Connect with us

Bellary

ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆಗಿಳಿದಿಲ್ಲ ಶ್ರೀರಾಮುಲು!

Published

on

ಬಳ್ಳಾರಿ: ಟಿಪ್ಪು ಜಯಂತಿ ಬೇಡ ಬೇಡ ಅಂತ ಹೇಳಿದ್ರೂ ಬಳ್ಳಾರಿಯಲ್ಲಿ ಮಾತ್ರ ಟಿಪ್ಪು ಜಯಂತಿ ಬೇಕು ಎನ್ನುವಂತಾಗಿದೆ. ಯಾಕಂದ್ರೆ ಅಲ್ಲಿನ ಬಿಜೆಪಿ ನಾಯಕರು ಟಿಪ್ಪು ಜಯಂತಿ ವಿಚಾರವಾಗಿ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿಲ್ಲ.

ಹೌದು. ರಾಜ್ಯದೆಲ್ಲೆಡೆ ಟಿಪ್ಪು ಜಯಂತಿ ಆಚರಣೆ ಮಾಡಬಾರದು ಅಂತ ಬೀದಿಗಿಳಿದು ಹೋರಾಟ ಮಾಡುತ್ತಿದ್ದರೆ ಬಿಜೆಪಿ ಮುಖಂಡ ಶ್ರೀರಾಮುಲು ಮಾತ್ರ ಯಾವುದೇ ಪ್ರತಿಭಟನೆಗೆ ಇಳಿದಿಲ್ಲ. ಶ್ರೀರಾಮುಲು ಅವರು ಮುಸ್ಲಿಮರ ಜೊತೆ ಹೆಚ್ಚು ಒಡನಾಟ ಹೊಂದಿದ್ದಾರೆ. ಕಳೆದ ವರ್ಷ ಕೌಲಬಜಾರ ಕಚೇರಿಯಲ್ಲೇ ಟಿಪ್ಪುವಿನ ಜಯಂತಿ ಆಚರಣೆ ನಡೆದಿತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಗೆಳೆಯ ಜನಾರ್ದನ ರೆಡ್ಡಿಗೆ ಬಂದೊದಗಿದ ಸಂಕಷ್ಟದಿಂದ ರಾಮುಲು ಅವರು ಟೆನ್ಷನ್ ನಲ್ಲಿದ್ದಾರೆ. ಹೀಗಾಗಿ ಟಿಪ್ಪು ಜಯಂತಿ ಬಗ್ಗೆ ಗಪ್ ಚುಪ್ ಆಗಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದೆಲ್ಲೆಡೆ ಇಂದು ಬಿಜೆಪಿ ನಾಯಕರು ಬೀದಿಗಳಿದು ಟಿಪ್ಪು ಜಯಂತಿ ಆಚರಣೆ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸಹ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಪ್ರತಿಭಟನೆ ನಡೆಸುವಂತೆ ಬಿಜೆಪಿ ರಾಜ್ಯಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಕರೆ ನೀಡಿದ್ದಾರೆ. ಆದ್ರೆ ಬಳ್ಳಾರಿಯ ಬಿಜೆಪಿ ನಾಯಕರಿಗೆ ಮಾತ್ರ ಟಿಪ್ಪು ಜಯಂತಿ ವಿರುದ್ಧ ಪ್ರತಿಭಟನೆ ಮಾಡಲು ಮನಸ್ಸಿಲ್ಲದಾಗಿದೆ. ಹೀಗಾಗಿ ರಾಜ್ಯ ಅಧ್ಯಕ್ಷರು ರಾಜ್ಯ ಕಾರ್ಯದರ್ಶಿಗಳು ಪ್ರತಿಭಟನೆಗೆ ಕರೆ ನೀಡಿದ್ರೂ ಬಿಜೆಪಿ ನಾಯಕರು, ಶಾಸಕರು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಶ್ರೀರಾಮುಲುಗೆ ಟಿಪ್ಪು ಜಯಂತಿ ವಿರುದ್ಧ ಪ್ರತಿಭಟನೆ ಮಾಡಲು ಮನಸ್ಸಿಲ್ಲದಾಗಿದೆ.

ಎಲ್ಲೆಡೆ ಪ್ರತಿಭಟನೆ ವಿರೋಧ ನಡೆದ್ರೂ ಬಳ್ಳಾರಿಯಲ್ಲಿ ಮಾತ್ರ ಬಿಜೆಪಿ ನಾಯಕರು ಸುಮ್ಮನಿರುವುದು ಟಿಪ್ಪು ಜಯಂತಿ ಬೇಕು ಅನ್ನುವಂತಾಗಿದೆ. ಅಂದು ಬಿಜೆಪಿ ಶಾಸಕರಾಗಿದ್ದ ಆನಂದಸಿಂಗ್ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದಕ್ಕೆ ಪಕ್ಷ ತೊರೆಯುವಂತಾಯಿತು. ಹೀಗಾಗಿ ಬಳ್ಳಾರಿಯಲ್ಲಿ ಬಿಜೆಪಿ ನಾಯಕರಿಗೆ ಟಿಪ್ಪು ವಿರೋಧಿಸಿ ಪ್ರತಿಭಟನೆ ಮಾಡಲು ಮನಸ್ಸು ಇಲ್ಲದಿರುವುದು ಇದೀಗ ಸ್ಪಷ್ಟವಾಗಿದೆ. ಒಟ್ಟಿನಲ್ಲಿ ಕಳೆದ ವರ್ಷ ಗೆಳೆಯ ರೆಡ್ಡಿ ಜೊತೆ ತಮ್ಮ ಕಚೇರಿಯಲ್ಲಿಯೇ ಟಿಪ್ಪು ಜಯಂತಿ ಆಚರಿಸಿಕೊಂಡಿರೋ ಶ್ರೀರಾಮುಲು ಅವರ ಇಂದಿನ ನಿಲುವು ಏನು ಅನ್ನೋದು ತೀವ್ರ ಕುತೂಹಲಕ್ಕೀಡುಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews