Tuesday, 21st May 2019

Recent News

ಮಹಿಳಾ ಕ್ರಿಕೆಟ್‍ನಲ್ಲಿ ಮಿಥಾಲಿ ರಾಜ್ ವಿಶ್ವದಾಖಲೆ

ಹ್ಯಾಮಿಲ್ಟನ್: ಟೀಂ ಇಂಡಿಯಾ ನಾಯಕಿ ಮಿಥಾಲಿ ರಾಜ್ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯವನ್ನು ಆಡುವ ಮೂಲಕ 200 ಏಕದಿನ ಪಂದ್ಯಗಳನ್ನು ಆಡಿರುವ ವಿಶ್ವದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಪಡೆದರು.

ತಮ್ಮ 200ನೇ ಏಕದಿನ ಪಂದ್ಯದಲ್ಲಿ 28 ಎಸೆತಗಳನ್ನು ಎದುರಿಸಿದ ಮಿಥಾಲಿ ರಾಜ್ ಕೇವಲ 9 ರನ್ ಗಳಿಸಿ ಐತಿಹಾಸಿಕ ಪಂದ್ಯದಲ್ಲಿ ನಿರಾಸೆ ಮೂಡಿಸಿದರು. ಆದರೆ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಅಜೇಯ 63 ರನ್ ಸಿಡಿಸಿದ್ದ ಮಿಥಾಲಿ ರಾಜ್ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆಯಲು ಕಾರಣರಾಗಿದ್ದರು. ಅಂತಿಮ ಪಂದ್ಯದಲ್ಲಿ ಮಿಥಾಲಿ ರಾಜ್ 11 ರನ್ ಗಳಿಸಿದ್ದರೆ ನ್ಯೂಜಿಲೆಂಡ್ ವಿರುದ್ಧ 1 ಸಾವಿರ ರನ್ ಪೂರೈಸುತ್ತಿದ್ದರು. ಆದರೆ ಈ ಅವಕಾಶವನ್ನು ಕೈ ಚೆಲ್ಲಿದರು. ಇದರೊಂದಿಗೆ ತಂಡ 3ನೇ ಏಕದಿನ ಪಂದ್ಯದಲ್ಲಿ 8 ವಿಕೆಟ್ ಸೋಲು ಪಡೆಯಿತು. ಸರಣಿಯನ್ನ 2-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

ಉಳಿದಂತೆ 1999 ರಲ್ಲಿ ಏಕದಿನ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದ್ದ ಮಿಥಾಲಿ ರಾಜ್ ಬಳಿಕ ಭಾರತ ಆಡಿರುವ 263 ಏಕದಿನಗಳ ಪಂದ್ಯಗಳ ಪೈಕಿ 200 ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದಾರೆ. 36 ವರ್ಷದ ಮಿಥಾಲಿ ರಾಜ್ 51.33 ಸರಸಾರಿಯಲ್ಲಿ 6,622 ರನ್ ಗಳಿಸಿದ್ದು, 7 ಶತಕ ಹಾಗೂ 52 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಅಲ್ಲದೇ 10 ಟೆಸ್ಟ್ ಹಾಗೂ 85 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಮಿಥಾಲಿ ರಾಜ್ ಹೆಚ್ಚಿನ ಸಮಯ ಅಂತರಾಷ್ಟ್ರಿಯ ಕ್ರಿಕೆಟ್ ವೃತ್ತಿ ಜೀವನ ಹೊಂದಿರುವ ಆಟಗಾರ್ತಿಯಾಗಿದ್ದಾರೆ. ಪುರುಷರ ಕ್ರಿಕೆಟ್‍ಗೆ ಹೋಲಿಕೆ ಮಾಡಿದರೆ ಸಚಿನ್, ಜಯಸೂರ್ಯ, ಜಾವೇದ್ ಮಿಯಾಂದಾದ್ ಅವರ ನಂತರದ ನಾಲ್ಕನೇ ಸ್ಥಾನವನ್ನು ಮಿಥಾಲಿ ರಾಜ್ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Leave a Reply

Your email address will not be published. Required fields are marked *