Connect with us

Chikkaballapur

ಹಾಲಿನ ಅಭಿಷೇಕ, ಚಾಕ್ಲೇಟ್ ಹಾರ ಹಾಕಿ ಸುಧಾಕರ್ ಹುಟ್ಟುಹಬ್ಬ ಆಚರಣೆ

Published

on

– 15 ಅಡಿ ಎತ್ತರದ ಕಟೌಟ್‍ಗೆ ತಾಂತ್ರಿಕತೆ ಮೂಲಕ ಹಾಲಿನ ಅಭಿಷೇಕ

ಚಿಕ್ಕಬಳ್ಳಾಪುರ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಹಾಗೂ ಅಭಿಮಾನಿಗಳು ಸುಧಾಕರ್ ಅವರ ಬೃಹದಾಕಾರದ ಕಟೌಟ್‍ಗೆ ಹಾಲಿನ ಅಭಿಷೇಕ ನೇರವೇರಿಸಿದರು.

ನಗರ ಹೊರವಲಯದ ಬಿಬಿ ರಸ್ತೆಯ ಪೆಟ್ರೋಲ್ ಬಂಕ್ ಪಕ್ಕದ ಖಾಲಿ ಜಾಗದಲ್ಲಿ ಬೆಂಬಲಿಗರು 15 ಅಡಿ ಎತ್ತರದ ಕಟೌಟ್ ನಿಲ್ಲಿಸಿ ಹೂವಿನ ಅಲಂಕಾರ ಮಾಡಿದ್ದರು. ಅಲ್ಲದೇ ತಾಂತ್ರಿಕತೆ ಮೂಲಕ ಕಟೌಟ್‍ಗೆ ನಿರಂತರವಾಗಿ ಹಾಲಿನ ಅಭಿಷೇಕ ಆಗುವಂತೆ ಮಾಡಿ ಹಾಲಿನ ಅಭಿಷೇಕ ನಡೆಸಿದರು. ಇದನ್ನೂ ಓದಿ: ಮಧ್ಯರಾತ್ರಿ ಆಸ್ಪತ್ರೆಯಿಂದ್ಲೇ ಪತ್ನಿ, ಮಗಳಿಂದ ಸಚಿವ ಡಾ.ಸುಧಾಕರ್‌ಗೆ ವಿಶ್

ಇದಲ್ಲದೆ ಕಟೌಟ್‍ಗೆ ಚಾಕ್ಲೇಟ್‍ನಲ್ಲಿ ಮಾಡಿದ್ದ ಹಾರ ಹಾಕಿದ್ದು ವಿಶೇಷವಾಗಿತ್ತು. ಸದ್ಯ ಕ್ವಾರಂಟೈನ್‍ನಲ್ಲಿರುವ ಸಚಿವ ಸುಧಾಕರ್ ಅನುಪಸ್ಥಿತಿಯಲ್ಲಿ ಖುದ್ದು ಅವರ ಬೆಂಬಲಿಗರು ಕೇಕ್‍ಕಟ್ ಮಾಡಿ ಹಂಚಿ ಸವಿದರು. ಕೇಕ್‍ಕಟ್ ಮಾಡಿ ಪರಸ್ಪರ ತಿನ್ನಿಸುವ ವೇಳೆ ಬೆಂಬಲಿಗರು ಸಾಮಾಜಿಕ ಅಂತ ಮರೆತ್ತಿದ್ದರು.

ಶ್ರೀ ಜಾಲಾರಿ ನರಸಿಂಹಸ್ವಾಮಿ ದೇವಾಲಯದಲ್ಲಿ ಅವರ ಬೆಂಬಲಿಗರು ವಿಶೇಷ ಪೂಜೆ ಸಲ್ಲಿಸಿ, ಸಚಿವ ಸುಧಾಕರ್ ಕುಟುಂಬಸ್ಥರು ಕೊರೊನಾದಿಂದ ಶೀಘ್ರ ಗುಣಮುಖರಾಗಲಿ ಅಂತ ಪ್ರಾರ್ಥಿಸಿದರು.

ಇನ್ನೂ ಸುಧಾಕರ್ ಪತ್ನಿ ಹಾಗೂ ಮಗಳು ಮಧ್ಯರಾತ್ರಿ ಆಸ್ಪತ್ರೆಯಿಂದಲೇ ಶುಭಾಶಯ ತಿಳಿಸಿದ್ದಾರೆ. ಟಿಕ್ ಟಾಕ್ ಮಾಡಿರುವ ಸಚಿವರ ಪತ್ನಿ ಹಾಗೂ ಮಗಳು, ಹುಟ್ಟುಹಬ್ಬದ ಶುಭಾಯಗಳು ಎಂದು ತಿಳಿಸಿದ್ದಾರೆ. ಅಪ್ಪ ನೀನು ಎಲ್ಲಾ ಸಮಯದಲ್ಲೂ ಖುಷಿಯಾಗರಬೇಕು. ಲವ್ ಯೂ ಅಪ್ಪ. ನಿಮ್ಮ ಪ್ರೀತಿಯನ್ನ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ವಿಡಿಯೋದಲ್ಲಿ ಬರೆದುಕೊಳ್ಳುವ ಮೂಲಕ ಮಗಳು ಅಪ್ಪನ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾಳೆ.