Connect with us

Bengaluru City

ನಾಲ್ಕು ವಾರಗಳ ಷರತ್ತು ವಿಧಿಸಿ ಹೌಸ್ ಫುಲ್ ಪ್ರದರ್ಶನಕ್ಕೆ ಗ್ರೀನ್‍ ಸಿಗ್ನಲ್

Published

on

– ಕೊರೊನಾ ಹೆಚ್ಚಾದಲ್ಲಿ ಶೇ.50ರಷ್ಟು ಸೀಟ್‍ಗೆ ಮಾತ್ರ ಅನುಮತಿ

ಬೆಂಗಳೂರು: ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಸೀಟ್ ಭರ್ತಿಗೆ ಅವಕಾಶ ನೀಡಲಾಗಿದ್ದು, ನಾಲ್ಕು ವಾರಗಳಿಗೆ ಮಾತ್ರ ಅನ್ವಯವಾಗಲಿದೆ. ಒಂದು ವೇಳೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾದಲ್ಲಿ ಈ ಹಿಂದಿನಂತೆ ಶೇ.50 ಸೀಟ್ ಭರ್ತಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಸಿಎಂ ಸಲಹೆ ಮೇರೆಗೆ ಸಿನಿಮಾ ರಂಗದ ಗಣ್ಯರೊಂದಿಗೆ ಸಭೆ ನಡೆಸಿ, ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.100ರಷ್ಟು ಥಿಯೇಟರ್ ಭರ್ತಿಗೆ ಅನುಮತಿ ನೀಡಲಾಗಿದ್ದು, ಇದು ನಾಲ್ಕು ವಾರಗಳಿಗೆ ಮಾತ್ರ ಅನ್ವಯವಾಗಲಿದೆ. ಜನರು ಸಹ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. 4 ವಾರಗಳಲ್ಲಿ ಥಿಯೇಟರ್‍ಗಳಲ್ಲಿ ಹೌಸ್‍ಫುಲ್‍ನಿಂದ ಸಮಸ್ಯೆಯಾದ್ರೆ ಹಳೆಯ ನಿಯಮವನ್ನೇ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಅನ್ವಯ ನಿನ್ನೆ ರಾಜ್ಯದಲ್ಲಿ ಮಾರ್ಗಸೂಚಿ ಹೊರಡಿಸಿದ್ದು, ಅದಕ್ಕೆ ಚಲನಚಿತ್ರ ರಂಗ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸೂಚನೆಯಂತೆ ನಡೆದ ಸಭೆಯಲ್ಲಿ 4 ವಾರ ಶೇ.100 ರಷ್ಟು ಭರ್ತಿಗೆ ಅನುಮತಿ ನೀಡಲಾಗಿದೆ. ಆದರೆ ಇದಕ್ಕೆ ಕಠಿಣ ಮಾರ್ಗಸೂಚಿ ಇರಲಿದೆ. ನಾಳೆಯೇ ಮಾಲ್, ಚಿತ್ರಮಂದಿರಗಳಿಗೆ ಅನ್ವಯವಾಗುವಂತೆ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುವುದು. 4 ವಾರದಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದರೆ ಖಂಡಿತ ನಿಯಮ ಬದಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಸಿಸಿ ಪಾಟೀಲ್ ಮಾತನಾಡಿ, ಕಳೆದ 10-11 ತಿಂಗಳಲ್ಲಿ ಚಿತ್ರೋದ್ಯಮ ಸಾಕಷ್ಟು ಕಷ್ಟ ಅನುಭವಿಸಿದೆ. ಈ ನಿರ್ಧಾರಕ್ಕೆ ಸಲಹಾ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ. ಶುಕ್ರವಾರದಿಂದ ಈ ನಿಯಮ ಅನ್ವಯವಾಗಲಿದೆ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *