ಜನತೆಗೆ ಗೊತ್ತಿದೆ. ಹೀಗಾಗಿ ಮುಂದೆ ಅವರ ಹಣೆಬರಹವನ್ನು ಅವರೇ ತೀರ್ಮಾನ ಮಾಡಿಕೊಳ್ಳುತ್ತಾರೆ ಎಂದು ಅವರು ಹೇಳಿದ್ರು. ಇದನ್ನೂ ಓದಿ: ಶಾಸಕ ಶ್ರೀರಾಮುಲುಗೆ ಕನ್ನಡ, ಕಾನೂನು ಪಾಠ ಮಾಡಿದ ಮಾಜಿ ಸಿಎಂ

ಈಗಲ್ ಟನ್ ರೆಸಾರ್ಟ್ ನಲ್ಲಿ ಶಾಸಕರಾದ ಆನಂದ್ ಸಿಂಗ್ ಹಾಗೂ ಗಣೇಶ್ ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿ ಗಮನಕ್ಕೆ ಬಂದಿದೆ. ಈ ಮೂಲಕ ಕಾಂಗ್ರೆಸ್ ಸಂಸ್ಕೃತಿ ಇಂದು ಯಾವ ರೀತಿ ಇದೆ ಎಂಬುದನ್ನು ಎಲ್ಲರು ವಿಚಾರ ಮಾಡಿಕೊಳ್ಳಬೇಕಾಗಿದೆ. ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ, ಅಧಿಕಾರದಲ್ಲಿರುವಂತಹ ಶಾಸಕರು ಇಂದು ಅವರೇ ರೆಸಾರ್ಟ್ ಸೇರಿಕೊಂಡು ಮೋಜು-ಮಸ್ತಿ ಮಾಡಿಕೊಳ್ಳುತ್ತಾ, ಕುಡಿದು ಬಾಟಲಿಗಳಲ್ಲಿ ಹೊಡೆದಾಡಿಕೊಂಡಿರುವುದು ಯಾವ ಸಂಸ್ಕೃತಿ ಎಂಬುದನ್ನು ಹೇಳಬೇಕು ಎಂದು ಅವರು ಹೇಳಿದ್ರು.

ಲಕ್ಷಾಂತರ ಮಂದಿಯನ್ನು ಮನವೊಲಿಸಿರುವ ನಾವು ಶಾಸಕರಾದ ನಾಗೇಂದ್ರ ಹಾಗೂ ಆನಂದ್ ಸಿಂಗ್ ಅವರನ್ನು ಮನವೊಲಿಸಲು ಆಗಲ್ಲ ಎಂದಲ್ಲ. ಆನಂದ್ ಸಿಂಗ್ ಅವರು ಬೆಳೆಯಬೇಕು, ದೊಡ್ಡವರಾಗಬೇಕು ಎಂದು ಹೋದವರು. ಆನಂದ್ ಸಿಂಗ್ ಅವರಿಗೆ ನಮ್ಮ ಪಕ್ಷ ಗೌರವಯುತವಾಗಿ ಮಂತ್ರಿ ಸ್ಥಾನ ಕೊಟ್ಟಿತ್ತು. ಆದ್ರೆ ಇದೀಗ ದೊಡ್ಡವರಾಗಲು ಹೋಗಿ ಎಡವಿದ್ದಾರೆ. ಬೇರೆಯವರನ್ನು ಕರೆದುಕೊಳ್ಳುವ ಮೂಲಕ ರಾಜಕಾರಣ ಮಾಡಬೇಕು ಅನ್ನೋ ಆಸೆ ನನಗಿಲ್ಲ. ನಾನಿರುವ ಸಮಯದಲ್ಲಿ ಒಳ್ಳೆದಾಗಬೇಕು ಎಂದು ಬಯಸುತ್ತೇನೆ. ಆನಂದ್ ಸಿಂಗ್ ಕೂಡ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರು ಆಶಿಸಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *