Crime
ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ- 2 ವರ್ಷದ ಬಳಿಕ ಆರೋಪಿ ಬಂಧನ

– ಮೊಬೈಲ್ ಬಳಸಿ ಸಿಕ್ಕಾಕ್ಕೊಂಡ ಆರೋಪಿ
ಮುಂಬೈ: ಬುದ್ಧಿಮಾಂದ್ಯ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಎರಡು ವರ್ಷದ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಮುಂಬೈನ ಟಾರ್ಡಿಯೋದಲ್ಲಿ ಅಕ್ಟೋಬರ್ 2018ರಂದು ಪ್ರಕರಣ ನಡೆದಿದ್ದು, ಕೃತ್ಯ ಎಸಗಿ ಆರೋಪಿ ನೇಪಾಳಕ್ಕೆ ಪರಾರಿಯಾಗಿದ್ದ. ಹೀಗಾಗಿ ಬಂಧನದಿಂದ ತಪ್ಪಿಸಿಕೊಂಡಿದ್ದ. ಕಳೆದ ವಾರ ಪಾಟ್ನಾದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಮನೋಜ್ ಸಹಾ ಎಂದು ಗುರುತಿಸಲಾಗಿದ್ದು, ಶೀಘ್ರದಲ್ಲೇ ಚಾರ್ಜ್ಶೀಟ್ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ಮೂವರು ನನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಹೇಳಿಕೆ ನೀಡಿದ್ದಳು. ಬಳಿಕ ಹೇಳಿಕೆ ಬದಲಿಸಿದ್ದಳು. ಈ ಹಿನ್ನೆಲೆ ಆರೋಪಿ ವಿರುದ್ಧ ಅತ್ಯಾಚಾರ ಆರೋಪವನ್ನು ಕೈಬಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ಟೋಬರ್ 10, 2018ರಂದು ತನ್ನ ಸಹೋದರಿಯೊಂದಿಗೆ ಜಗಳ ಮಾಡಿಕೊಂಡು ಯುವತಿ ಮನೆ ತೊರೆದಿದ್ದಳು. ಬಳಿಕ ಮುಂಬೈ ಸೆಂಟ್ರಲ್ ರೈಲು ಹತ್ತಿ ತೆರಳಿದ್ದಳು. ಟಾರ್ಡಿಯೊದಲ್ಲಿ ರಸ್ತೆಯ ಮೇಲೆ ಮಲಗಿದ್ದಳು. ಈ ವೇಳೆ ಆರೋಪಿ ಅತ್ಯಾಚಾರ ಎಸಗಿದ್ದಾನೆ. ಮರುದಿನ ಯುವತಿ ಮನೆಗೆ ಬಂದಿದ್ದು, ಆಕೆಯ ನಡವಳಿಕೆಯಲ್ಲಿ ಬದಲಾವಣೆಯಾಗಿರುವುದನ್ನು ಕಟುಂಬಸ್ಥರು ಗಮನಿಸಿದ್ದಾರೆ. ಬಳಿಕ ತಂದೆಯ ಬಳಿ ಘಟನೆ ಕುರಿತು ವಿವರಿಸಿದ್ದಾಳೆ.
ಇದೀಗ ಯುವತಿಗೆ 20 ವರ್ಷಗಳಾಗಿದ್ದು, ಆರಂಭದಲ್ಲಿ ಮೂವರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಿಕೆ ನೀಡಿದ್ದಳು. ಬಳಿಕ ಹೇಳಿಕೆ ಬದಲಾಯಿಸಿದ್ದಳು. ಸಾಮೂಹಿಕ ಅತ್ಯಾಚಾರದ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿತ್ತು. ಬಳಿಕ ಆರೋಪಿ ಸಹಾನನ್ನು ಗುರುತಿಸಲಾಗಿದ್ದು, ಈತ ಬಿಹಾರದ ಸೀತಾಮರಿ ಜಿಲ್ಲೆಗೆ ಪರಾರಿಯಾಗಿದ್ದ. ಇದಕ್ಕೂ ಮೊದಲು ನೇಪಾಳಕ್ಕೆ ತೆರಳಿ ತನ್ನ ಸಹೋದರಿಯ ಮನೆಯಲ್ಲಿ ಆಶ್ರಯ ಪಡೆದಿದ್ದ ಎಂದು ಪೊಲಿಸರು ತಿಳಿಸಿದ್ದಾರೆ.
ಆರೋಪಿ ಮೊಬೈಲ್ ಬಳಸುವುದನ್ನು ನಿಲ್ಲಿಸಿದ್ದ. ಆದರೆ ತನ್ನ ಸ್ನೇಹಿತನೊಂದಿಗೆ ಸಂಪರ್ಕದಲ್ಲಿದ್ದ. ಈ ತನಿಖೆಯ ಬೆಳವಣಿಗೆ ಕುರಿತು ಮಾಹಿತಿ ನೀಡುತ್ತಿದ್ದ. ಈ ವೇಳೆ ಆರೋಪಿ ನೇಪಾಳದಿಂದ ಬಿಹಾರಕ್ಕೆ ಆಗಮಿಸಿದ್ದ. ಇತ್ತೀಚೆಗೆ ತನ್ನ ಸ್ನೇಹಿತನಿಗೆ ಕರೆ ಮಾಡುವ ಮೂಲಕ ಆರೋಪಿ ತನ್ನ ಲೊಕೇಶನ್ ರಿವೀಲ್ ಮಾಡಿದ್ದ. ಬಳಿಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ.
