Connect with us

International

ಧರಿಸಿರುವ ಬಿಕಿನಿ ಮಾರಿ ಲಕ್ಷ ಲಕ್ಷ ಸಂಪಾದಿಸೋ ಯುವತಿ

Published

on

– ಯುವತಿಯ ಬ್ರಾ, ಪ್ಯಾಂಟೀಸ್‍ಗಳಿಗೆ ಫುಲ್ ಡಿಮ್ಯಾಂಡ್!

ಸಿಡ್ನಿ/ನ್ಯೂಕ್ಯಾಸ್ಟಲ್: 30 ವರ್ಷದ ಯುವತಿ ಮೆಲ್ ಬೋರ್ನ್ ತಾನು ಧರಿಸಿರುವ ಒಳಉಡುಪುಗಳನ್ನ ಮಾರಾಟ ಮಾಡಿ ತಿಂಗಳಿಗೆ ಲಕ್ಷ ಲಕ್ಷ ಹಣ ಸಂಪಾದಿಸುತ್ತಿದ್ದಾಳೆ. ಯುವತಿಯ ಇನ್ನರ್ ವಿಯರ್ ಗಳು ಆನ್‍ಲೈನ್ ನಲ್ಲಿ ಹೆಚ್ಚು ಬೇಡಿಕೆ ಹೊಂದಿವೆ.

ಮೆಲ್ ನ್ಯೂಕ್ಯಾಸ್ಟಲ್ ಮುಕ್ತ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದು, ಭೌತಶಾಸ್ತ್ರದಲ್ಲಿ ಪದವಿ ಪಡೆಯಲಿದ್ದಾಳೆ. ವೆಬ್‍ಸೈಟ್ ಮೂಲಕ ತನ್ನ ಒಳಉಡುಪುಗಳನ್ನ ಮೆಲ್ ಮಾರುತ್ತಿದ್ದಾಳೆ. ಸುಮಾರು 20 ಸಾವಿರಕ್ಕೂ ಅಧಿಕ ಜನರು ಮೆಲ್ ವೆಬ್‍ಸೈಟ್ ವಿಸಿಟ್ ಮಾಡಿದ್ದಾರೆ. ಈ ಮಾರಾಟದಿಂದ ಬಂದ ಹಣದಿಂದಲೇ ತನ್ನ ಕಾಲೇಜು ಶುಲ್ಕ ಪಾವತಿಸುತ್ತಿದ್ದೇನೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಪರಿಣಾಮ ಒಳಉಡುಪು ತೊಳೆಯುವುದೇ ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಮೆಲ್ ಹೇಳುತ್ತಾಳೆ.

ಒಮ್ಮೆ ತಮಾಷೆಗಾಗಿ ನನ್ನ ಹ್ಯಾಲೋವನ್ ಮಾಸ್ಕ್ ಮಾರಾಟಕ್ಕಿಟ್ಟಿದೆ. ಮಾರಾಟ ಮತ್ತು ಅದಕ್ಕೆ ಬೇಡಿಕೆ ನೋಡಿ ಒಳಉಡುಪುಗಳ ಸೇಲ್ ಮಾಡೋ ಪ್ಲಾನ್ ಬಂತು. ಅಂದಿನಿಂದ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಬಟ್ಟೆಗಳನ್ನ ಮಾರುತ್ತಿದ್ದೇನೆ. ಕೆಲ ಗ್ರಾಹಕರು ನಾನು ಧರಿಸಿರುವ ಹ್ಯಾಂಡ್ ಗ್ಲೌಸ್ ಖರೀದಿಸೋದಾಗಿ ಹೇಳಿದ್ದರು. ನನ್ನ ಹ್ಯಾಂಡ್‍ಗ್ಲೌಸ್ ಕೆಲವೇ ಗಂಟೆಯಲ್ಲಿ 15 ಪೌಂಡ್ (1,400 ರೂಪಾಯಿ)ಗೆ ಬಿಕರಿಯಾಯ್ತು ಎಂದು ಮೆಲ್ ಆಶ್ಚರ್ಯ ವ್ಯಕ್ತಪಡಿಸಿದ್ದಾಳೆ.

ಒಂದು ಜೊತೆ ಒಳಉಡುಪನ್ನ ಎರಡು ದಿನ ಬಳಸುತ್ತೇನೆ. ಬೆಳಗಿನ ವಾಕ್ ನಿಂದ ಸಂಜೆಯ ಗ್ರೊಸರಿ ಸ್ಟೋರ್ ಹೋಗುವರೆಗೂ ಧರಿಸಿರುತ್ತೇನೆ. ಮೂರನೇ ಧರಿಸಿದ ಬಟ್ಟೆಯನ್ನ ಶುಭ್ರಗೊಳಿಸಿ ಮಾರಾಟಕ್ಕೀಡುತ್ತೇನೆ ಎಂದು ಮೆಲ್ ಹೇಳುತ್ತಾಳೆ. ಇವುಗಳ ಮಾರಾಟದಿಂದ ತಿಂಗಳಿಗೆ 600 ಪೌಂಡ್ (60 ಸಾವಿರ ರೂ) ಮೆಲ್ ಖಾತೆಗೆ ಜಮೆ ಆಗುತ್ತದೆ.

ಕೆಲವು ಬಾರಿ ಮೆಲ್ ಗೆ ಗ್ರಾಹಕರು ವಿಶೇಷ ಮನವಿಯನ್ನ ಕಳುಹಿಸುತ್ತಾರೆ. ಓರ್ವ ಟೈಟ್ ಹಾಟ್‍ಪ್ಯಾಂಟ್ ತೊಟ್ಟು ಜಂಪಿಂಗ್ ಮಾಡಿ. ಮತ್ತೋರ್ವ ಪ್ಯಾಂಟೀಸ್ ಹಾಕಿ, ಸ್ಯಾಂಡಲ್ ತೊಟ್ಟು ಹೂಗಳ ಮೇಲೆ ನಡೆದಾಡಿ ಅಂತ ಹೇಳಿರೋದುಂಟು. ಗ್ರಾಹಕರ ಡಿಮ್ಯಾಂಡ್‍ಗೆ ಮೆಲ್ ಸಹ ಹೂಗಳ ಮೇಲೆ ಸೆಕ್ಸಿಯಾಗಿ ನಡೆದಾಡಿ 10 ಸೆಕೆಂಡ್ ವೀಡಿಯೋ ಅಪ್ಲೋಡ್ ಮಾಡಿಕೊಂಡಿದ್ದಳು. ಈ ವೀಡಿಯೋದಿಂದ ಮೆಲ್‍ಗೆ 45 ಪೌಂಡ್ (4,300 ರೂಪಾಯಿ) ಸಿಕ್ಕಿದೆ. ಮಾರ್ಚ್ ನಿಂದ ತನ್ನ ಒಳಉಡುಪುಗಳನ್ನ ಮಾರುತ್ತಿರೋ ಮೆಲ್ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾಳೆ.

Click to comment

Leave a Reply

Your email address will not be published. Required fields are marked *