Bengaluru City
ಇವರು ಹೇಗೆ, ಏಕೆ ಕೆಪಿಸಿಸಿ ಅಧ್ಯಕ್ಷರಾದರೆಂದು ನಿಮಗೆ ತಿಳಿದಿಲ್ಲ: ಸಿಟಿ ರವಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದುರ್ಗಾ ಪೂಜೆ ಮಾಡಿರುವ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟಾಂಗ್ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾನುವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಆಯುಧ ಪೂಜೆ ನಿಮಿತ್ತ ದುರ್ಗಾ ಪೂಜೆ ನೆರವೇರಿಸಿದ್ದು, ಈ ಫೋಟೋ ಹಂಚಿಕೊಂಡು ಸಚಿವ ಸಿ.ಟಿ.ರವಿ ಟ್ವೀಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ. ಇವರು ಹೇಗೆ ಮತ್ತು ಏಕೆ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾದರೆಂದು ನಿಮಗೆ ತಿಳಿದಿಲ್ಲ ಎಂದು ಲೇವಡಿ ಮಾಡಿದ್ದಾರೆ.
No you know how and why he became the President of Karnataka CONgress ! ! ! pic.twitter.com/3LcUNNYfnT
— C T Ravi 🇮🇳 ಸಿ ಟಿ ರವಿ (@CTRavi_BJP) October 26, 2020
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ದುರ್ಗಾ ಪೂಜೆ ನೆರವೇರಿಸಿದ್ದ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಬೃಹತ್ ಭಾವಚಿತ್ರದ ಮುಂದೆಯೇ ದುರ್ಗೆಯ ಫೋಟೋ ಇಟ್ಟು ಪೂಜೆ ಮಾಡಿದ್ದರು. ಈ ಕುರಿತು ಸಾಕಷ್ಟು ಚರ್ಚೆ ಸಹ ನಡೆದಿತ್ತು. ಇದೀಗ ಸಚಿವ ಸಿಟಿ ರವಿ ಸಹ ಕಾಲೆಳೆದಿದ್ದಾರೆ.
Gems from Bharat’s number 1 Comedian 😂😂😂 pic.twitter.com/knxrMzqati
— C T Ravi 🇮🇳 ಸಿ ಟಿ ರವಿ (@CTRavi_BJP) October 24, 2020
ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚೀನಾ ಕುರಿತು ಮಾತನಾಡಿದ ವಿಡಿಯೋ ಟ್ವೀಟ್ ಮಾಡಿ ಸಿ.ಟಿ.ರವಿ ವ್ಯಂಗ್ಯವಾಡಿದ್ದರು. ಭಾರತದ ನಂಬರ್-1 ಕಾಮಿಡಿ ರತ್ನ ಇವರು ಎಂದು ಸಾಲುಗಳನ್ನು ಬರೆದು ವಿಡಿಯೋ ಟ್ವೀಟ್ ಮಾಡಿದ್ದರು.
