Karnataka
ಖಂಡಿತವಾಗಿಯೂ ರಾಜ್ಯದಲ್ಲಿ ಲವ್ ಜಿಹಾದ್ ಬ್ಯಾನ್ ಮಾಡ್ತೇವೆ: ಆರ್.ಅಶೋಕ್

– ಲವ್ ಜಿಹಾದ್ ಆರೋಪಿಗಳನ್ನು ಪರಪ್ಪನ ಅಗ್ರಹಾರಕ್ಕೆ ಕಳಿಸ್ತೇವೆ
ಮಂಡ್ಯ: ದೇಶದಲ್ಲಿ ಲವ್ ಜಿಹಾದ್ ಇರೋದು ದೊಡ್ಡ ಅಪರಾಧ, ಏನೇ ಆಗಲಿ ನಾವು ಕರ್ನಾಟಕದಲ್ಲಿ ಲವ್ ಜಿಹಾದ್ ಬ್ಯಾನ್ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಅವರು, ಪ್ರೀತಿ ಬೇರೆ ಲವ್ ಜಿಹಾದ್ ಬೇರೆ. ಅವರು ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ ಮಾಡಿ ಮದುವೆಯಾಗುತ್ತಾರೆ. ಅದೇ ವರ್ಷದಲ್ಲಿ ಮೂರು ಮದುವೆಯಾಗುತ್ತಾರೆ. ಮತಾಂತರ ಉದ್ದೇಶದಿಂದ ಇದು ಹಿಂದೂ ಹೆಣ್ಣು ಮಕ್ಕಳನ್ನು ವಿವಾಹವಾಗುತ್ತಾರೆ. ಇದು ಲವ್ ಜಿಹಾದ್, ಇದನ್ನು ನಾವು ತಡೆದೇ ತಡೆಯುತ್ತೇವೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಮತಾಂತರ ಮಾಡಿ ಮದುವೆಯಾದರೆ ಒಂದು, ಎರಡು ಲಕ್ಷ ಪರಿಹಾರ ನೀಡುತ್ತಿದ್ದಾರೆ. ಆದರೆ ನಾವು ಕರ್ನಾಟಕದಲ್ಲಿ ಬ್ಯಾನ್ ಮಾಡುತ್ತೇವೆ. ಲವ್ ಜಿಹಾದ್ ಮಾಡುವವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದರು.
ಇದನ್ನು ತಡೆಯಲು ಸಿದ್ದರಾಮಯ್ಯ ಯಾರು? ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರೋದು. ಅವರು ಕ್ರಾಸ್ ಬೀಡ್ ಅಂತಾ ಕರೆದಿದ್ದಾರೆ, ಪ್ರಾಣಿಗಳಿಗೆ ಬಳಸುವ ಶಬ್ದವನ್ನು ಮನುಷ್ಯರಿಗೆ ಬಳಕೆ ಮಾಡಿದ್ದಾರೆ. ಈ ಪದ ಬಳಕೆಯಲ್ಲಿ ಅವರು ಎಂತಹವರು ಎಂದು ತಿಳಿಯುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
