ಸಿಎಂ ಬದಲಾವಣೆ ಕಾಂಗ್ರೆಸ್‍ನ ಅಪಪ್ರಚಾರ: ಎಸ್. ಅಂಗಾರ

Advertisements

ಉಡುಪಿ: ಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್‍ನ ಅಪಪ್ರಚಾರವಾಗಿದೆ ಎಂದು ಸಚಿವ ಎಸ್ ಅಂಗಾರ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಸಿಎಂ ಬದಲಾವಣೆ ಚರ್ಚೆ ವಿಚಾರಕ್ಕೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಅಪಪ್ರಚಾರಗಳನ್ನು ಮಾಡಿ ರಾಜಕೀಯ ಲಾಭ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ವಿಪಕ್ಷ ಕಾಂಗ್ರೆಸ್ ಕುತಂತ್ರ ರಾಜಕಾರಣ ಮಾಡುತ್ತಿದೆ. ಅಪಪ್ರಚಾರ ಮಾಡದೆ ವಿಪಕ್ಷಗಳಿಗೆ ಬೇರೆ ದಾರಿ ಇಲ್ಲ ಎಂದರು.

Advertisements

ಸಿಎಂ ಬದಲಾವಣೆಯ ಯಾವುದೇ ಅಭಿಪ್ರಾಯಗಳು ನಮ್ಮೊಳಗೆ ಚರ್ಚೆಯಾಗಿಲ್ಲ. ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಬೊಮ್ಮಾಯಿ ಅವರನ್ನು ನಮ್ಮ ನಾಯಕರು ಎಂದು ಪಕ್ಷ ತೀರ್ಮಾನ ಮಾಡಿದೆ ಎಂದು ಹೇಳಿದರು.

ಬಸವರಾಜ್ ಬೊಮ್ಮಾಯಿ ಅವರಿಗೆ ಪಕ್ಷ ಸಿಎಂ ಸ್ಥಾನವನ್ನು ಕೊಟ್ಟಿದೆ. ಪಕ್ಷ ಅಧಿಕಾರ ಬದಲಾವಣೆಯ ತೀರ್ಮಾನ ತೆಗೆದುಕೊಂಡರೆ ಮಾತ್ರ ಬದಲಾವಣೆಯಾಗುತ್ತದೆ ಎಂದು ಅಂಗಾರ ತಿಳಿಸಿದರು. ಇದನ್ನೂ ಓದಿ: ಭಾರತದ ಪ್ರತಿ ಇಂಚು ಜಾಗವೂ ಹಿಂದೂಗಳದ್ದೇ: ರೇಣುಕಾಚಾರ್ಯ

Live Tv

Advertisements
Exit mobile version