Connect with us

Bengaluru City

ಮಗ ಹುಟ್ಟಿದಂದೇ ಇನ್‍ಸ್ಟಾ ಖಾತೆ ತೆರೆದು ಫೋಟೋ ಹಾಕ್ತಿರೋ ಮಯೂರಿ

Published

on

ಬೆಂಗಳೂರು: ಮಯೂರಿ ಮುದ್ದಾಗ ಗಂಡು ಮಗುವಿಗೆ ಜನ್ಮ ನೀಡಿರುವ ವಿಚಾರವನ್ನು ಇನ್‍ಸ್ಟಾಗ್ರಾಮ್‍ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ ಇದೀಗ ಮಯೂರಿ ಮಗನಿಗಾಗಿ ಒಂದು ಇನ್‍ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದಾರೆ.

 

ಸ್ಟಾರ್‌ಗಳು ತಮ್ಮ ಮಕ್ಕಳ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಖಾತೆ ತೆರೆಯುತ್ತಾರೆ. ಆದರೆ ಸ್ಟಾರ್ ಕಿಡ್ಸ್‍ಗಳು ಸ್ವಲ್ಪ ದೊಡ್ಡವರಾದ ಮೇಲೆ ಪೋಷಕರು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯುತ್ತಾರೆ. ಆದರೆ ಕನ್ನಡದ ನಟಿ ಮಯೂರಿ ಮಗು ಹುಟ್ಟಿದ ಕೂಡಲೇ ಮಗನಿಗಾಗಿ ಇನ್ ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದಾರೆ. ಈ ವಿಚಾರವಾಗಿ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

 

View this post on Instagram

 

A post shared by mayuri (@mayurikyatari)

ನಟಿ ಮಯೂರಿ ಹಾಗೂ ಅರುಣ್ ದಂಪತಿಗೆ ಇತ್ತೀಚೆಗಷ್ಟೆ ಗಂಡು ಮಗುವಾಗಿದೆ. ಈ ವಿಷಯವನ್ನು ಈ ಸೆಲೆಬ್ರಿಟಿ ದಂಪತಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಗರ್ಭಿಣಿಯಾಗಿರುವ ದಿನದಿಂದ ಮಗು ಹುಟ್ಟುವವರೆಗೂ ಕೆಲವು ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದ ಜೋಡಿ ಇದೀಗ ಮಗು ಹುಟ್ಟಿ ಕೆಲವೇ ಕ್ಷಣಗಳಲ್ಲಿ ಒಂದು ಇನ್‍ಸ್ಟಾಗ್ರಾಮ್ ಖಾತೆಯನ್ನು ಮುದ್ದು ಕಂದನಿಗಾಗಿ ತೆರೆದಿದ್ದಾರೆ.

 

View this post on Instagram

 

A post shared by mayuri (@mayurikyatari)

ಸ್ಟಾರ್ ಬಾಯ್ ಹೆಸರಿನಲ್ಲಿ ಮಗನಿಗಾಗಿ ಇನ್‍ಸ್ಟಾಗ್ರಾಮ್ ಖಾತೆ ತೆರೆದಿದ್ದಾರೆ. ಸ್ಟಾರ್ ಕಿಡ್ ಖಾತೆಗೆ ಈಗಾಗಲೇ 2 ಸಾವಿರಕ್ಕೂ ಅಧಿಕ ಮಂದಿ ಹಿಂಬಾಲಕರಿದ್ದಾರೆ. ಮಯೂರಿ ಮಗನ ತುಂಟಾಟ ಕೆಲವು ವೀಡಿಯೋ,  ಫೋಟೋ ಮತ್ತು ಕೆಲವು ಹೊಸ ವಿಚಾರಗಳ ಕುರಿತಾಗಿ ಮಯೂರಿ ಹೊಸ ಖಾತೆ ಮೂಲಕವಾಗಿ ಅಭಿಮಾನಿಗಳನ್ನು ತಲುಪಲಿದ್ದಾರೆ.

 

View this post on Instagram

 

A post shared by Starboy⭐️ (@starboii_1111)

ಈಗ ಮಯೂರಿ ಮಗುವಿನೊಂದಿಗಿನ ಹೊಸ ಫೋಟೋವನ್ನು  ಪೋಸ್ಟ್ ಮಾಡಿದ್ದಾರೆ. ಮಗುವನ್ನು ಎಳೆ ಬಿಸಿಲಿನಲ್ಲಿ ಎತ್ತಿಕೊಂಡಿರುವ ಮಯೂರಿ ಸನ್ ಬಾತ್ ಎಂದು ಬರೆದುಕೊಂಡಿದ್ದಾರೆ. ಮುದ್ದು ಮಗುವಿನ ಫೋಟೋವನ್ನು ನೋಡಿದ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

Click to comment

Leave a Reply

Your email address will not be published. Required fields are marked *