Connect with us

Bollywood

ಕರಣ್ ಜೋಹರ್ ಮಾಸ್ಕ್ ಮೇಲೆ ಸಂದೇಶ

Published

on

ಮುಂಬೈ: ಬಾಲಿವುಡ್ ಸಿನಿಮಾ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಮುಂಬೈನಿಂದ ಗೋವಾಗೆ ತೆರಳಿದ್ದಾರೆ. ಕೊರೊನಾ ವೈರಸ್ ಹಿನ್ನೆಲೆ ಕರಣ್ ಜೋಹರ್ ವಿಶೇಷ ಮಾಸ್ಕ್ ಧರಿಸಿದ್ರು. ಮಾಸ್ಕ್ ಮೇಲಿನ ಸಾಲುಗಳು ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.

ಇಂದು ಮಕ್ಕಳಾದ ಯಶ್ ಮತ್ತು ರೂಹಿ ಹಾಗೂ ತಾಯಿ ಜೊತೆ ವಿಮಾನ ನಿಲ್ದಾಣಕ್ಕೆ ಬಂದ ಕರಣ್ ಜೋಹರ್ ಗೋವಾಗೆ ತೆರಳಿದ್ದಾರೆ. ಕುಟುಂಬದ ಸದಸ್ಯರು ಧರಿಸಿದ ಮಾಸ್ಕ್ ಕ್ಕಿಂತ ಕರಣ್ ಹಾಕಿಕೊಂಡಿದ್ದ ಮಾಸ್ಕ್ ಮೇಲಿನ ಸಾಲುಗಳು ನೋಡುಗರ ಕೇಂದ್ರ ಬಿಂದುವಾಗಿತ್ತು. ಈ ಸಾಲುಗಳು ಮೂಲಕ ಟ್ರೋಲ್ ಗಳಿಗೆ ಕರಣ್ ಉತ್ತರ ನೀಡಿದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇದನ್ನೂ ಓದಿ: ಸುಶಾಂತ್ ಸಾವಿನ ಬಳಿಕ ವೈರಲ್ ಆಯ್ತು ಕಂಗನಾ ವಿಡಿಯೋ-ಕರಣ್ ಜೋಹರ್ ಪ್ರಶ್ನೆಗೆ ಕ್ವೀನ್ ಗರಂ ಆಗಿದ್ಯಾಕೆ?

Advertisement
Continue Reading Below

”ಒಂದು ವೇಳೆ ಈ ಸಾಲುಗಳನ್ನ ಓದಿದ್ರೆ, ನೀವು ನಮಗೆ ತುಂಬಾ ಹತ್ತಿರವಾದ್ರು” ಎಂದು ಆಂಗ್ಲ ಭಾಷೆಯಲ್ಲಿ ಮಾಸ್ಕ್ ಮೇಲೆ ಬರೆಯಲಾಗಿದೆ. ಸದ್ಯ ಕರಣ್ ಮಾಸ್ಕ್ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಸುಶಾಂತ್ ನಿಧನದ ಬಳಿಕ ಕರಣ್ ಜೋಹರ್ ಅವರನ್ನ ಹೆಚ್ಚು ಟ್ರೋಲ್ ಮಾಡಲಾಗಿತ್ತು. ನಟಿ ಕಂಗನಾ ರಣಾವತ್ ಸಮಯ ಸಿಕ್ಕಾಗೆಲ್ಲ ಕರಣ್ ಜೋಹರ್ ವಿರುದ್ಧ ವಾಗ್ದಾಳಿ ನಡೆಸುತ್ತಿರುತ್ತಾರೆ.

ಕರಣ್ ಜೋಹರ್ ಜೊತೆಯಲ್ಲಿ ಸ್ಟಾರ್ ಕುಟುಂಬದ ಕಲಾವಿದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಟ್ರೋಲ್ ಬೆನ್ನಲ್ಲೇ ನಟಿ ಸೋನಾಕ್ಷಿ ಸಿನ್ಹಾ ಟ್ವಿಟ್ಟರ್ ಗೆ ವಿದಾಯ ಹೇಳಿದ್ರೆ, ಅನಿಲ್ ಕಪೂರ್ ಪುತ್ರಿ ಸೋನಂ ಕಪೂರ್, ತಾನು ತಂದೆಯ ಕಠಿಣ ಪರಿಶ್ರಮದ ಪರಿಣಾಮ ತಾನಿಂದು ಈ ಸ್ಥಾನದಲ್ಲಿದ್ದೇನೆ ಎಂದು ಟ್ರೋಲ್ ಗಳಿಗೆ ತಿರುಗೇಟು ನೀಡಿದ್ದರು. ಇದನ್ನೂ ಓದಿ: ಕರಣ್‌ಗೆ ನೀಡಿದ್ದ ಪದ್ಮಶ್ರೀಯನ್ನು ಹಿಂಪಡೆಯಬೇಕು – ಸಿಡಿದ ಕಂಗನಾ

View this post on Instagram

#hiroojohar Clicked at airport today. #yogenshah

A post shared by yogen shah (@yogenshah_s) on

ಕರಣ್ ಜೋಹರ್ ನಿರೂಪಣೆಯ ಕಾರ್ಯಕ್ರಮದಲ್ಲಿಯೇ ಕಂಗನಾ ನೇರವಾಗಿ ವಾಗ್ದಾಳಿ ನಡೆಸಿದ್ದರು. ಕಾಫಿ ವಿಥ್ ಕರಣ್ ಕಾರ್ಯಕ್ರಮದಲ್ಲಿ ಕಂಗನಾ ಮತ್ತು ಸೈಫ್ ಅಲಿ ಖಾನ್ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಿರೂಪಕರಾಗಿದ್ದ ಕರಣ್ ಪ್ರಶ್ನೆಯೊಂದಕ್ಕೆ ಕಂಗನಾ ಗರಂ ಆಗಿಯೇ ಉತ್ತರ ನೀಡಿದ್ದರು. ನಿಮ್ಮ ಮುಂದೆ ಅನಗತ್ಯವಾಗಿ ಆಟಿಟ್ಯೂಡ್ ತೋರಿಸಿದ ನಟ/ನಟಿ ಯಾರು ಎಂದು ಕೇಳಲಾಗಿತ್ತು. ಕಂಗನಾ ಮಾತ್ರ ಸ್ವಲ್ಪವೂ ಯೋಚಿಸದೇ ಕರಣ್ ನೀವು ಎಂದು ಉತ್ತರ ನೀಡಿದ್ದರು. ಈ ವೇಳೆ ಕರಣ್, ಹೌದಾ ಎಂದು ಹೇಳಿ ಕ್ಷಮೆ ಕೇಳಿದ್ದರು. ಇದನ್ನೂ ಓದಿ: ಸುಶಾಂತ್ ಆತ್ಮಹತ್ಯೆ ಅಲ್ಲ, ಯೋಜಿತ ಕೊಲೆ: ಕಂಗನಾ ಆರೋಪ

ಇಷ್ಟು ಮಾತ್ರವಲ್ಲದೇ ಒಂದು ವೇಳೆ ನೀವು ಜೀವನ ಕಥೆಯನ್ನು ಸಿನಿಮಾ ಮಾಡಿದ್ರೆ, ನೀವು ಸಂಕುಚಿತ ಮನಸ್ಸಿನ ಪಾತ್ರ ಮಾಡ್ತೀರಿ. ಸರ್ವಾಧಿಕಾರಿತ್ವ, ಬೇರೆಯವರ ಬಗೆಗಿನ ಕೆಳಮಟ್ಟದ ಯೋಚನೆಗಳು, ಮೂವಿ ಮಾಫಿಯಾದ ಲೀಡರ್ ಆಗಿರುತ್ತೀರಿ ಎಂದು ನೆಪ್ಟೋಯಿಸಂ ಬಗ್ಗೆ ಕಂಗನಾ ತೀಕ್ಷ್ಣವಾಗಿ ಮಾತನಾಡಿದ್ದರು. ಕಪಿಲ್ ಶರ್ಮಾ ಶೋದಲ್ಲಿಯೂ ಭಾಗಿಯಾಗಿದ್ದ ವೇಳೆ ಕರಣ್ ಜೋಹರ್ ಕಾರ್ಯಕ್ರಮದ ಬಗ್ಗೆ ಕಂಗನಾ ವ್ಯಂಗ್ಯವಾಡಿದ್ದರು.

Click to comment

Leave a Reply

Your email address will not be published. Required fields are marked *