Sunday, 19th August 2018

Recent News

ಚೊಚ್ಚಲ ಏಷ್ಯಾ ಕಪ್ ಗೆದ್ದ ಬಾಂಗ್ಲಾ ಗೆಲುವಿನ ಹಿಂದಿದ್ದಾರೆ ಟೀಂ ಇಂಡಿಯಾ ಮಾಜಿ ಆಟಗಾರ್ತಿ!

ನವದೆಹಲಿ: ಚೊಚ್ಚಲ ಏಷ್ಯಾ ಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿರುವ ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡದ ಹಿಂದೆ ಟೀಂ ಇಂಡಿಯಾ ಮಾಜಿ ಆಟಗಾರ್ತಿ ಹಾಗೂ ಬಾಂಗ್ಲಾ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಅಂಜು ಜೈನ್ ಪಾತ್ರ ಮಹತ್ವದಾಗಿದೆ.

ಆರು ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದು ಬೀಗಿದ್ದ ಟೀಂ ಇಂಡಿಯಾ, ಏಷ್ಯಾ ಕಪ್ ಟೂರ್ನಿಯಲ್ಲಿ ಒಂದೇ ವಾರದಲ್ಲಿ ಎರಡು ಬಾರಿ ಬಾಂಗ್ಲಾ ವಿರುದ್ಧ ಸೋಲುಂಡಿತ್ತು. ಬಾಂಗ್ಲಾ ಮಹಿಳಾ ತಂಡದ ಈ ಸಾಧನೆಯ ಹಿಂದೆ ಕೋಚ್ ಅಂಜು ಜೈನ್ ರ ಶ್ರಮ ಕಾಣಸಿಗುತ್ತದೆ.

ಅಂದಹಾಗೇ ಅಂಜು ಜೈನ್ ಟೀಂ ಇಂಡಿಯಾದ ಮಾಜಿ ಆಟಗಾರ್ತಿಯಾಗಿದ್ದು, 8 ಟೆಸ್ಟ್ ಮತ್ತು 65 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ 2012 ರ ಟಿ20 ವಿಶ್ವಕಪ್ ಹಾಗೂ 2013 ರ ವಿಶ್ವಕಪ್ ಪಂದ್ಯಗಳಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಏಕದಿನದಲ್ಲಿ 1,729 ರನ್ ಹಾಗೂ ಟೆಸ್ಟ್ ನಲ್ಲಿ 441 ರನ್ ಗಳಿಸಿದ್ದಾರೆ. ಬಾಂಗ್ಲಾ ಮಹಿಳಾ ತಂಡದ ಕೋಚ್ ಆಗಿದ್ದ ಇಂಗ್ಲೆಂಡ್ ಆಲೌಂಡರ್ ಡೇವಿಡ್ ಕ್ಯಾಪೆಲ್ ರ ಸ್ಥಾನಕ್ಕೆ ಮೇ 21 ರಂದು ಅಂಜು ಜೈನ್ ಆಯ್ಕೆ ಆಗಿದ್ದರು.

ಈ ಕುರಿತು ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅಂಜು ಜೈನ್, ತಾವು ಕೋಚ್ ಆಗಿ ಆಯ್ಕೆ ಆದ ಸಂದರ್ಭದಲ್ಲಿ ತಂಡದಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ಆಟಗಾರರಲ್ಲಿ ಮೊದಲು ನೈತಿಕ ಧೈರ್ಯ ತುಂಬುವುದೇ ನನ್ನ ಕಾರ್ಯವಾಗಿತ್ತು. ಟೂರ್ನಿಯ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು 112 ರನ್ ಗಳಿಗೆ ಕಟ್ಟಿ ಹಾಕಿದ್ದು ಮಹತ್ವದ ಕ್ಷಣವಾಗಿತ್ತು ಎಂದು ಹೇಳಿದ್ದಾರೆ.

ಏಷ್ಯಾ ಕಪ್ ಗೆದ್ದಿರುವುದು ತಂಡಕ್ಕೆ ಬಹು ದೊಡ್ಡ ಸಾಧನೆಯಾದರೆ, ತಮಗೆ ವೈಯಕ್ತಿಕವಾಗಿ ಸ್ಮರಣೀಯ ಘಟನೆ. ಇದಕ್ಕೂ ಮುನ್ನ ಆಫ್ರಿಕಾ ಪ್ರವಾಸದಿಂದ ಹಿಂದಿರುಗಿದ ವೇಳೆ ತಂಡದ ಕೆಲ ವೈಫಲ್ಯಗಳ ಕುರಿತು ಹೆಚ್ಚಿನ ಗಮನ ನೀಡುವುದು ಬೃಹತ್ ಸವಾಲಾಗಿತ್ತು. ಆದರೆ ಆಟಗಾರ್ತಿಯರು ತಮ್ಮ ಸಾಮಥ್ರ್ಯವನ್ನು ಗಣನೀವಾಗಿ ಉತ್ತಮ ಪಡಿಸಿಕೊಂಡಿದ್ದರು ಎಂದು ಹೇಳಿದರು.

Leave a Reply

Your email address will not be published. Required fields are marked *