Connect with us

Bengaluru City

ಚೀಲದಲ್ಲಿ ಕಂತೆ ಕಂತೆ ದುಡ್ಡು ತಂದು ಎಣಿಸಿ ಕೊಟ್ಟ ಜಮೀರ್

Published

on

ಬೆಂಗಳೂರು: ಶಾಸಕ ಜಮೀರ್ ಅಹಮದ್ ಅವರು ಚೀಲದಲ್ಲಿ ಕಂತೆ ಕಂತೆ ನೋಟು ತಂದು ಎದುರುಗಿದ್ದ ವ್ಯಕ್ತಿಗೆ ಎಲ್ಲರೆದುರೇ ಲಕ್ಷ ಲಕ್ಷ ಹಣವನ್ನು ಎಣಿಸಿ ಕೊಟ್ಟ ಪ್ರಸಂಗವೊಂದು ನಡೆದಿದೆ.

ಹೌದು. ಜಮೀರ್ ಅವರು ಒಂದಲ್ಲ ಎರಡಲ್ಲ ಸಾಮಾನ್ಯ ಚೀಲದಲ್ಲಿ ಬರೋಬ್ಬರಿ 20 ಲಕ್ಷ ಹಣವನ್ನು ಶಾಸಕ ತಂದಿದ್ದಾರೆ. ಶನಿವಾರ ಗೋರಿ ಪಾಳ್ಯದಲ್ಲಿ ರಾಜಿ ಪಂಚಾಯ್ತಿ ಮಾಡಲು ಈ ಹಣವನ್ನು ತಂದಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜೀ ಮಾಡಿಸುವ ಸಲುವಾಗಿ 20 ಲಕ್ಷ ಹಣ ತಂದು ಏಕ್.. ದೋ.. ತೀನ್..ಚಾರ್.. ಅಂತ ಎಣಿಸಿ ಎಣಿಸಿ ನೂರಾರು ಜನರ ಎದುರೇ ವ್ಯಕ್ತಿಯೊಬ್ಬರ ಕೈಗಿಟ್ಟಿದ್ದಾರೆ. 500 ರೂಪಾಯಿಯ 9 ಲಕ್ಷ, 2000 ರೂಪಾಯಿಯ 11 ಲಕ್ಷ.. ಹೀಗೆ ಒಟ್ಟು 20 ಲಕ್ಷ ಹಣವನ್ನ ಬಹಿರಂಗವಾಗಿ ಎಣಿಸಿ ಎಣಿಸಿ ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.