Tuesday, 12th November 2019

ಬೆಂಗ್ಳೂರಿನ ಟೆಕ್ಕಿಯನ್ನು ಕಿಡ್ನಾಪ್‍ಗೈದು ಚಾಕುವಿನಿಂದ ಕೈಗೆ ಇರಿದು 50 ಲಕ್ಷಕ್ಕೆ ಡಿಮ್ಯಾಂಡ್!

ಬೆಂಗಳೂರು: ನಗರದ ಟೆಕ್ಕಿಯನ್ನು ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ಮೇ 3ರಂದು ಸಂಜೆ ಸುಮಾರು 7.00 ಗಂಟೆಗೆ ಹೆಬ್ಬಾಳದ ಅನಂದಪುರ ಕ್ರಾಸ್ ನಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಜೀತಾ ಮಿತ್ರ(36) ಕಿಡ್ನಾಪ್ ಆದ ಟೆಕ್ಕಿ. ಇವರು ಆಂಧ್ರ ಮೂಲದವರಾಗಿದ್ದು, ಹತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಕಾರಿನಲ್ಲಿ ಬಂದ ನಾಲ್ಕು ಅಪರಿಚಿತ ವ್ಯಕ್ತಿಗಳು ಜೀತಾರನ್ನು ಕಿಡ್ನಾಪ್ ಮಾಡಿದ್ದು. ಕಾರಿನಲ್ಲಿ ಮನೆಗೆ ತೆರಳುತಿದ್ದ ವೇಳೆ ಕಿಡ್ನಾಪ್ ಮಾಡಿ ಚಾಕುವಿನಿಂದ ಕೈಗೆ ಇರಿದು 50 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.

ದುಷ್ಕರ್ಮಿಗಳು ಜೀತಾ ಮಿತ್ರನನ್ನು ಒಂದು ದಿನ ಕಾರಿನಲ್ಲಿ ಇಟ್ಟುಕೊಂಡು ಕಿರುಕುಳ ನೀಡಿದ್ದಾರೆ. ಬಳಿಕ ಜೀತಾ ತನ್ನ ಸ್ನೇಹಿತ ವಾಸೀಮ್ ಮೂಲಕ ಕಿಡ್ನಾಪರ್ಸ್ ಗೆ 18 ಲಕ್ಷ ಹಣ ನೀಡಿದ್ದಾರೆ. ಹಣ ಕೊಟ್ಟ ಬಳಿಕ ಜೀತಾ ಕಾರ್ ಇಟ್ಟುಕೊಂಡು ಪೊಲೀಸರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದಾರೆ.

ಘಟನೆಯ ಬಳಿಕ ಶಂಕೆಯ ಆಧಾರದ ಮೇಲೆ ಸ್ನೇಹಿತ ವಾಸೀಮ್ ಹಾಗೂ ನಾಲ್ಕು ಜನ ಕಿಡ್ನಾಪರ್ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published. Required fields are marked *