Connect with us

Bengaluru City

ಜೂ.ಚಿರುಗಾಗಿ ಮೇಘನಾಗೆ ಸಿಕ್ತು ವಿಭಿನ್ನ ಗಿಫ್ಟ್

Published

on

ಬೆಂಗಳೂರು: ಜೂನಿಯರ್ ಚಿರು ಜನನದಿಂದಾಗಿ ಕೇವಲ ಕುಟುಂಬಸ್ಥರು ಮಾತ್ರವಲ್ಲ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮನೆ ಮಾಡಿದೆ. ಹಲವು ವಿವಿಧ ರೀತಿಯ ಸಹಾಯ ಮಾಡಿದ್ದರೆ. ಇನ್ನೂ ಹಲವರು ಗಿಫ್ಟ್ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ. ಅದೇ ರೀತಿ ಇದೀಗ ಜೂ.ಚಿರುಗಾಗಿ ಮೇಘನಾ ಅವರಿಗೆ ವಿಭಿನ್ನ ಗಿಫ್ಟ್ ಸಿಕ್ಕಿದೆ.

ಅನಿಲಾ ಇಂಪ್ರೆಶನ್ಸ್ ಆ್ಯಂಡ್ ಫ್ರೇಮ್ಸ್ ಸುಂದರವಾದ ಉಡುಗೊರೆ ನೀಡಿದ್ದು, ಮೇಘನಾ ರಾಜ್ ಅವರಿಗೆ ಹಸ್ತಾಂತರಿಸಿದ್ದಾರೆ. ಗಿಫ್ಟ್ ನೋಡಿದ ಮೇಘನಾ ರಾಜ್, ಫಿದಾ ಆಗಿದ್ದು, ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಅಲ್ಲದೆ ಸಾಲುಗಳನ್ನು ಸಹ ಬರೆದಿರುವ ಅವರು, ಫ್ರೇಮ್‍ನಲ್ಲಿ ಸಂತೋಷವನ್ನು ಹಿಡಿದಿಡಲು ಬಯಸುವುದಾದರೆ ಈ ಸುಂದರ ಉಡುಗೊರೆ ನೀಡಿದ್ದಕ್ಕೆ ಅನಿಲಾ ಇಂಪ್ರೆಶನ್ಸ್ ಆ್ಯಂಡ್ ಫ್ರೇಮ್ಸ್ ಗೆ ಧನ್ಯವಾದಗಳು. ಪುಟ್ಟ ಪಾದಗಳು ಹಾಗೂ ಕೈಗಳನ್ನು ಮಾಡುವ ಮೂಲಕ ನಿಮ್ಮ ಕೆಲಸದಿಂದ ಚಿರಂಜೀವಿಯವರನ್ನು ಅಮರವಾಗಿಸಿದ್ದೀರಿ. ಜೂನಿಯರ್ ಸಿ ಖಂಡಿತವಾಗಿಯೂ ಇದನ್ನು ಕಾಪಾಡಿಕೊಳ್ಳುತ್ತಾನೆ ಎಂದು ತಿಳಿಸಿದ್ದಾರೆ.

 

View this post on Instagram

 

A post shared by Meghana Raj Sarja (@megsraj)

ಪುಟ್ಟ ಮಗುವಿನ ಕೈ ಮತ್ತು ಪಾದದ ಅಳತೆಯನ್ನು ತೆಗೆದು ಅದೇ ರೀತಿಯಾಗಿ ಅನಿಲಾ ಅವರು ತಯಾರಿಸಿಕೊಡುತ್ತಾರೆ. ಅನಿಲಾ ಅವರು ಈಗಾಗಲೇ ಹಲವರಿಗೆ ಈ ರೀತಿಯ ಫ್ರೇಮ್‍ಗಳನ್ನು ಮಾಡಿಕೊಟ್ಟಿದ್ದು ಹಲವರಿಗೆ ಉಡುಗೊರೆಗಳನ್ನು ಸಹ ನೀಡಿದ್ದಾರೆ. ಅದೇ ರೀತಿ ಇದೀಗ ಮೇಘನಾ ರಾಜ್ ಸರ್ಜಾ ಅವರ ಮಗ ಚೂನಿಯರ್ ಚಿರು ಕೈ ಹಾಗೂ ಪಾದಗಳ ಇಂಪ್ರೆಶನ್ ನಿಂದ ಮಾಡಿದ ಫ್ರೇಮ್‍ನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಮೇಘನಾ ಸಂತಸ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಸಹ ಕಮೆಂಟ್‍ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಜೂನಿಯರ್ ಚಿರುಗೆ ತೊಟ್ಟಿಲು ಶಾಸ್ತ್ರವನ್ನು ಮಾಡಲಾಗಿದ್ದು, ಉತ್ತರ ಕರ್ನಾಟಕ ಶೈಲಿಯ ಅನುಗುಣವಾಗಿ ಎಲ್ಲ ಕಾರ್ಯಗಳನ್ನು ಭರ್ಜರಿಯಾಗಿ ಮಾಡಲಾಗಿದೆ. ಮೇಘನಾ ರಾಜ್ ಅವರ ಸೀಮಂತ ಕಾರ್ಯದಿಂದ ಮಗುವಿನ ತೊಟ್ಟಿಲು ಶಾಸ್ತ್ರದ ವರೆಗೆ ಎಲ್ಲ ಕಾರ್ಯಗಳನ್ನು ಉತ್ತರ ಕರ್ನಾಟಕ ಶೈಲಿಯಲ್ಲಿ ಮಾಡಲಾಗಿತ್ತು. ವನಿತಾ ಗುತ್ತಲ್ ಅವರು ಜೂನಿಯರ್ ಚಿರುಗಾಗಿ ಕಲಘಟಗಿ ತೊಟ್ಟಿಲನ್ನು ನೀಡಿದ್ದರು.

ಈ ಬಗ್ಗೆ ಮಾತನಾಡಿದ್ದ ವನಿತಾ ಗುತ್ತಲ್, ಉತ್ತರ ಕರ್ನಾಟಕ ಶೈಲಿಯಲ್ಲೇ ಸೀಮಂತ ಮಾಡಿದ್ದೆವು. ಮೇಘನಾ ನಾನ್ ವೆಜ್ ಊಟ ಎಂದರೆ ಹೆಚ್ಚು ಇಷ್ಟ ಎಂದರು ಆಗ ಅಡಿಗೆ ಮಾಡಿ ಎರಡು ದಿನ ಬಿಟ್ಟು ಊಟ ತಂದುಕೊಟ್ಟೆವು. ಬಳಿಕ ಹೆರಿಗೆ ಆದಮೇಲೆ ಸಹ ಉತ್ತರ ಕರ್ನಾಟಕ ಶೈಲಿಯ ಕೊಬ್ಬರಿಖಾರ, ಅವಳಿ ಬೀಜ, ಅರಿಶಿಣ, ಬೆಳ್ಳುಳ್ಳಿ ಹೀಗೆ ನಮ್ಮ ಉತ್ತರ ಕರ್ನಾಟಕ ಪದ್ಧತಿಯಂತೆ ಎಲ್ಲ ಪದಾರ್ಥಗಳನ್ನು ಮೇಘನಾ ಮನೆಯವರಿಗೆ ನೀಡಿದೆವು ಎಂದು ತಿಳಿಸಿದ್ದರು.

ಮಗುವನ್ನು ಸ್ನಾನ ಮಾಡಿಸಲು ನಮ್ಮ ಸದಸ್ಯರೊಬ್ಬರನ್ನು 10 ದಿನಗಳ ಕಾಲ ಮೇಘನಾ ಅವರ ಮನೆಯಲ್ಲಿಯೇ ಬಿಟ್ಟಿದ್ದೆವು. ಮಗುವಿನ ನಾಮಕರಣಕ್ಕೆ 16 ಜನ ಸ್ತ್ರೀ ಶಕ್ತಿ ಸಂಘದ ಸದಸ್ಯರೆಲ್ಲ ಬಂದಿದ್ದೇವೆ. 4-5 ತಿಂಗಳ ಕಾಲ ಕೆಲಸ ಮಾಡಿ ತೊಟ್ಟಿಲು ತಯಾರಿಸಲಾಗಿದೆ ಎಂದು ವನಿತಾ ಗುತ್ತಲ್ ಅವರು ಹೇಳಿದ್ದರು.

ಹೀಗೆ ಅನೇಕರು ಜೂನಿಯರ್ ಚಿರುಗೆ ಗಿಫ್ಟ್ ನೀಡಿ ಹಾರೈಸಿದ್ದಾರೆ. ಇದೀಗ ಅನಿಲಾ ಅವರು ಅದ್ಭುತ ಫ್ರೇಮ್ ವರ್ಕ್‍ನ್ನು ಗಿಫ್ಟ್ ನೀಡಿದ್ದಾರೆ. ಇದರಲ್ಲಿ ಜೂನಿಯರ್ ಚಿರುನ ಸುಂದರ ಕೈ ಹಾಗೂ ಪಾದಗಳು ಮೂಡಿ ಬಂದಿವೆ. ಯಶ್ ಹಾಗೂ ರಾಧಿಕಾ ದಂಪತಿ ಪುತ್ರಿ ಐರಾಗೂ ಸಹ ಮೇಕಪ್ ಆರ್ಟಿಸ್ಟ್ ಒಬ್ಬರು ಇದೇ ರೀತಿಯ ಉಡುಗೊರೆ ನೀಡಿದ್ದರು.

Click to comment

Leave a Reply

Your email address will not be published. Required fields are marked *

www.publictv.in