ಊಟದ ವಿಚಾರಕ್ಕೆ ತಾಯಿ, ಮಗನ ಗಲಾಟೆ – ಕುಡಿದ ಮತ್ತಿನಲ್ಲಿ ಗುಂಡು ಹಾರಿಸಿ ತಾಯಿ, ಅಕ್ಕನ ಹತ್ಯೆ

By
1 Min Read

ಕಾರವಾರ: ಕುಡಿದ ಅಮಲಿನಲ್ಲಿ ಊಟದ ವಿಚಾರವಾಗಿ ಗಲಾಟೆ ಮಾಡಿಕೊಂಡು ತಾಯಿ ಹಾಗೂ ಅಕ್ಕನನ್ನು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕುಡಗುಂದದಲ್ಲಿ ನಡೆದಿದೆ.

ಮಂಜುನಾಥ್ ಜಯಂತ್ ನಾರಾಯಣ ಹಸಲರ್, ಕೊಲೆಗೈದ ಆರೋಪಿ. ತಾಯಿ ಪಾರ್ವತಿ ಹಾಗೂ ಅಕ್ಕ ರಮ್ಯಾ ಮೃತ ದುರ್ದೈವಿಗಳಾಗಿದ್ದಾರೆ. ಊಟದ ವಿಷಯದಲ್ಲಿ ಗಲಾಟೆ ತೆಗೆದಿದ್ದ ಮಂಜುನಾಥ್ ಮನೆಯಲ್ಲಿದ್ದ ನಾಡ ಬಂದೂಕನ್ನು ತೆಗೆದುಕೊಂಡು ತಾಯಿ ಹಾಗೂ ಅಕ್ಕನಿಗೆ ಹೊಡೆದಿದ್ದಾನೆ. ಈ ವೇಳೆ ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಸಿಂಹಕ್ಕೂ ಅಂಜದೇ ಮಾಂಸ ತಿನ್ನಿಸಿದ ರಾಕಿ ಬಾಯ್ – ವೀಡಿಯೋ ವೈರಲ್

ಇನ್ನೂ ತಂದೆ ನಾರಾಯಣ್ ಮನೆಯಲ್ಲಿ ಇರಲ್ಲದೇ ಇರುವ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ನನ್ನಿಂದ ತಪ್ಪಾಗಿದೆ, ಡಿಕೆಶಿ ಮುಖ ನೋಡಲು ಆಗ್ತಿಲ್ಲ: ಸಲೀಂ ಕಣ್ಣೀರು

Share This Article
Exit mobile version