Connect with us

Chikkaballapur

ಒತ್ತಡ ಸ್ವೀಕರಿಸಿ ಕೆಲಸ ಮಾಡೋರು ಸರ್ಕಾರದಲ್ಲಿರಬೇಕು: ಸುಧಾಕರ್

Published

on

ಚಿಕ್ಕಬಳ್ಳಾಪುರ: ಕಾರ್ಯದ ಒತ್ತಡ ಸ್ವೀಕಾರ ಮಾಡಿ ಕೆಲಸ ಮಾಡೋವರು ಸರ್ಕಾರದಲ್ಲಿರಬೇಕು. ಇಲ್ಲ ಅಂದ್ರೆ ಅವರು ಸ್ವತಂತ್ರರಿದ್ದಾರೆ. ಅವರು ಖಾಸಗಿಯಲ್ಲಿ ಕೆಲಸ ಮಾಡಲಿ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.

ಸೋಮವಾರ ಕೊರೊನಾ ಹೆಲ್ತ್ ವಾರಿಯರ್ಸ್ ಪ್ರತಿಭಟನೆ ಕರೆ ವಿಚಾರದ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಆಕ್ರೋಶ ಹೊರಹಾಕಿದ ಅವರು, ಪ್ರತಿಭಟನೆ ಕರೆ ಕೊಟ್ಟವರಿಗೆ ಗಣೇಶ ಹಬ್ಬದ ದಿನ ಆ ದೇವರು ಸದ್ಬುದ್ಧಿ ಕೊಡಲಿ ಅಂತ ಆಶಿಸುವುದಾಗಿ ತಿಳಿಸಿದರು.

ಪ್ರತಿಭಟನೆಗೆ ಒಬ್ಬರೋ, ಇಬ್ಬರೋ ಯಾವ ಕಾರಣಕ್ಕೆ ಪ್ರೇರಣೆ ಕೊಡುತ್ತಿದ್ದಾರೋ ನಂಗೆ ಗೊತ್ತಿಲ್ಲ. ಆದರೆ ಆ ಕುಟುಂಬದ ಹೆಣ್ಣುಮಗಳು ಸರ್ಕಾರದ ತೀರ್ಮಾನಗಳಿಗೆ ಒಪ್ಪಿದ್ದಾರೆ. ಅವರ ಸ್ವಂತ ಮಾವಂದಿರು ಸಹ ಸರ್ಕಾರದ ಕ್ರಮಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರ ನಡುವೆ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದರು. ಇದನ್ನೂ ಓದಿ: ಕೊರೊನಾ ಸಮಯದಲ್ಲೇ ಸರ್ಕಾರಕ್ಕೆ ವೈದ್ಯರಿಂದ ಡೆಡ್‍ಲೈನ್!

ಅಮಾಯಕ ವೈದ್ಯರನ್ನ ಕೂರಿಸಿಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಇದು ಯಾರಿಗೂ ಕೂಡ ಶೋಭೆ ತರುವಂತಹದ್ದಲ್ಲ. ಪರದೆ ಹಿಂದೆ ಯಾರೂ ಕೂಡ ಪ್ರೇರಣೆ ಕೊಡಬೇಡಿ. ಅಂತವರಿಗೆ ಸದ್ಬುದ್ಧಿ ಕೊಡಲಿ ಅಂತ ಗಣೇಶನಲ್ಲಿ ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು. ಇದನ್ನೂ ಓದಿ: ಪ್ರತಿಭಟನೆ ನಿಲ್ಲಿಸಿ ರೋಗಿಗಳ ಸಂಕಷ್ಟಕ್ಕೆ ನೆರವಾಗಿ- ವೈದ್ಯ ಸಿಬ್ಬಂದಿಯಲ್ಲಿ ಸುಧಾಕರ್ ಮನವಿ

ಯಾರನ್ನ ಅಮಾನತು ಮಾಡಬೇಕು ಎಂದು ಇದೇ ವೇಳೆ ಪ್ರಶ್ನಿಸಿದ ಸುಧಾಕರ್, ಯಾರನ್ನು ಯಾವ ಕಾರಣಕ್ಕೆ ಅಮಾನತು ಮಾಡಬೇಕು..?, ನಾನೇ ಮಂತ್ರಿಯಾಗಿ ಇಷ್ಟು ಟೆಸ್ಟ್ ಮಾಡಿ ಅಂತ ಡಿಸಿ ಹಾಗೂ ಸಿಇಒಗೆ ಟಾರ್ಗೆಟ್ ಕೊಡ್ತೀನಿ. ಯಾರನ್ನು ಸಸ್ಪೆಂಡ್ ಮಾಡಬೇಕು?, ಕಾರ್ಯದ ಒತ್ತಡ ಸ್ವೀಕಾರ ಮಾಡಿ ಕೆಲಸ ಮಾಡುವವರು ಸರ್ಕಾರದಲ್ಲಿರಬೇಕು. ಇಲ್ಲ ಅಂದ್ರೆ ಅವರು ಸ್ವತಂತ್ರರಿದ್ದಾರೆ ಅವರು ಖಾಸಗಿಯಲ್ಲಿ ಕೆಲಸ ಮಾಡಲಿ ಎಂದು ಸುಧಾಕರ್ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದರು.

Click to comment

Leave a Reply

Your email address will not be published. Required fields are marked *