ಶಿವಮೊಗ್ಗ: ನಾನು ಮತ್ತು ಸಂತೋಷ್ ನಡುವೆ ಗುಲಗಂಜಿಯಷ್ಟು ಭಿನ್ನಾಭಿಪ್ರಾಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾವಿಬ್ಬರು ಅಣ್ಣ ತಮ್ಮಂದಿರಂತೆ ಇದ್ದು, ಪಕ್ಷ ಬಲವರ್ಧನೆಗೆ ನಾವಿಬ್ಬರು ಕೆಲಸ ಮಾಡುತ್ತಿದ್ದೇವೆ. ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿ ಮಾಡುತ್ತಿರುವುದು ಮಾಧ್ಯಮದವರು ಎಂದು ದೂರಿದರು.
Advertisement
ಇದೇ ವೇಳೆ ಶಿಕಾರಿಪುರದ ಜನತೆ ಇಲ್ಲಿಂದಲೇ ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ನೀವು ನಾಮಪತ್ರ ಸಲ್ಲಿಸಿ ಹೋಗಿ ನಾವು ನೋಡಿಕೊಳ್ಳುತ್ತೆವೆ ಎಂದಿದ್ದಾರೆ. ಈ ಕುರಿತು ಕೇಂದ್ರದ ನಾಯಕರ ಮನವೊಲಿಸಿ ಶಿಕಾರಿಪುರದಿಂದಲೇ ಸ್ಪರ್ಧೆಮಾಡಲು ಪ್ರಯತ್ನ ಮಾಡುತ್ತೇನೆ ಎಂದರು.
Advertisement
ನಾನು ಟಿಕೆಟ್ ನೀಡುವುದಿಲ್ಲ. ಪಕ್ಷ ಟಿಕೆಟ್ ನೀಡುತ್ತದೆ. ಹೈಕಮಾಂಡ್ ಪ್ರತಿ ಕ್ಷೇತ್ರದಲ್ಲೂ ಸರ್ವೆ ನಡೆಸಿ ಟಿಕೆಟ್ ನೀಡಲಿದೆ ಎಂದರು.
Advertisement
ಕ್ಷಮೆ ಕೇಳಬೇಕು: ಕಾಗೋಡು ತಿಮ್ಮಪ್ಪರಂತಹ ಹಿರಿಯರಿಂದ ಗೋವಿನ ಬಗ್ಗೆ ಈ ರೀತಿಯ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ. ಗೋಮಾಂಸ ವಿಚಾರದಲ್ಲಿ ಒಂದು ಸಮುದಾಯದವರನ್ನು ಅವಮಾನ ಮಾಡಿದ್ದಾರೆ. ಕಾಗೋಡು ತಿಮ್ಮಪ್ಪ ತಕ್ಷಣ ಕ್ಷಮೆ ಕೇಳಬೇಕು. ಇಲ್ಲದೇ ಇದ್ದರೆ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು.