Tuesday, 19th November 2019

Recent News

ಆಂಧ್ರಪ್ರದೇಶದ ರಾಜ್ಯಪಾಲರಾಗಿ ನೇಮಕ – ಸುಷ್ಮಾ ಸ್ವರಾಜ್ ಸ್ಪಷ್ಟನೆ

ನವದೆಹಲಿ: ಬಿಜೆಪಿಯ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಆಂಧ್ರಪ್ರದೇಶಕ್ಕೆ ನೂತನ ರಾಜ್ಯಪಾಲರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈಗ ಈ ಬಗ್ಗೆ ಸ್ವತಃ ಸುಷ್ಮಾ ಸ್ವರಾಜ್ ಟ್ವೀಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸುಷ್ಮಾ ಸ್ವರಾಜ್ ತಮ್ಮ ಟ್ವಿಟ್ಟರಿನಲ್ಲಿ ಆಂಧ್ರಪ್ರದೇಶ ರಾಜ್ಯಪಾಲೆಯಾಗಿ ನೇಮಕ ಆಲ್ಲ, ನೇಮಕ ವಿಚಾರ ಎಲ್ಲಾ ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಸಚಿವ ಹರ್ಷವರ್ಧನ್ ಸಿಂಗ್ ಸೋಮವಾರ ರಾತ್ರಿ 9 ಗಂಟೆಗೆ ಸುಷ್ಮಾ ಸ್ವರಾಜ್ ಅವರಿಗೆ ಟ್ವಿಟರ್ ನಲ್ಲಿ ಅಭಿನಂದನೆ ತಿಳಿಸಿದ್ದರು. ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಆಯ್ಕೆಯಾಗಿರುವ ಸುಷ್ಮಾ ದೀದಿಗೆ ಅಭಿನಂದನೆಗಳು ನಿಮ್ಮ ಸುದೀರ್ಘ ರಾಜಕೀಯ ಅನುಭವ ಅಲ್ಲಿಯ ಜನರಿಗೆ ಅನುಕೂಲ ಆಗಲಿದೆ ಎಂದು ಶುಭ ಹಾರೈಸಿದ್ದರು.

ಈ ಟ್ವೀಟ್ ಮಾಡಿದ ಒಂದು ಗಂಟೆಯಲ್ಲಿ ಹರ್ಷವರ್ಧನ್ ಸಿಂಗ್ ಆ ಟ್ವೀಟ್ ಡಿಲಿಟ್ ಕೂಡ ಮಾಡಿದ್ದರು. ಆದರೆ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ 1,000ಕ್ಕೂ ಅಧಿಕ ಲೈಕ್ ಮತ್ತು 200ಕ್ಕೂ ಹೆಚ್ಚು ರೀ-ಟ್ವೀಟ್ ಆಗಿದ್ದು, ಸಾವಿರಾರು ಜನರು ಟ್ವಿಟ್ಟರಿನಲ್ಲಿ ಅಭಿನಂದನೆ ತಿಳಿಸಿದ್ದರು. ಈ ಸುದ್ದಿ ಗಮನಕ್ಕೆ ಬರುತ್ತಿದ್ದಂತೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಸುಷ್ಮಾ ಸ್ವರಾಜ್ ಸ್ವತಃ ಟ್ವಿಟ್ಟರ್ ನಲ್ಲೇ ಸ್ವಷ್ಟಿಕರಣ ಕೊಟ್ಟಿದ್ದಾರೆ.

ಅನಾರೋಗ್ಯ ಸಮಸ್ಯೆ ಹಿನ್ನೆಲೆ ಈ ಬಾರಿ ಲೋಕಸಭೆ ಚುನಾವಣೆಯಿಂದ ಸುಷ್ಮಾ ಸ್ವರಾಜ್ ದೂರ ಉಳಿದಿದ್ದರು. ಅವರನ್ನು ಕೇಂದ್ರ ಸರ್ಕಾರ ಆಂಧ್ರಪ್ರದೇಶ ರಾಜ್ಯಪಾಲರಾಗಿ ನೇಮಕ ಮಾಡಿದೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿತ್ತು. ಆದರೆ ಇದುವರೆಗೂ ಕೇಂದ್ರ ಸರ್ಕಾರವಾಗಲಿ, ರಾಷ್ಟ್ರಪತಿ ಭವನವಾಗಲಿ ಈ ಸಂಬಂಧ ಯಾವುದೇ ಸ್ವಷ್ಟಿಕರಣ ನೀಡಿಲ್ಲ.

Leave a Reply

Your email address will not be published. Required fields are marked *