Connect with us

Bengaluru City

ಕೈ ಶಾಸಕರ ಬಡಿದಾಟ ಶಮನಕ್ಕೆ ಬಳ್ಳಾರಿಯ ಮತ್ತೊಬ್ಬ ಕಾಂಗ್ರೆಸ್ ಶಾಸಕ ಎಂಟ್ರಿ

Published

on

ಬೆಂಗಳೂರು: ರೆಸಾರ್ಟ್ ನಲ್ಲಿ ಕಾಂಗ್ರೆಸ್ ಶಾಸಕರ ನಡುವಣ ಗಲಾಟೆ ಶಮನಕ್ಕೆ ಬಳ್ಳಾರಿಯ ಮತ್ತೊಬ್ಬ ಕೈ ಶಾಸಕ ಮುಂದಾಗಿದ್ದಾರೆ. ಕಾಂಗ್ರೆಸ್ ಶಾಸಕರಿಬ್ಬರ ಬಡಿದಾಟಕ್ಕೆ ಬಳ್ಳಾರಿ ಗ್ರಾಮೀಣ ಶಾಸಕ ನಾಗೇಂದ್ರ ಮದ್ಯಸ್ಥಿಕೆ ವಹಸಿಲು ಮುಂದಾಗಿದ್ದಾರೆ.

ಶನಿವಾರ ಸಂಜೆ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕ ನಾಗೇಂದ್ರ, ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಅಷ್ಟೇ ಅಲ್ಲದೇ ಸತತ ಒಂದು ಗಂಟೆಯ ಕಾಲ ಶಾಸಕ ಆನಂದ್ ಸಿಂಗ್ ಜೊತೆ ಮಾತಕತೆ ನಡೆಸಿದ್ದು, ಘಟನೆ ನಡೆದ ಒಂದು ವಾರದ ಬಳಿಕ ನಾಗೇಂದ್ರ ಅವರು ಆನಂದ್ ಸಿಂಗ್ ಭೇಟಿ ಮಾಡಿದ್ದಾರೆ.

ಆಸ್ಪತ್ರೆಯಿಂದ ಹೊರಬಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಆನಂದ್ ಸಿಂಗ್ ಹಾಗೂ ಕಂಪ್ಲಿ ಗಣೇಶ್ ನಡುವೆ ರಾಜಿ ಸಂಧಾನಕ್ಕೆ ನಿಲ್ಲುತ್ತೇನೆ. ಆನಂದ್ ಸಿಂಗ್ ಬಗ್ಗೆ ಕಂಪ್ಲಿ ಗಣೇಶ್ ಸಾಕಷ್ಟು ಗೌರವ ಇಟ್ಟುಕೊಂಡಿದ್ದ ಹುಡುಗ. ಘಟನೆ ಹೇಗಾಯ್ತು ಅಂತ ಗೊತ್ತಿಲ್ಲ. ನಾನು ಗಣೇಶ್‍ನನ್ನ ಸಂಪರ್ಕ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ಎಲ್ಲವನ್ನು ತಿಳಿದುಕೊಂಡು ರಾಜೀಗೆ ಮಧ್ಯಸ್ಥಿಕೆ ವಹಿಸುತ್ತೇನೆ ಅಂತ ಸ್ಪಷ್ಟಪಡಿಸಿದ್ದಾರೆ.

ಈ ಮೂಲಕ ತಮ್ಮ ಕುಲ ಬಾಂಧವ ಗಣೇಶ್ ಬೆನ್ನಿಗೆ ನಿಂತು ನಾಗೇಂದ್ರ ರಾಜೀಗೆ ಮುಂದಾಗಿದ್ದಾರಾ ಅನ್ನೋ ಪ್ರಶ್ನೆ ಇದೀಗ ಕೇಳಿ ಬರುತ್ತಿದೆ. ಇದೇ ವೇಳೆ ಕಾಂಗ್ರೆಸ್ ಬಿಡುವ ಪ್ರಶ್ನೆನೇ ಇಲ್ಲ, ಬಳ್ಳಾರಿಯ ಎಲ್ಲ ಶಾಸಕರು ಒಗ್ಗಾಟ್ಟಾಗಿದ್ದೇವೆ. ಸಿಎಲ್‍ಪಿ ಸಭೆಗೆ ಕೋರ್ಟ್ ಕೆಲಸ ಇದ್ದ ಕಾರಣ ಅನುಮತಿ ಕೇಳಿದ್ದೆ. ಆದ್ದರಿಂದ ಸಿಎಲ್‍ಪಿ ಸಭೆಗೆ ಬರುವುದಕ್ಕೆ ಸಾಧ್ಯವಾಗಿಲ್ಲ ಎಂದು ಶಾಸಕ ನಾಗೇಂದ್ರ ಸ್ಪಷ್ಟನೆ ಕೊಟ್ಟಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv