Connect with us

Chikkaballapur

ಸಿನಿಮಾ ರಂಗದಲ್ಲಿ ಮಾತ್ರವಲ್ಲ, ರಾಜಕೀಯದಲ್ಲೂ ಡ್ರಗ್ಸ್ ದಂಧೆ ಇದೆ: ಬಿ.ಸಿ.ಪಾಟೀಲ್

Published

on

ಚಿಕ್ಕಬಳ್ಳಾಪುರ: ಡ್ರಗ್ಸ್ ದಂಧೆ ಕೇವಲ ಸಿನಿಮಾ ರಂಗದಲ್ಲಿ ಮಾತ್ರ ಇಲ್ಲ. ರಾಜಕೀಯ, ವ್ಯಾಪಾರಸ್ಥರ ರಂಗ, ಅಧಿಕಾರಿ ವಲಯ ಹಾಗೂ ಐಟಿ-ಬಿಟಿ ಯಲ್ಲೂ ಡ್ರಗ್ಸ್ ದಂಧೆ ಇದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಜಿಲ್ಲೆಯ ಚಿಂತಾಮಣಿಯಲ್ಲಿ ಮಾತನಾಡಿ, ಸಿನಿಮಾದವರು ಗಾಜಿನ ಮನೆಯಲ್ಲಿರುವುದರಿಂದ ಬೇಗ ತೋರಿಸುತ್ತೀದ್ದೀರಿ. ಸಮಾಜ ಹುಟ್ಟಿದಾಗಿಂದಲೂ ಈ ಸಾಮಾಜಿಕ ದಾಸ್ಯಗಳಿವೆ. ಅವುಗಳಿಗೆ ಕಡಿವಾಣ ಹಾಕುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.

ಸಿಎಂ ಯಡಿಯೂರಪ್ಪ ದೆಹಲಿ ಭೇಟಿ ವಿಚಾರಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ. ಕೋವಿಡ್-19 ಲಾಕ್‍ಡೌನ್ ನಿಂದ 6 ತಿಂಗಳಿಂದ ಸಿಎಂ ದೆಹಲಿಗೆ ಹೋಗಲಾಗಲಿಲ್ಲ. ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿರಲಿಲ್ಲ. ಈ ಮಧ್ಯೆ ರಾಜ್ಯದಲ್ಲಿ ನೆರೆ ಪ್ರವಾಹ ಬಂದಿದೆ. ಹೀಗಾಗಿ ಆರ್ಥಿಕ ಪರಿಸ್ಥಿತಿ, ಹಣಕಾಸಿನ ವಿಚಾರ ಮಾತನಾಡಲು ತೆರಳಿದ್ದು, ಕೇಂದ್ರ ಸಚಿವರ ಜೊತೆ ಮಾತನಾಡಿ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.

ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೂಪರ್ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರು ವಿರೋಧ ಮಾಡುವುದು ಅವರ ಕರ್ತವ್ಯ. ಎಲ್ಲರ ಕಾಲದಲ್ಲೂ ಅಪಾದನೆ ಅನ್ನೋದು ಇರೋದೆ. ಆದರೆ ಸಿದ್ದರಾಮಯ್ಯನವರ ಅಪಾದನೆಗಳೆಲ್ಲವೂ ಸುಳ್ಳು. ವಿಜಯೇಂದ್ರ ಸರ್ಕಾರದ ಆಡಳಿತವನ್ನ ದುರುಪಯೋಗ ಮಾಡಿಕೊಳ್ಳಲ್ಲ. ಅವರು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿದ್ದಾರೆ. ಪಕ್ಷದ ನಿಟ್ಟಿನಲ್ಲಿ ಸರ್ಕಾರಕ್ಕೆ ಸಲಹೆ ಸೂಚನೆಗಳನ್ನು ಕೊಟ್ಟರೆ ತಪ್ಪೇನಿಲ್ಲ. ಇದರಿಂದ ಸರ್ಕಾರದ ಮೇಲೆ ಪ್ರಭಾವ ಬೀರುತ್ತಾರೆ ಎಂಬುದು ಸುಳ್ಳು ಎಂದರು.

Click to comment

Leave a Reply

Your email address will not be published. Required fields are marked *