Saturday, 16th November 2019

ಶಾಸಕ ಮೊಯ್ದೀನ್ ಬಾವಾ ರಿಂದ ಅಯ್ಯಪ್ಪಸ್ವಾಮಿ ಭಕ್ತಿಗೀತೆಗೆ ಅವಮಾನ- ವೈರಲ್ ಸಾಂಗ್

ಮಂಗಳೂರು: ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆಯಾದ ಕಲ್ಲು ಮುಳ್ಳು ಶಬರಿಮಲೆಕ್ಕ್ ಎನ್ನುವ ಭಕ್ತಿಗೀತೆಯನ್ನೇ ಅನುಕರಿಸುವ ಮೊಯ್ದೀನ್ ಬಾವಾ ಅವರ ಹೆಸರಿನ ಮೇಲೆ ರಚಿಸಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಬಾವಾ ಅವರನ್ನು ಪ್ರಚಾರಕ್ಕಾಗಿ ಪ್ರಸಿದ್ಧ ಭಕ್ತಿಗೀತೆಯ ದಾಟಿಯಲ್ಲಿ ಹೊಗಳಿ ರಚನೆ ಮಾಡಿರುವುದರಿಂದ ಹಿಂದುಗಳ ಭಾವನೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದಂತೆ ರಾಜಕಾರಣಿಗಳು ಜನರನ್ನು ಆಕರ್ಷಿಸಲು ಹಲವು ಕಸರತ್ತುಗಳನ್ನು ಆರಂಭಿಸಿದ್ದಾರೆ. ಇದರಂತೆ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಯ್ದೀನ್ ಬಾವ ಅವರನ್ನು ಹೊಗಳಿ ಹಾಡು ರಚನೆ ಮಾಡಲಾಗಿದೆ. ಸದ್ಯ ಈ ಹಾಡು ಸಾಮಾಜಿಕಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಪ್ರಚಾರಕ್ಕಾಗಿ ಪ್ರಸಿದ್ಧ ಭಕ್ತಿಗೀತೆಯ ದಾಟಿಯಲ್ಲಿ ಬಳಕೆ ಮಾಡಿರುವುದಿಂದ ರಾಜಕಾರಣಿಯನ್ನು ಹೊಗಳಲು ಬಳಸಿಕೊಂಡಿದ್ದು ಹಲವರ ಆಕ್ಷೇಪಕ್ಕೆ ಕಾರಣವಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಗಳನ್ನು ಉಲ್ಲೇಖಿಸಿ ತುಳು ಭಾಷೆಯಲ್ಲಿ ಹಾಡು ರಚಿಸಲಾಗಿದ್ದು ಹಿಂದುಗಳ ಆಕ್ರೋಶ ಕಟ್ಟಿಕೊಳ್ಳುವಂತಾಗಿದೆ. ಈ ಮೂಲಕ ಹಿಂದುಗಳ ಭಾವನೆ ಮತ್ತು ಹಿಂದು ದೇವರನ್ನು ಅವಮಾನಿಸಿದ್ದಾಗಿ ಶಾಸಕ ಮೊಯ್ದೀನ್ ಬಾವಾ ವಿರುದ್ಧ ಆರೋಪ ಕೇಳಿಬಂದಿದೆ.

ಈ ಹಿಂದೂ ವಿರೋಧಿ ಸಿಧ್ಧರಾಮಯ್ಯ ಸರ್ಕಾರ ನಿರಂತರ ಹಿಂದೂ ಧರ್ಮ ದೇವರುಗಳ ತೆಜೋವಧೆ ಮಠ ಮಂದಿರ ಶಾಲೆ ಎಲ್ಲಾವನ್ನು ಟಾರ್ಗೇಟ್ ಮಾಡಿದಾಯಿತು.ಇದೀಗ ಕೋಟ್ಯಾಂತರ ಭಕ್ತರು ಆರಾಧಿಸುವ ಶಬರಿಮಲೆ ಸ್ವಾಮಿಯ ಅಯ್ಯಪ್ಪನ ಭಜನೆಯನ್ನು ಬಿಟ್ಟಿಲ್ಲ.ಅಯ್ಯಪ್ಪ ಸ್ವಾಮಿಯ ಭಜನೆಯಲ್ಲಿ ಮೋಯ್ದಿನ್ ಭಾವನ ರಾಜಕೀಯ..ಈ ಬಾರಿ ನಿನ್ನ ಖೆಡ್ಡಾಕ್ಕೆ ಬೀಳಲು ಹಿಂದೂಗಳು ಮೂರ್ಖರಲ್ಲ ತಿಳಿದುಕೋ ಮೋಯ್ದಿನ್ ಬಾವಾ.#ಹಿಂದೂ_ವಿರೋಧಿ_ಕಾಂಗ್ರೆಸ್#

ಡಾ. ಭರತ್ ಶೆಟ್ಟಿ ಅಭಿಮಾನಿ ಬಳಗ Dr.Bharath shetty Fans Groupさんの投稿 2018年3月8日(木)

Leave a Reply

Your email address will not be published. Required fields are marked *