Connect with us

Districts

ಮತಾಂಧ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಲು ಸಿದ್ದರಾಮಯ್ಯಗೆ ಧಮ್ ಇಲ್ಲ: ಈಶ್ವರಪ್ಪ

Published

on

– ಜಮೀರ್ ಅಹಮದ್ ಒಬ್ಬ ರಾಷ್ಟ್ರದ್ರೋಹಿ

ಶಿವಮೊಗ್ಗ: ಬೆಂಗಳೂರಿನ ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿಯಲ್ಲಿ ಗಲಭೆ ನಡೆದು ಆಸ್ತಿಪಾಸ್ತಿ ಹಾನಿಯಾಗಿದೆ. ಹೀಗಿದ್ದರೂ ಕಾಂಗ್ರೆಸ್ ನಾಯಕರು ಮತಾಂಧ ಮುಸಲ್ಮಾನರ ವಿರುದ್ಧ ಒಂದೇ ಒಂದು ಪ್ರತಿಕ್ರಿಯೆ ನೀಡುತ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತಾಂಧ ಮುಸಲ್ಮಾನರ ವಿರುದ್ಧ ಹೇಳಿಕೆ ನೀಡಲು ಧಮ್ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ.

ಶಿವಮೊಗ್ಗದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವರು, ಡಿಕೆಶಿ ಮತ್ತು ಸಿದ್ದರಾಮಯ್ಯ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ. ನಿಮ್ಮ ಇಂತಹ ಕೆಟ್ಟ ರಾಜಕಾರಣದಿಂದಲೇ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೇ ಅಂತ ಭೂತಗನ್ನಡಿ ಹಾಕಿ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಮೌಲ್ಯಯುತ ರಾಜಕಾರಣ ಮಾಡಿ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಗಲಭೆ ನಡೆದು ಶಾಸಕರ ಮನೆ ಧ್ವಂಸ ಆಗಿದೆ. ಮಾಧ್ಯಮದವರ ಮೇಲೆ ಹಲ್ಲೆ ನಡೆದಿದೆ. ಪೊಲೀಸರನ್ನು ಕೊಲೆ ಮಾಡಿ ಅಂತ ಹೇಳಿರುವ ಹೇಳಿಕೆ ರೆಕಾರ್ಡ್ ಇದೆ. ಶಂಕರಾಚಾರ್ಯರ ಪ್ರತಿಮೆ ಮೇಲೆ ಎಸ್‍ಡಿಪಿಐ ನವರು ಬಾವುಟ ಹಾರಿಸಿದ್ದಾರೆ. ಹೀಗಿದ್ದರೂ ಕಾಂಗ್ರೆಸ್ ನಾಯಕರು ಒಂದೇ ಒಂದು ಖಂಡನೆ ವ್ಯಕ್ತಪಡಿಸಿಲ್ಲ. ಇದೇನಾ ನಿಮ್ಮ ಮೌಲ್ಯಯುತ ರಾಜಕಾರಣ ಎಂದು ಸಚಿವರು ಪ್ರಶ್ನಿಸಿದ್ದಾರೆ.

ಡಿಕೆಶಿಗೆ ಮತಾಂಧ ಮುಸಲ್ಮಾನರ ಬಗ್ಗೆ ಆಸಕ್ತಿ ಜಾಸ್ತಿ. ಮತಾಂಧ ಮುಸಲ್ಮಾನರ ರಕ್ಷಣೆಯೇ ಕಾಂಗ್ರೆಸ್ ಆಸ್ತಿ. ಸಿದ್ದರಾಮಯ್ಯ ಹೇಳ್ತಾರೆ ಇದೊಂದು ಕೋಮುಗಲಭೆ ಅಂತ. ಸಿದ್ದರಾಮಯ್ಯ ಅವರೇ ನೀವು ಮುಖ್ಯಮಂತ್ರಿ ಆಗಿದ್ದವರು, ನಿಮಗೆ ಕೋಮುಗಲಭೆ ಅಂದ್ರೆ ಏನು ಅಂತ ಗೊತ್ತಿಲ್ಲವಾ. ನಿಮಗೆ ಕೋಮುಗಲಭೆ ಬಗ್ಗೆ 1 ನೇ ತರಗತಿಯ ಪಾಠ ಮಾಡಬೇಕಿದೆ ಎಂದರು.

ಇದೇ ಘಟನೆಯಲ್ಲಿ ಏನಾದರೂ ಒಂದೇ ಒಂದು ಹಿಂದು ಸಂಘಟನೆ ಈ ರೀತಿ ಬೆಂಕಿ ಹಾಕಿದ್ದರೆ ಅಥವಾ ವಾಹನ ಸುಟ್ಟು ಹಾಕಿದ್ದರೆ ಸಿದ್ದರಾಮಯ್ಯ ಈ ರೀತಿ ಹೇಳಿಕೆ ಕೊಡುತ್ತಿದ್ರಾ ಎಂದು ಪ್ರಶ್ನಿಸಿದರು. ಈ ಹಿಂದಿನ ಕಾಂಗ್ರೆಸ್ ರಾಷ್ಟ್ರಕ್ಕಾಗಿ, ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿತ್ತು. ಆಗಾಗಿ ಈ ಹಿಂದಿನ ಕಾಂಗ್ರೆಸ್ಸೇ ಬೇರೆ. ಇಂದಿನ ಕಾಂಗ್ರೆಸ್ಸೇ ಬೇರೆ. ಇವರು ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ. ಖುರ್ಚಿಗಾಗಿ ಮತಾಂಧ ಮುಸಲ್ಮಾನರಿಗೆ ಬೆಂಬಲ ನೀಡುತ್ತಿದ್ದಾರೆ. ಇದು ರಾಜ್ಯದಲ್ಲಿ ತುಂಬ ದಿನ ನಡೆಯುವುದಿಲ್ಲ ಎಂದು ಸಚಿವ ಈಶ್ವರಪ್ಪ ಎಚ್ಚರಿಸಿದರು.

ಜಮೀರ್ ಅಹಮದ್ ಅವನೊಬ್ಬ ರಾಷ್ಟ್ರದ್ರೋಹಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಗಲಭೆಗಳು ನಡೆದಾಗ ಕೆಲವರು ಮುಸಲ್ಮಾನರ ಲೀಡರ್ ಆಗಲು ಓಡಾಡುತ್ತಾರೆ. ಇದರಲ್ಲಿ ಆತನು ಒಬ್ಬ. ಮುಸಲ್ಮಾನರ ಲೀಡರ್ ಆಗಲು ಜಮೀರ್ ಈ ರೀತಿ ಮಾಡುತ್ತಿದ್ದಾನೆ. ಕೋಮುಗಲಭೆ ಗಲಭೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದವರು ಅಮಾಯಕರು ಎಂದು ಹೇಳಿಕೆ ನೀಡುತ್ತಿದ್ದಾನೆ. ಇದು ಕೋಮು ಗಲಭೆ ಅಲ್ಲ. ಬದಲಿಗೆ ಇದು ಮತಾಂಧ ಮುಸ್ಲಿಂ ದಂಗೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *