Connect with us

Latest

ರಾಹುಲ್ ಗಾಂಧಿ ನೀರಿನಿಂದ ಹೊರ ಬಂದ ಮೀನಿನಂತೆ ಆಡ್ತಿದ್ದಾರೆ: ರೇಣುಕಾಚಾರ್ಯ

Published

on

ನವದೆಹಲಿ: ಕಾಂಗ್ರೆಸ್ ಅಸ್ತಿತ್ವ ಇಲ್ಲದ ಕಾರಣ ಪ್ರತಿಭಟನೆ ಮಾಡುತ್ತಿದೆ. ರಾಹುಲ್ ಗಾಂಧಿ ನೀರಿನಿಂದ ಹೊರ ಬಂದ ಮೀನಿನಂತೆ ಆಡುತ್ತಿದ್ದಾರೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೃಷಿ ಕಾನೂನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ, ರೈತ ಪರ ಕಾಂಗ್ರೆಸ್ ನೆಪ ಮಾತ್ರಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಡಿಕೆಶಿ, ಸಿದ್ದರಾಮಯ್ಯ ಸಿಎಂ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ. ಇವರು ರೈತರ ವಿರೋಧಿಗಳು, ಹಿಂದೂ ವಿರೋಧಿಗಳು, ದೇಶದ ಕಾನೂನು ಗೌರವಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಹೋರಾಟ ಸಂಪೂರ್ಣ ಫೇಕ್. ನೆಪ ಮಾತ್ರಕ್ಕೆ ಹಸಿರು ಶಾಲು ಹಾಕಿದ್ದಾರೆ, ನಕಲಿ ಹೋರಾಟ ಮಾಡುತ್ತಿದ್ದಾರೆ, ನಾಚಿಕೆ ಆಗ್ಬೇಕು. ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಮೋದಿ ಸರ್ಕಾರ ರೈತ ಪರ ಕಾನೂನುಗಳನ್ನು ಜಾರಿ ಮಾಡಿದ್ದಾರೆ. ಆದರೆ ದಲ್ಲಾಳಿಗಳು ರೈತ ಸಂಘಟನೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಕೂಡ ಅಧಿಕಾರಕ್ಕಾಗಿ ಈ ಪ್ರತಿಭಟನೆ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿಎಸ್‍ವೈ ರೈತರ ಪರ ಹತ್ತಾರು ಯೋಜನೆ ಜಾರಿ ತಂದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಏನ್ ಮಾಡಿದ್ದಾರೆ ಉತ್ತರಿಸಬೇಕು ಎಂದರು.

Click to comment

Leave a Reply

Your email address will not be published. Required fields are marked *