Recent News

ಮುಂದಿನ ತಿಂಗಳು ತೆರೆ ಕಾಣಲಿದ್ದಾನೆ ಮಿಸ್ಸಿಂಗ್ ಬಾಯ್!

ಬೆಂಗಳೂರು: ತೊಂಭತ್ತರ ದಶಕದಲ್ಲಿ ನಡೆದಿದ್ದ ಮನಮಿಡಿಯುವ ಸತ್ಯಘಟನೆಯಾಧಾರಿತ ಚಿತ್ರ ಮಿಸ್ಸಿಂಗ್ ಬಾಯ್. ಕೊಲ್ಲ ಪ್ರವೀಣ್ ನಿರ್ಮಾಣ ಮಾಡಿರೋ ಈ ಸಿನಿಮಾವನ್ನು ರಘುರಾಮ್ ನಿರ್ದೇಶನ ಮಾಡಿದ್ದಾರೆ. ಎಲ್ಲರೂ ಕಾತರದಿಂದ ಕಾಯುತ್ತಿರೋ ಮಿಸ್ಸಿಂಗ್ ಬಾಯ್ ಬಿಡುಗಡೆಯ ದಿನಾಂಕವೀಗ ಪಕ್ಕಾ ಡಿಫರೆಂಟಾಗಿಯೇ ಜಾಹೀರಾಗಿದೆ.

ಮಿಸ್ಸಿಂಗ್ ಬಾಯ್ ಚಿತ್ರೀಕರಣ ಶುರುವಾದಂದಿನಿಂದಲೂ ಅದನ್ನು ಪ್ರೇಕ್ಷಕರ ಕುತೂಹಲದ ಕೇಂದ್ರದಿಂದ ಕದಲದಿರುವಂತೆ ನೋಡಿಕೊಂಡು ಬಂದವರು ರಘುರಾಮ್. ಇದೀಗ ಅವರು ಸಿದ್ಧಸೂತ್ರಗಳನ್ನು ಮೀರಿಕೊಂಡು ತಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಜಾಹೀರು ಮಾಡಿದ್ದಾರೆ.

ಪ್ರೆಸ್ ಮೀಟ್ ಮಾಡಿ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರಗಳ ರಿಲೀಸ್ ಡೇಟ್ ಅನೌನ್ಸ್ ಮಾಡೋದು ಮಾಮೂಲಿ. ಆದರೆ ರಘುರಾಮ್ ಅವರು ಕರ್ನಾಟಕವೂ ಸೇರಿದಂತೆ ವಿದೇಶಗಳಲ್ಲಿಯೂ ಇರುವ ಶ್ರೀಸಾಮಾನ್ಯರಿಂದಲೇ ಮಿಸ್ಸಿಂಗ್ ಬಾಯ್ ಬಿಡುಗಡೆ ದಿನಾಂಕ ಘೋಷಿಸಿರುವ ವೀಡಿಯೋವೊಂದನ್ನು ಅನಾವರಣಗೊಳಿಸಿದ್ದಾರೆ.

ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಮಂಗಳೂರು, ಬೆಳಗಾವಿ ಸೇರಿದಂತೆ, ದುಬೈ, ಜರ್ಮನಿ ಮುಂತಾದ ಪ್ರದೇಶಗಳಿಂಣದ ಮಾತಾಡಿರೋ ಜನಸಾಮಾನ್ಯರು ಮಿಸ್ಸಿಂಗ್ ಬಾಯ್ ಚಿತ್ರಕ್ಕೆ ಶುಭ ಕೋರಿ ಬಿಡುಗಡೆ ದಿನಾಂಕ ಅನಾವರಣಗೊಳಿಸಿದ್ದಾರೆ. ಈ ಕೆಲಸ ನಿಜಕ್ಕೂ ಕನ್ನಡ ಚಿತ್ರರಂಗದ ಮಟ್ಟಿಗೆ ತೀರಾ ಹೊಸತಾಗಿದೆ.

ಜನಸಾಮಾನ್ಯರೇ ಘೋಷಣೆ ಮಾಡಿರೋ ಪ್ರಕಾರ ಹೇಳೋದಾದರೆ ಇದೇ ಮಾರ್ಚ್ 22ರಂದು ಕೊಲ್ಲ ಪ್ರವೀಣ್ ನಿರ್ಮಾಣದ ಮಿಸ್ಸಿಂಗ್ ಬಾಯ್ ತೆರೆ ಕಾಣಲಿದೆ. ಮನ ಮಿಡಿಯುವ ಸತ್ಯ ಘಟನೆಯಾಧಾರಿತವಾದ ಈ ಚಿತ್ರ ನೋಡಲು ಎಲ್ಲ ವರ್ಗದ ಪ್ರೇಕ್ಷಕರೂ ಕಾತರರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *