Connect with us

Chitradurga

ಸಿಎಂ ವಿರುದ್ಧ ಸಿಡಿದ ಮತ್ತೊಬ್ಬ ಶಾಸಕ- ಬಿಜೆಪಿಯಲ್ಲಿ ಭಿನ್ನಮತ ಇರೋದು ನಿಜ ಅಂದ್ರು ತಿಪ್ಪಾರೆಡ್ಡಿ

Published

on

– ಅತೃಪ್ತರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ

ಚಿತ್ರದುರ್ಗ: ಬಿಜೆಪಿ ಶಾಸಕರಲ್ಲಿ ಬೇಸರ, ಭಿನ್ನಮತ ಇರುವುದು ನಿಜ. ಶಾಸಕರಿಗೆ ಸರ್ಕಾರದ ಸ್ಪಂದನೆ ಇಲ್ಲ ಎಂಬ ಭಾವನೆ ಇದೆ. ಅಲ್ಲದೆ ಮುಖ್ಯಮಂತ್ರಿಗಳಿಂದ ಹಿರಿಯ ಶಾಸಕರ ಕಡೆಗಣನೆಯಾಗುತ್ತಿದೆ ಎಂದು ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿ ಸ್ಫೋಟಕ ಮಾಹಿತಿ ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೂರು ವರ್ಷ ಅಧಿಕಾರದಲ್ಲಿರುತ್ತೇವೆ ಎಂದು ಮನಸ್ಸು ಬಂದಂತೆ ಆಡಳಿತ ನಡೆಸಲಾಗುತ್ತಿದೆ. ಅವರಿಗೆ ಬೇಕಾದವರಿಗೆ ಮಂತ್ರಿ ಮಂಡಲ ಸ್ಥಾನಮಾನ ನೀಡುತ್ತಿದ್ದಾರೆ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲದ ಸ್ಥಾನಮಾನ ಇದಾಗಿದೆ ಎಂದು ಸರ್ಕಾರದ ವಿರುದ್ಧ ಶಾಸಕರು ಕಿಡಿಕಾರಿದ್ದಾರೆ.

ಅನೇಕ ಸಮಾಜದ ಶಾಸಕರಿಗೆ ಸ್ಥಾನ ತಪ್ಪಿಸಿ ಎಷ್ಟು ದಿನ ಸರ್ಕಾರ ನಡೆಸಲು ಸಾಧ್ಯ ಎಂದು ಇದೇ ವೇಳೆ ಪ್ರಶ್ನಿಸಿದ ಅವರು, ಕೆಲವರು ಮೂರು ವರ್ಷ ಅಧಿಕಾರ ನಡೆಸಿ ಹೋಗಬಹುದು. ನಮ್ಮದು ಮುಗೀತು ಅನ್ನಬಹುದು ಎಂದು ಬಿಎಸ್‍ವೈಗೆ ಪರೋಕ್ಷ ಟಾಂಗ್ ನೀಡಿದರು. ಇದನ್ನೂ ಓದಿ: BIG EXCLUSIVE- ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ!

ಗುರುವಾರ ಸಭೆ ಸೇರಿದ ಶಾಸಕರು ನನ್ನ ಜೊತೆಯೂ ಮಾತನಾಡಿದ್ದಾರೆ. ಕೊರೊನಾ ಇರುವುದರಿಂದ ಕೆಲ ಜನ ಮಾತ್ರ ಸೇರಿರಬಹುದು. ಶಾಸಕರ ಅಸಮಾಧಾನ ಗಮನಿಸಿ ಮೇಲ್ಮಟ್ಟದ ನಾಯಕರು ಕರೆದು ಚರ್ಚಿಸಬೇಕು ಎಂದರು. ಇದನ್ನೂ ಓದಿ: ನಾನೇನು ಸನ್ಯಾಸಿ ಅಲ್ಲ, ಸಚಿವ ಸ್ಥಾನದ ಆಸೆ ಇದೆ: ನಿರಾಣಿ

ಚಿತ್ರದುರ್ಗ ಜಿಲ್ಲೆಗೆ ಹೊರಗಿನವರೇ ಉಸ್ತುವಾರಿ ಸಚಿವರಾಗುವುದರಿಂದ ಅಭಿವೃದ್ಧಿ ಕಡೆಗಣನೆ ಮಾಡಲಾಗುತ್ತಿದೆ. ಕಳೆದ ಬಜೆಟ್ ನಲ್ಲೂ ಜಿಲ್ಲೆಗೆ 1 ರೂ. ಪ್ರೋಗ್ರಾಂ ಇದೆಯಾ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಂಡಾಯ ಅಲ್ಲ, ಕೊಟ್ಟ ಮಾತು ನೆನಪಿಸಿದ್ದೇವೆ: ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ