ಕೋಳಿಮರಿಯನ್ನು ರಕ್ಷಿಸಲು ಕೂಡಿಟ್ಟಿದ್ದ ಹಣವನ್ನು ಆಸ್ಪತ್ರೆಗೆ ತಂದ ಬಾಲಕನಿಗೆ ಪ್ರಶಸ್ತಿ

ಐಜ್ವಾಲ್: ಆಟವಾಡುವಾಗ ಕೋಳಿ ಮರಿ ಮೇಲೆ ಸೈಕಲ್ ಹರಿಸಿ ಬಳಿಕ ತನ್ನೊಂದಿಗೆ ಇದ್ದ ಹಣವನ್ನು ಆಸ್ಪತ್ರೆಗೆ ತೆಗೆದುಕೊಂಡು ಅದನ್ನು ರಕ್ಷಿಸಲು ಪ್ರಯತ್ನಪಟ್ಟ ಬಾಲಕನಿಗೆ ಶಾಲೆ ಮೆಚ್ಚುಗೆ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

6 ವರ್ಷದ ಡೆರೆಕ್ ಸಿ ಲಾಲ್ಚಾನ್ಹಿಮಾ ಬಾಲಕನ ಕಾರ್ಯ ನೋಡಿ ಶಾಲಾ ಸಿಬ್ಬಂದಿ ಆತನಿಗೆ ಸನ್ಮಾನ ಮಾಡಿದ್ದಾರೆ. ಶಾಲಾ ಸಿಬ್ಬಂದಿ ಅವರು ಡೆರೆಕ್‍ಗೆ ಶಾಲು ಹೊದಿಸಿದ್ದಾರೆ. ಮಿಜೋರಾಂನಲ್ಲಿ ಈ ಹಿಂದೆ ಈ ರೀತಿಯ ಶಾಲುಗಳನ್ನು ಯೋಧರಿಗೆ ಅಥವಾ ಮುಖ್ಯ ಅತಿಥಿಗಳಿಗೆ ಹಾಕಿ ಸನ್ಮಾನಿಸುತ್ತಿದ್ದರು. ಈಗ ಬಾಲಕನ ಶೌರ್ಯವನ್ನು ಮೆಚ್ಚಿದ ಶಾಲಾ ಸಿಬ್ಬಂದಿ ಈ ಶಾಲನ್ನು ಬಾಲಕನಿಗೆ ಹಾಕಿ ಸನ್ಮಾನಿಸಿದ್ದಾರೆ.

ಬಾಲಕನಿಗೆ ಶಾಲು ಹೊದಿಸಿ ಕೈಯಲ್ಲಿ ಪ್ರಶಸ್ತಿ ಹಿಡಿದುಕೊಂಡು ನಿಂತಿರುವ ಫೋಟೋವನ್ನು ಸಂಗಾ ಎನ್ನುವವರು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಬಾಲಕ ಕೋಳಿ ಮರಿಯನ್ನು ಆಸ್ಪತ್ರೆಗೆ ತೆಗೆದುಕೊಂಡು ಫೋಟೋವನ್ನು ಕೂಡ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು.  ಇದನ್ನೂ ಓದಿ: ಸೈಕಲಿಗೆ ಸಿಲುಕಿ ಕೋಳಿ ಮರಿ ಸಾವು – ಬಾಲಕನ ಕಾರ್ಯಕ್ಕೆ ಫಿದಾ ಆದ ನೆಟ್ಟಿಗರು!

ನಡೆದಿದ್ದೇನು?
ಆಟವಾಡುವ ವೇಳೆ ಬಾಲಕ ತುಳಿಯುತ್ತಿದ್ದ ಸೈಕಲ್ ಕೋಳಿ ಮರಿ ಮೇಲೆ ಹರಿದಿದ್ದು, ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿತ್ತು. ಕೂಡಲೇ ತನ್ನಿಂದಲೇ ಕೋಳಿ ಮರಿ ಸಾವನ್ನಪ್ಪಿದೆ ಎಂದು ತಿಳಿಸಿದ ಬಾಲಕ ತಾನು ಕೂಡಿಟ್ಟಿದ್ದ ಹಣದೊಂದಿಗೆ ಕೋಳಿ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತೆರಳಿದ್ದನು. ಆಸ್ಪತ್ರೆಗೆ ತೆರಳಿದ ಬಾಲಕ ವೈದ್ಯರಿಗೆ ತಾನು ತಂದಿದ್ದ ಹಣವನ್ನು ನೀಡಿ ಕೋಳಿ ಮರಿಗೆ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾನೆ. ಬಾಲಕನ ಈ ಫೋಟೋದೊಂದಿಗೆ ಆತನ ವಿವರಗಳನ್ನು `ಸಂಗಾ’ ಹೆಸರಿನ ವ್ಯಕ್ತಿಯೊಬ್ಬರು ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದು ಫೋಟೋ ವೈರಲ್ ಆಗಿತ್ತು.

Leave a Reply

Your email address will not be published. Required fields are marked *