Connect with us

Bollywood

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸ್ತಿದ್ದಾರೆ ನಟಿ ದಿಶಾ ಪಠಾಣಿ ಸಹೋದರಿ

Published

on

ಮುಂಬೈ: ಬಾಲಿವುಡ್ ನಟಿ ದಿಶಾ ಪಠಾಣಿ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಯಾವಾಗಲೂ ಸದ್ದು ಮಾಡುತ್ತಿರುತ್ತಾರೆ. ಆದರೆ ಈಗ ಅವರ ಸಹೋದರಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಆಗುತ್ತಿದ್ದಾರೆ.

ದಿಶಾ ಅವರ ಸಹೋದರಿ ಖುಷ್ಬೂ ಪಠಾಣಿ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇನೆಯಲ್ಲಿ ಲೆಫ್ಟಿನೆಂಟ್ ಆಗುವ ಮೂಲಕ ಖುಷ್ಬೂ ದೇಶ ಸೇವೆ ಮಾಡುತ್ತಿದ್ದಾರೆ. ಸೇನೆಯಲ್ಲಿರುವ ಕಾರಣ ಖುಷ್ಬೂ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ.

ಖುಷ್ಬೂ ತಮ್ಮ ಫಿಟ್ನೆಸ್ ವಿಡಿಯೋಗಳನ್ನು ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಅಲ್ಲದೆ ಅವರ ವರ್ಕೌಟ್ ವಿಡಿಯೋ ಕೂಡ ಸಾಕಷ್ಟು ವೈರಲ್ ಆಗುತ್ತಿರುತ್ತದೆ. ಖುಷ್ಬೂ ಅವರ ಇನ್‍ಸ್ಟಾದಲ್ಲಿ 80 ಸಾವಿರ ಫಾಲೋವರ್ಸ್ ಇದ್ದಾರೆ. ನಟಿ ದಿಶಾ ಹಲವು ಬಾರಿ ತಮ್ಮ ಇನ್‍ಸ್ಟಾದಲ್ಲಿ ಖುಷ್ಬೂ ಅವರ ಫೋಟೋ ಪೋಸ್ಟ್ ಮಾಡಿದ್ದಾರೆ.

ದಿಶಾ ಕುಟುಂಬಸ್ಥರು ಮೂಲತಃ ಉತ್ತರ ಪ್ರದೇಶದ ಬರೇಲಿ ಕುಟುಂಬದವರಾಗಿದ್ದು, ಅವರ ತಂದೆ ಜಗದೀಶ್ ಸಿಂಗ್ ಪಠಾಣಿ ಡಿಎಸ್‍ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದಿಶಾ ಅವರಿಗೆ ಹಿರಿಯ ಸಹೋದರಿ ಹಾಗೂ ಕಿರಿಯ ಸಹೋದರ ಇದ್ದಾರೆ. ಹಿರಿಯ ಸಹೋದರಿ ಸೇನೆಯಲ್ಲಿ ಲೆಫ್ಟಿನೆಂಟ್ ಆದರೆ, ಕಿರಿಯ ಸಹೋದರ ಟೆನ್ನಿಸ್ ಆಟಗಾರರಾಗಿದ್ದಾರೆ.

ಸದ್ಯ ದಿಶಾ ಈಗ ತಮ್ಮ ಮುಂಬರುವ ‘ಮಲಂಗ್’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರವನ್ನು ಮೋಹಿತ್ ಸೂರಿ ನಿರ್ದೇಶನ ಮಾಡಿದ್ದು, ದಿಶಾ ನಾಯಕನಾಗಿ ಆದಿತ್ಯ ರಾಯ್ ಕಪೂರ್ ನಟಿಸಿದ್ದಾರೆ. ಈ ಚಿತ್ರ ಫೆ. 7ರಂದು ಬಿಡುಗಡೆಯಾಗಲಿದೆ.