Connect with us

ಸಿಎಂ ಬದಲಾವಣೆಗೆ ಸಮಯ ಇದಲ್ಲ: ಶಾಸಕ ಹರತಾಳು ಹಾಲಪ್ಪ

ಸಿಎಂ ಬದಲಾವಣೆಗೆ ಸಮಯ ಇದಲ್ಲ: ಶಾಸಕ ಹರತಾಳು ಹಾಲಪ್ಪ

– ಬದಲಾವಣೆ ಬಗ್ಗೆ ಮಾತನಾಡಲು ಸಿ.ಪಿ.ಯೋಗೇಶ್ವರ್ ಯಾರು?

ಶಿವಮೊಗ್ಗ: ಸಿಎಂ ಬದಲಾವಣೆಗೆ ಸಮಯ ಇದಲ್ಲ. ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸಾಗರ ಶಾಸಕ ಹರತಾಳು ಹಾಲಪ್ಪ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದಾರೆ

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕರು, ಬಿಜೆಪಿಯಲ್ಲಿ ಮೂರು ಬಣಗಳಾಗಿವೆ. ನಾಯಕತ್ವ ಬದಲಾಗಬೇಕು ಎಂದು ಹೇಳಲು ಯೋಗೇಶ್ವರ್ ಯಾರು? ಈ ಸಮಯದಲ್ಲಿ ಬದಲಾವಣೆ ಆಗಬೇಕಾದುದು ಸಿಎಂ ಅಲ್ಲ ಕೊರೊನಾ. ಜೊತೆಗೆ ಕೊರೊನಾ ಸೋಂಕಿನಿಂದ ಆಗಬೇಕಾದ ಸಾವು ನೋವುಗಳನ್ನ ಸಹ ತಡೆಯಬೇಕಿದೆ. ಆ ಕೆಲಸದಲ್ಲಿ ರಾಷ್ಟ್ರೀಯ ನಾಯಕರಿಂದ ಗ್ರಾಮ ಪಂಚಾಯತ್ ವರೆಗಿನ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಅವರಿಗೆ ಮನಸ್ಸಿದೆ ಇವರಿಗೆ ಕನಸಿದೆ ಆದರೆ…?

ಇಂತಹ ಸಂಕಷ್ಟ ಸಮಯದಲ್ಲಿ ಸಿಎಂ ಯಡಿಯೂರಪ್ಪ ಅವರು ಯುವಕರು ನಾಚುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾರ್ಗದರ್ಶನ ನೀಡುತ್ತಿದ್ದಾರೆ. ನಾವು ಕೂಡ ನಮ್ಮ ನಮ್ಮ ಕ್ಷೇತ್ರದಲ್ಲಿ ಅವರು ಮಾಡುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಹೀಗಿರುವಾಗ ಸಿಎಂ ಬದಲಾವಣೆ ಸಂದರ್ಭವೇ ಉದ್ಭವಿಸಲ್ಲ ಎಂದರು. ಇದನ್ನೂ ಓದಿ: ಬ್ಲಾಕ್‍ಮೇಲ್ ಮಾಡುವವರನ್ನು ಮಂತ್ರಿ ಮಾಡಬೇಡಿ ಎಂದಿದ್ದೆವು- ಯೋಗೆಶ್ವರ್‌ಗೆ ರಾಜೂಗೌಡ ಟಾಂಗ್

ಸಿ.ಪಿ ಯೋಗೇಶ್ವರ್ ಅವರ ಹೇಳಿಕೆಗೆಲ್ಲಾ ನಾವು ಉತ್ತರ ನೀಡುವುದಕ್ಕೆ ಆಗುವುದಿಲ್ಲ. ಅವರು ಎಷ್ಟರ ಮಟ್ಟಿಗೆ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳಸಿದ್ದಾರೆ ಅಂತ ಗೊತ್ತಿದೆ ಎಂದರು. ಅವರು ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವರಲ್ಲ. ಅವರು ವೈಯಕ್ತಿಕವಾಗಿ ದೊಡ್ಡವರಿರಬಹುದು. ಬೇರೆ ಬೇರೆ ಸ್ಥಾನಮಾನ ಗಳಿಸಿರಬಹುದು. ಅವರಿಗೆ ರಾಜಕೀಯ ಪ್ರಜ್ಞೆ ಎಷ್ಟಿದೆ ಅಂತ ಪ್ರಶ್ನೆ ಮಾಡಬೇಕಿದೆ. ಆದರೆ ಗುಂಪು ಎನ್ನುವ ವಿಷಯ ಹೇಳುವ ಅಧಿಕಾರ ಅವರಿಗಿಲ್ಲ. ಯಡಿಯೂರಪ್ಪನವರ ಬದಲಾವಣೆ ಮಾಡಬೇಕು ಎನ್ನುವುದಕ್ಕೆ ಅವರಿಗೇನು ಅಧಿಕಾರವಿದೆ ಎಂದು ಪ್ರಶ್ನಿಸಿದರು.

Advertisement
Advertisement