Friday, 20th September 2019

ಚಿರಂಜೀವಿ ಸರ್ಜಾ- ಮೇಘನರಾಜ್ ಮದುವೆ ಮುಹೂರ್ತ ಫಿಕ್ಸ್

ಬೆಂಗಳೂರು: ಸಿನಿಮಾದಲ್ಲಿ ಯಶಸ್ವಿ ಜೋಡಿಯಾಗಿದ್ದ ಅನೇಕ ನಟ, ನಟಿಯರು ನಿಜ ಜೀವನದಲ್ಲಿಯೂ ಜೊತೆಯಾಗಿದ್ದಾರೆ. ಈಗ ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ.

ಚಂದನವನದ ಚೆಂದದ ಪ್ರೇಮ ಜೋಡಿಯಲ್ಲೊಂದು ಮೇಘನಾ ರಾಜ್ ಮತ್ತು ಚಿರು ಸರ್ಜಾ ಜೊತೆಯಾಗಿ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್ 22 ರಂದು ಗುರುಹಿರಿಯರ ಸಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಟ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಮೇ 2 ರಂದು ಮದುವೆ ದಿನಾಂಕ ನಿಗದಿಯಾಗಿದ್ದು, ಅಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈಗಾಗಲೇ ಮೇಘನಾ ರಾಜ್ ಮಾಲಿವುಡ್‍ನ ನಟ, ನಟಿಯರಿಗೆ ಆಮಂತ್ರಿಸಿದ್ದು, ಕನ್ನಡ ಚಿತ್ರರಂಗದ ಗಣ್ಯಾತಿ-ಗಣ್ಯರನ್ನು ಆಹ್ವಾನಿಸುತ್ತಿದ್ದಾರೆ. ಮೇ 2ಕ್ಕೆ ಬೆಳಗ್ಗೆ 10.30ರ ಶುಭಗಳಿಗೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್ ನಲ್ಲಿ ಅದ್ಧೂರಿ ಮದುವೆಯನ್ನು ಎರಡು ಕುಟುಂಬದವರು ಏರ್ಪಡಿಸಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಅನೇಕ ಗಣ್ಯ ಮಹೋದಯರು ಚಿರು ವೆಡ್ಸ್ ಮೇಘನಾ ಮದುವೆಗೆ ಸಾಕ್ಷಿಯಾಗಲಿದ್ದಾರೆ.

Leave a Reply

Your email address will not be published. Required fields are marked *