Connect with us

Bengaluru City

ಸುಧಾಕರ್ ಹೇಳಿಕೆ- ಬಿಜೆಪಿ ಶಾಸಕರಿಗೆ 2 ಆಯ್ಕೆ ನೀಡಿದ ಸಿದ್ದರಾಮಯ್ಯ

Published

on

ಬೆಂಗಳೂರು: ಸಚಿವ ಸುಧಾಕರ್ ಏಕಪತ್ನಿವ್ರತಸ್ಥ ಹೇಳಿಕೆ ಸಂಬಂಧ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಬಿಜೆಪಿ ಶಾಸಕರಿಗೆ ಎರಡು ಆಯ್ಕೆಗಳನ್ನ ನೀಡಿ ಇಕ್ಕಟ್ಟಿನಲ್ಲಿ ಸಿಲುಕಿಸುವ ತಂತ್ರ ರಚಿಸಿದ್ದಾರೆ.

“ರಾಜ್ಯದ ಯಾವ ಶಾಸಕರೂ ಏಕಪತ್ನಿವೃತಸ್ಥರಲ್ಲ” ಎಂಬ ಸಚಿವ ಸುಧಾಕರ್ ಹೇಳಿಕೆ ಬಿಜೆಪಿ ಶಾಸಕರಿಗೂ ಅನ್ವಯವಾಗುವ ಕಾರಣ, ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲರೂ ತಕ್ಷಣ ತಮ್ಮ ವೈವಾಹಿಕ ಸಂಬಂಧವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಆಯ್ಕೆ 1: ಸುಧಾಕರ್ ಹೇಳಿಕೆಯನ್ನು ಬಿಜೆಪಿ ಶಾಸಕರು ವಿರೋಧಿಸುವುದಾಗಿದ್ದರೆ ನಮ್ಮ ಪಕ್ಷದ ಶಾಸಕರೆಲ್ಲರೂ ಸ್ವಯೀಚ್ಚೆಯಿಂದ ತನಿಖೆಗೆ ಒಳಪಡಲು ನಿರ್ಧರಿಸಿದಂತೆ ಅವರೂ ಕೂಡಾ ಮುಖ್ಯಮಂತ್ರಿ ಅವರಿಗೆ ತಕ್ಷಣ ಪತ್ರ ಬರೆದು ತಮ್ಮ ಬಗ್ಗೆ ಕೂಡಾ ತನಿಖೆ ನಡೆಯಬೇಕೆಂದು ಮನವಿ ಮಾಡಬೇಕು. ಇದನ್ನೂ ಓದಿ: ಎಂಎಲ್‍ಸಿ, ಲೋಕಸಭಾ ಸದಸ್ಯರನ್ನು ಯಾಕೆ ಬಿಟ್ಬುಟ್ರು..?: ರಾಮಲಿಂಗಾ ರೆಡ್ಡಿ

ಆಯ್ಕೆ 2: ಸಚಿವ ಸುಧಾಕರ್ ಹೇಳಿಕೆಯನ್ನು ಬಿಜೆಪಿ ಶಾಸಕರು ಒಪ್ಪಿಕೊಳ್ಳುವುದಾದರೆ, ರಾಜ್ಯ ಸರ್ಕಾರ ತಕ್ಷಣ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 494 ಮತ್ತು 495ರ ಅನ್ವಯ ಕಾನೂನು ಕ್ರಮಕೈಗೊಳ್ಳಬೇಕು. 1955ರ ಹಿಂದೂ ವಿವಾಹ ಕಾಯ್ದೆಯಡಿ ಬಹುಪತ್ನಿತ್ವ ಕಾನೂನು ಪ್ರಕಾರ ಅಪರಾಧವಾಗಿದೆ. ಇದನ್ನೂ ಓದಿ: ಸ್ವಪಕ್ಷೀಯರಿಂದಲೇ ಟೀಕೆ – ವಿಷಾದ ವ್ಯಕ್ತಪಡಿಸಿದ ಸುಧಾಕರ್‌

ಸುಧಾಕರ್ ಹೇಳಿದ್ದೇನು?: ಆರು ವಲಸಿಗ ಸಚಿವರು ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದಕ್ಕೆ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‍ನಲ್ಲಿ ಧರಣಿ ನಡೆಸ್ತಿರೋದರಿಂದ ಸುಧಾಕರ್, ಎಲ್ಲಾ 225 ಶಾಸಕರ ಚಾರಿತ್ರ್ಯವನ್ನು ಪ್ರಶ್ನಿಸಿದ್ದರು. ಯಾರಿಗೆ ಅನೈತಿಕ ಸಂಬಂಧ ಇದೆ, ಯಾರಿಗೆ ವಿವಾಹೇತರ ಸಂಬಂಧ ಇದೆ ಎನ್ನುವುದರ ಬಗ್ಗೆ ತನಿಖೆ ಆಗಲಿ. ನೈತಿಕತೆಯ ಪ್ರಶ್ನೆ ಬಂದಾಗ ಸಿದ್ದರಾಮಯ್ಯ, ಕುಮಾರಸ್ವಾಮಿ, ರಮೇಶ್ ಕುಮಾರ್, ಡಿಕೆ ಶಿವಕುಮಾರ್, ಮುನಿಯಪ್ಪ ಎಲ್ಲರೂ ಸತ್ಯ ಹರಿಶ್ಚಂದ್ರರು, ಏಕಪತ್ನಿವ್ರತಸ್ಥರು, ಸಮಾಜಕ್ಕೆ ಮಾದರಿಯಾದವರು. ಇವರೂ ತನಿಖೆಗೆ ಒಪ್ಪಿಕೊಳ್ಳಲಿ. ನನ್ನದು ಸೇರಿದಂತೆ ಎಲ್ಲರ ಬಂಡವಾಳ ಏನು ಅಂತಾ ಗೊತ್ತಾಗುತ್ತದೆ ಎಂದು ಒತ್ತಾಯಿಸಿ ಬಹಿರಂಗ ಸವಾಲೆಸೆದಿದ್ದರು. ಇದನ್ನೂ ಓದಿ: ಸುಧಾಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಅಸ್ತ್ರ ಬಳಕೆಗೆ ಕಾಂಗ್ರೆಸ್ ನಿರ್ಧಾರ

Click to comment

Leave a Reply

Your email address will not be published. Required fields are marked *