Connect with us

Latest

ವೈರಲ್ ಆಯ್ತು ಮೆಡಿಕಲ್ ವಿದ್ಯಾರ್ಥಿಗಳ ಡ್ಯಾನ್ಸ್ ವೀಡಿಯೋ

Published

on

ತಿರುವನಂತಪುರಂ: ಕೇರಳದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಡ್ಯಾನ್ಸ್ ಮಾಡಿರುವ ವೀಡಿಯೋವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಧೂಳ್ ಎಬ್ಬಿಸುತ್ತಿದೆ.

ನವೀನ್ ಕೆ. ರಜಾಕ್ ಮತ್ತು ಜಾನಕಿ ಓಂಕುಮಾರ್ ತ್ರಿಶೂರ್ ಎಂಬವರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಇಬ್ಬರು ಡ್ಯಾನ್ಸ್ ಮಾಡಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸೆಸ್ಸೆಷನ್ ಕ್ರಿಯೆಟ್ ಆಗಿದೆ.

ಈ ಸಣ್ಣ ವೀಡಿಯೋದ ತುಣುಕನ್ನು ನವೀನ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ನವೀನ್ ಹಾಗೂ ಜಾನಕಿ ಇಬ್ಬರೂ ತಮ್ಮ ಕಾಲೇಜಿನ ಕಾರಿಡಾರ್‍ನಲ್ಲಿ ಬೋನಿ ಎಂ ಅವರ 1978ರ ಫೇಮಸ್ ಸಾಂಗ್ ರಾಸ್‍ಪುಟಿನ್ ಬಿಟ್ಸ್‌ಗೆ ಅದ್ದೂರಿಯಾಗಿ ಡ್ಯಾನ್ಸ್ ಮಾಡಿದ್ದಾರೆ.

ನರ್ತಕಿ ವನೆಸಾ ಸೆಕೊ ಅವರಿಂದ ಪ್ರೇರಿತರಾದ ನವೀನ್ ಹಾಗೂ ಜಾನಕಿ ಇಬ್ಬರು ವೀಡಿಯೋದಲ್ಲಿ ಸಖತ್ ಎನರ್ಜಿಟಿಕ್ ಆಗಿ ಮಸ್ತ್ ಮಸ್ತ್ ಸ್ಟೆಪ್ ಹಾಕಿದ್ದಾರೆ.

 

View this post on Instagram

 

A post shared by Naveen K Razak (@naveen_k_razak)

ಅಲ್ಲದೆ ವೀಡಿಯೋ ಜೊತೆ ನವೀನ್ ಹೆಚ್ಚಿನ ಡ್ಯಾನ್ಸ್ ಮಾಡಲು ಅವಕಾಶ, ಹೆಚ್ಚಿನ ನೃತ್ಯ ಮಾಡಿ. ನಿಮ್ಮ ಅಮೂಲ್ಯ ಸಮಯಕ್ಕಾಗಿ ಧನ್ಯವಾದಗಳು. @ವನೆಸೆಕೊರಿಂದ ಪ್ರೇರಿತರಾದ @ಜಾನಕಿ ಓಂ ಕುಮಾರ್‍ರವರಿಗೆ ಎಂದು ಕ್ಯಾಪ್ಷನ್ ಹಾಕಿದ್ದಾರೆ.

ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 2 ಲಕ್ಷಕ್ಕೂ ಅಧಿಕ ವಿವ್ಸ್ ಬಂದಿದ್ದು, ಜಾನಕಿ ಹಾಗೂ ನವೀನ್ ಡ್ಯಾನ್ಸ್‍ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ಕಮೆಂಟ್ ಸೆಕ್ಷನ್‍ನಲ್ಲಿ ಹಲವಾರು ಕಮೆಂಟ್‍ಗಳು ಹರಿದು ಬರುತ್ತಿದೆ.

Click to comment

Leave a Reply

Your email address will not be published. Required fields are marked *