ಚಿತ್ರದುರ್ಗ: ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ 9 ಯುವಕರನ್ನು ಪೊಲೀಸರು ಬಂಧಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆ ಬಳಿ ನಡೆದಿದೆ.
ಚಳ್ಳಕೆರೆ ಮೂಲದ ವಿವೇಕಾನಂದ, ಜಗದೀಶ, ತಿಪ್ಪೇಸ್ವಾಮಿ, ಶಿವಕುಮಾರ್, ವಿರುಪಾಕ್ಷ, ಬಸವರಾಜ, ಸುರೇಶ, ಮಾರುತಿ, ಶಿವಣ್ಣ ಬಂಧಿತ ಆರೋಪಿಗಳು. ಕುಡಿದ ಅಮಲಿನಲ್ಲಿ ಆರೋಪಿಗಳು ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ.
Advertisement
Advertisement
ಮಹಿಳೆಯರು ಗಾರ್ಮೆಂಟ್ ಕೆಲಸ ಮುಗಿಸಿ ಕ್ರೂಸರ್ ನಲ್ಲಿ ಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಈ ವೇಳೆ ಕಿಡಿಗೇಡಿಗಳು ಮತ್ತೊಂದು ಕ್ರೂಸರ್ ವಾಹನದಲ್ಲಿ ತೆರಳಿದ್ದಾರೆ. ಗನ್ನಾಯಕನಹಳ್ಳಿಯಿಂದ ಹರ್ತಿಕೋಟೆ ಗ್ರಾಮದವರೆಗೆ ಹಿಂಬಾಲಿಸಿ ದುರ್ವರ್ತನೆ ತೋರಿದ್ದಾರೆ.
Advertisement
ಹರ್ತಿಕೋಟೆ ಬಳಿ ಕ್ರೂಸರ್ ಚಾಲಕನ ಮೇಲೆ ಹಲ್ಲೆ ಆರೋಪ ಕೇಳಿ ಬಂದಿದೆ. ಹಲ್ಲೆಯನ್ನು ಬಿಡಿಸಲು ಹೋದ ಮಹಿಳೆಯರ ಜೊತೆಯೂ ಕಿಡಿಗೇಡಿಗಳು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಥಳೀಯರು ಕಿಡಿಗೇಡಿಗಳಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
Advertisement
ಐಮಂಗಲ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.