Wednesday, 19th February 2020

Recent News

ಮಗಳ ಸ್ಕರ್ಟ್ ಧರಿಸಿದ್ದೀರಾ?- ಶಾಹಿದ್ ಪತ್ನಿಯ ಕಾಲೆಳೆದ ನೆಟ್ಟಿಗರು

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಅವರ ಪತ್ನಿ ಮೀರಾ ರಜ್‍ಪುತ್ ಅವರ ಉಡುಪು ನೋಡಿ ಜನರು ಟ್ರೋಲ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಮೀರಾ ರಜ್‍ಪುತ್ ಅವರು ಅಡುಗೆ ಸಾಮಾಗ್ರಿಗಳನ್ನು ತರಲು ತಮ್ಮ ಮಗಳ ಜೊತೆ ಅಂಗಡಿಗೆ ಹೋಗಿದ್ದರು. ಈ ವೇಳೆ ಅವರು ಹಳದಿ ಬಣ್ಣದ ಸ್ಕರ್ಟ್ ಹಾಕಿ ಅದಕ್ಕೆ ಬಿಳಿ ಬಣ್ಣದ ಶರ್ಟ್ ಧರಿಸಿದ್ದರು. ಮೀರಾ ಈ ಉಡುಪು ಧರಿಸಿದ್ದಕ್ಕೆ ನೆಟ್ಟಿಗರ ಅವರ ಕಾಲೆಳೆಯಲು ಶುರು ಮಾಡಿದ್ದಾರೆ.

ಮೀರಾ ಅವರ ಡ್ರೆಸ್ ನೋಡಿ ಕೆಲವರು, ನಿಮ್ಮ ಮಗಳು ಮಿಶಾಳ ಸ್ಕರ್ಟ್ ಧರಿಸಿದ್ದೀರಾ ಎಂದು ಪ್ರಶ್ನಿಸುವ ಮೂಲಕ ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ನಿಮಗಿಂತ ನಿಮ್ಮ ಮಗಳ ಉದ್ದ ಬಟ್ಟೆ ಧರಿಸಿದ್ದಾಳೆ ಎಂದು ಕಮೆಂಟ್ ಮಾಡಿದ್ದಾರೆ.

ಅಲ್ಲದೆ ಕೆಲವರು, ಆಂಟಿ ಮಿಶಾಳ ಬಟ್ಟೆ ಧರಿಸಿದ್ದಾಳೆ ಎಂದು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರು, ಉಡುಪುಗಳಿಗೆ ಸ್ವಲ್ಪ ಹಣವನ್ನು ಖರ್ಚು ಮಾಡಿ. ಚಿಕ್ಕ ಉಡುಪಿನ ವಿರುದ್ಧ ನಾನಿಲ್ಲ. ಆದರೆ ನೀವು ನಿಮ್ಮ ಮಗಳ ಉಡುಪು ಧರಿಸಿದ್ದೀರಾ ಅದಕ್ಕೆ ಹೇಳುತ್ತಿದ್ದೇನೆ ಎಂದು ಕಾಲೆಳೆದಿದ್ದಾರೆ.

ಮೀರಾ ರಜ್‍ಪುತ್ ಅವರು ಲೈಮ್‍ಲೈಟ್‍ನಿಂದ ದೂರ ಇರುತ್ತಾರೆ. ಆದರೆ ಅವರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಮೀರಾ ಸಾಮಾಜಿಕ ಜಾಲತಾಣದಲ್ಲಿ ತುಂಬಾನೇ ಸಕ್ರಿಯರಾಗಿದ್ದು, ತಮ್ಮ ಮಕ್ಕಳಾದ ಮಿಶಾ ಹಾಗೂ ಜೈನ್‍ನ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ.

 

View this post on Instagram

 

#mirakapoor with daughter #mishakapoor snapped at foodhall today #viralbayani @viralbhayani

A post shared by Viral Bhayani (@viralbhayani) on

Leave a Reply

Your email address will not be published. Required fields are marked *