Bengaluru City
ನವೆಂಬರ್ನಲ್ಲಿ ಕಾಲೇಜು ಪ್ರಾರಂಭ ಮಾಡುವ ಚಿಂತನೆ ಇದೆ: ಅಶ್ವಥ್ ನಾರಾಯಣ್

– ಧರಣಿ ನಿರತ ಪಿಯು ಉಪನ್ಯಾಸಕರಿಗೆ ಡಿಸಿಎಂ ಭರವಸೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಹೆಚ್ಚಾಗ್ತಿರೋ ಕಾರಣ ಶಾಲಾ-ಕಾಲೇಜ್ ಸದ್ಯಕ್ಕೆ ಆರಂಭವಾಗುತ್ತಿಲ್ಲ. ಆದರೆ ನವೆಂಬರ್ನಲ್ಲಿ ಕಾಲೇಜು ಪ್ರಾರಂಭ ಮಾಡಲು ಚಿಂತನೆ ಇದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ.
ನಗರದಲ್ಲಿ ಪ್ರತಿಭಟನಾ ನಿರತ ಪಿಯುಸಿ ಉಪನ್ಯಾಸಕ ಅಭ್ಯರ್ಥಿಗಳನ್ನು ಭೇಟಿ ಮಾಡಿದ ಅಶ್ವಥ್ ನಾರಾಯಣ್ ಅವರು, ಅಭ್ಯರ್ಥಿಗಳ ಅಹವಾಲು ಸ್ವೀಕಾರ ಮಾಡಿದರು. ಬಳಿಕ ಮಾತನಾಡಿದ ಅವರು, ಕೊರೊನಾ ಇದ್ದರು ಕೌನ್ಸಿಲಿಂಗ್ ಮಾಡಲಾಗಿದೆ. ವಿಶೇಷವಾಗಿ ನಿಮಗೆ ಮಾತ್ರ ಕೊರೊನಾ ಸಮಯದಲ್ಲಿ ಕೌನ್ಸಿಲಿಂಗ್ ಮಾಡಲಾಗಿದೆ. ಆದರೆ ಆದೇಶ ಪತ್ರದ ಬಗ್ಗೆ ಯಾರಿಗೂ ಆತಂಕ ಬೇಡ. ಸಿಎಂ ಕೂಡಾ ಭರವಸೆ ನೀಡಿದ್ದು, ಕಾಲೇಜು ಪ್ರಾರಂಭ ಆದ ಕೂಡಲೇ ಆದೇಶದ ಪ್ರತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಆದರೆ ಪ್ರತಿಭಟನಾ ನಿರತ ಉಪನ್ಯಾಸಕರು ಸಚಿವರ ಮಾತಿಗೆ ಒಪ್ಪಿಗೆ ನೀಡದೆ, ನಮಗೆ ಆದೇಶದ ಪ್ರತಿ ಕೊಡಿ. ಅಲ್ಲಿಯವರೆಗೆ ನಾವು ಇಲ್ಲಿಂದ ಹೋಗುವುದಿಲ್ಲ. ನಮ್ಮ ಜೀವನ ದುಸ್ಥರವಾಗಿದೆ ಎಂದು ಒತ್ತಾಯ ಮಾಡಿದರು. ಈ ವೇಳೆ ಅವರಿಗೆ ಭರವಸೆ ನೀಡಿದ ಅಶ್ವಥ್ ನಾರಾಯಣ್ ಅವರು, ನೂರಕ್ಕೆ ನೂರು ಕಾಲೇಜು ಪ್ರಾರಂಭ ಆಗುತ್ತೆ. ಕಾಲೇಜು ಪ್ರಾರಂಭಕ್ಕೆ ಸಿದ್ಧತೆ ಆರಂಭವಾಗಿದೆ. ಪರೀಕ್ಷೆ ನಡೆಯಬೇಕು, ಶೈಕ್ಷಣಿಕ ವರ್ಷ ನಡೆಯಬೇಕು. ಹೀಗಾಗಿ ಯಾರಿಗೂ ಅನುಮಾನ ಬೇಡ. ನವೆಂಬರ್ ನಲ್ಲಿ ಕಾಲೇಜು ಪ್ರಾರಂಭದ ಚಿಂತನೆ ಇದೆ. ಸಿಎಂ ಅವರೊಂದಿಗೆ ಮುಂದಿನ ವಾರ ಸಭೆ ಇದ್ದು, ಅಲ್ಲಿ ಕಾಲೇಜು ಪ್ರಾರಂಭದ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
