Connect with us

Corona

ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಸೇರಿ ಕುಟುಂಬದ ಐವರಿಗೆ ಕೊರೊನಾ

Published

on

ದಾವಣಗೆರೆ: ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಸೇರಿ ಅವರ ಕುಟುಂಬದ ಐವರಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ.

ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಮಲ್ಲಿಕಾರ್ಜುನ ಅವರು ಕೆಲದಿನಗಳ ಹಿಂದೆ ಮಸ್ಕಿ ಉಪಚುನಾವಣೆಯ ಪ್ರಚಾರಕ್ಕೆ ಹೋಗಿದ್ದರು. ಆ ಬಳಿಕ ಮನೆಗೆ ವಾಪಸ್ ಬಂದು ಕೊರೊನಾ ಟೆಸ್ಟ್ ಮಾಡಿಸಿದಾಗ ಸೋಂಕು ಇರುವುದು ಧೃಡಪಟ್ಟಿದೆ. ಬಳಿಕ ಮನೆಯವರೆಲ್ಲರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಿದಾಗ ಶಾಸಕರು ಸೇರಿ ಐವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಪತ್ನಿ, ಪುತ್ರ ಪ್ರಶಾಂತ್ ಹಾಗೂ ಅವರ ಪತ್ನಿ ಮತ್ತು ಮತ್ತೊಬ್ಬ ಪುತ್ರ ಮಲ್ಲಿಕಾರ್ಜುನ, ಶಾಸಕರ ಆಪ್ತ ಸಹಾಯಕ, ಮನೆಗೆಲಸದವರು ಸೇರಿ 8 ಜನರಿಗೆ ಸೋಂಕು ಇರುವುದು ದೃಢಪಟ್ಟಿದೆ. ನಂತರ ವೈದ್ಯರ ಸಲಹೆ ಮೇರೆಗೆ ಕುಟುಂಬ ಸದಸ್ಯರು ಹೋಮ್ ಐಸೋಲೆಶನ್‍ಗೆ ಒಳಗಾಗಿದ್ದಾರೆ.

Click to comment

Leave a Reply

Your email address will not be published. Required fields are marked *